ಭೂತಾನ್: ಭಾರತ ಅನುದಾನಿತ ತಾಯಿ, ಮಕ್ಕಳ ಆಸ್ಪತ್ರೆ ಉದ್ಘಾಟಿಸಿದ ಪ್ರಧಾನಿ ಮೋದಿ!
ಭಾರತದ ಅನುದಾನದೊಂದಿಗೆ ಭೂತಾನ್ ನ ಥಿಂಪುವಿನಲ್ಲಿ ನಿರ್ಮಿಸಲಾಗಿರುವ ಗ್ಯಾಲ್ಟ್ಸುನ್ ಜೆಟ್ಸನ್ ಪೆಮಾ ವಾಂಗ್ಚುಕ್ ತಾಯಿ, ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಿ ಮೋದಿ ಶನಿವಾರ ಬೆಳಗ್ಗೆ ಭೂತಾನ್ ಪ್ರಧಾನಿ ಭೂತಾನ್ನ ದಾಶೋ ಶೆರಿಂಗ್ ಟೊಬ್ಗೆ ಅವರೊಂದಿಗೆ ಲೋಕಾರ್ಪಣೆ ಮಾಡಿದರು.

ಥಿಂಪು: ಭಾರತದ ಅನುದಾನದೊಂದಿಗೆ ಭೂತಾನ್ ನ ಥಿಂಪುವಿನಲ್ಲಿ ನಿರ್ಮಿಸಲಾಗಿರುವ ಗ್ಯಾಲ್ಟ್ಸುನ್ ಜೆಟ್ಸನ್ ಪೆಮಾ ವಾಂಗ್ಚುಕ್ ತಾಯಿ, ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಪ್ರಧಾನಿ ಮೋದಿ ಶನಿವಾರ ಬೆಳಗ್ಗೆ ಭೂತಾನ್ ಪ್ರಧಾನಿ ಭೂತಾನ್ನ ದಾಶೋ ಶೆರಿಂಗ್ ಟೊಬ್ಗೆ ಅವರೊಂದಿಗೆ ಲೋಕಾರ್ಪಣೆ ಮಾಡಿದರು. ಅತ್ಯಾಧುನಿಕ ಆಸ್ಪತ್ರೆಯ ನಿರ್ಮಾಣಕ್ಕೆ ಸಂಪೂರ್ಣ ಧನಸಹಾಯ ನೀಡಿದ ಭಾರತ ಸರ್ಕಾರಕ್ಕೆ ಭೂತಾನ್ ಪ್ರಧಾನಿ ಟೊಬ್ಗೆ ಕೃತಜ್ಞತೆ ಸಲ್ಲಿಸಿದರು.

ಪ್ರಧಾನಿ ಮೋದಿಗೆ ಭೂತಾನ್ ನ ಅತ್ಯುನ್ನತ ನಾಗರಿಕ ಗೌರವ; 'ಆರ್ಡರ್ ಆಫ್ ದಿ ಡ್ರಕ್ ಗ್ಯಾಲ್ಪೊ' ಪ್ರಶಸ್ತಿ ಪ್ರದಾನ
ಆಸ್ಪತ್ರೆಯ ಉದ್ಘಾಟನೆಗೂ ಮುನ್ನ ANI ಜೊತೆ ಮಾತನಾಡಿದ ಭೂತಾನ್ ಪಿಎಂ ಟೊಬ್ಗೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭಾರತ ಸರ್ಕಾರದಿಂದ ಸಂಪೂರ್ಣ ಹಣ ನೀಡಲಾಗಿದೆ. ಇದು ನಮ್ಮ ತಾಯಂದಿರು ಮತ್ತು ಮಕ್ಕಳ ಉತ್ತಮ ಆರೋಗ್ಯವನ್ನು ಖಾತ್ರಿಪಡಿಸುವ ಜೊತೆಗೆ ಭೂತಾನ್ನ ಜೀವನವನ್ನು ಸುಧಾರಿಸುವಲ್ಲಿ ಮಹತ್ವಪೂರ್ಣ ಕೊಡುಗೆ ನೀಡಲಿದೆ ಎಂದರು.
ಪ್ರಧಾನಿ ಮೋದಿ ಭೇಟಿ ಸಂದರ್ಭದಲ್ಲಿ ಭೂತಾನ್ನ 13 ನೇ ಪಂಚವಾರ್ಷಿಕ ಯೋಜನೆಗೆ 10,000 ಕೋಟಿಗಳ ಗಣನೀಯ ನೆರವು ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಇದು ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಭೂತಾನ್ಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರನ್ನು "ಸ್ನೇಹಿತ ಮತ್ತು ಹಿರಿಯ ಸಹೋದರ" ಎಂದು ಟೊಬ್ಗೆ ಶ್ಲಾಘಿಸಿದ್ದಾರೆ. ಇದರೊಂದಿಗೆ ಎರಡು ದಿನಗಳ ಭೂತಾನ್ ಪ್ರವಾಸವನ್ನು ಯಶಸ್ವಿಗೊಳಿಸಿದ ಪ್ರಧಾನಿ ಮೋದಿ ಮರಳಿ ಥಿಂಪುವಿನಿಂದ ಭಾರತಕ್ಕೆ ಹೊರಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


