ದುರಾದೃಷ್ಟವಂತ: 33 ಕೋಟಿ ರೂ. ಲಾಟರಿ ಹೊಡೆದ ಖುಷಿಯಲ್ಲಿ ಹೃದಯಾಘಾತವಾಗಿ ವ್ಯಕ್ತಿ ಮೃತ, ವಿಡಿಯೋ ವೈರಲ್!
ಜೀವನವನ್ನು ಬದಲಾಯಿಸುವ ಖುಷಿಯ ಸಮಯ ಹೆಚ್ಚು ಕಾಲ ಉಳಿಯಲಿಲ್ಲ. ಈ ಖುಷಿಯನ್ನು ಸಂಭ್ರಮಿಸುವ ವೇಳೆಯೇ ಹೃದಯಾಘಾತವಾಗಿ ವ್ಯಕ್ತಿ ಕುಸಿದು ಬಿದ್ದಿದ್ದಾರೆ.

ಅದೃಷ್ಟ ಎಂಬುವುದು ಕೆಲವೊಮ್ಮೆ ಕೈಯಿಡಿದರೆ, ಅನುಭವಿಸುವ ಯೋಗ ಹಣೆಯಲ್ಲಿ ಇಲ್ಲದಿದ್ದಾಗ ಈ ರೀತಿ ಆಗುತ್ತದೆ. ಹೌದು, ಸಿಂಗಾಪುರದ ಮರೀನಾ ಬೇ ಸ್ಯಾಂಡ್ಸ್ ಕ್ಯಾಸಿನೊದಲ್ಲಿ 4 ಮಿಲಿಯನ್ (ಭಾರತೀಯ ರೂಪಾಯಿಯಲ್ಲಿ 33 ಕೋಟಿ) ಜಾಕ್ಪಾಟ್ ಗೆದ್ದ ವ್ಯಕ್ತಿಯೊಬ್ಬ ಗೆದ್ದ ಖುಷಿಯಲ್ಲಿ ಹೃದಯಾಘಾತವಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಜೀವನವನ್ನು ಬದಲಾಯಿಸುವ ಖುಷಿಯ ಸಮಯ ಹೆಚ್ಚು ಕಾಲ ಉಳಿಯಲಿಲ್ಲ. ಈ ಖುಷಿಯನ್ನು ಸಂಭ್ರಮಿಸುವ ವೇಳೆಯೇ ಹೃದಯಾಘಾತವಾಗಿ ವ್ಯಕ್ತಿ ಕುಸಿದು ಬಿದ್ದಿದ್ದಾರೆ. ಈ ವೇಳೆ ಕ್ಯಾಸಿನೊ ಸಿಬ್ಬಂದಿ ಆತನಿಗೆ ಪ್ರಥಮ ಚಿಕಿತ್ಸೆ ನೀಡಿ ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನಗಳು ವ್ಯರ್ಥವಾಯಿತು.
ಲಾಸ್ ವೇಗಾಸ್ ಸ್ಯಾಂಡ್ಸ್ ನಿರ್ವಹಿಸುತ್ತಿರುವ ಐಕಾನಿಕ್ ಕ್ಯಾಸಿನೊದಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕ್ಯಾಸಿನೊ ಉದ್ಯಮಕ್ಕೆ ಸಂಬಂಧಿಸಿದ ಸಂಭಾವ್ಯ ಅಪಾಯಗಳ ಸುತ್ತ ವ್ಯಾಪಕವಾದ ಕಾಳಜಿ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ. ಈ ಘಟನೆಯು ಜೂಜಿನ ಸಂಭವನೀಯ ಅಪಾಯಗಳನ್ನು ಎತ್ತಿ ತೋರಿಸಿದೆ.
ಕ್ಯಾಸಿನೊಗಳಲ್ಲಿನ ದೊಡ್ಡ ನಗದು ವಹಿವಾಟುಗಳಿಗೆ ಸಂಬಂಧಿಸಿದ ಅಪಾಯಗಳನ್ನು ಅಧಿಕಾರಿಗಳು ಒಪ್ಪಿಕೊಂಡರೂ, ಗೃಹ ವ್ಯವಹಾರಗಳ ಸಚಿವಾಲಯ, ಕಾನೂನು ಸಚಿವಾಲಯ ಮತ್ತು ಸಿಂಗಾಪುರದ ಹಣಕಾಸು ಪ್ರಾಧಿಕಾರದ ಇತ್ತೀಚಿನ ವರದಿಯು ಅಪರಾಧ ಚಟುವಟಿಕೆಗಳಲ್ಲಿ ನೇರ ಪಾಲ್ಗೊಳ್ಳುವಿಕೆ ಅಪರೂಪ ಎಂದು ಪ್ರತಿಪಾದಿಸಿದೆ. ಆದಾಗ್ಯೂ, ಹಣ ವರ್ಗಾವಣೆ ಮತ್ತು ಜೂಜಿನ ವ್ಯಸನವನ್ನು ಎದುರಿಸಲು ಕಠಿಣವಾದ ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಕ್ರಮಗಳು ಆಗುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



