ರಷ್ಯಾ ವಿಪಕ್ಷ ನಾಯಕ, ಪುಟಿನ್ ಟೀಕಾಕಾರ ಅಲೆಕ್ಸಿ ನವಲ್ನಿ ಜೈಲಿನಲ್ಲಿ ನಿಧನ
ರಷ್ಯಾ ವಿಪಕ್ಷ ನಾಯಕ, ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಟೀಕಾಕಾರ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಮೃತಪಟ್ಟಿದ್ದಾರೆ.

ಮಾಸ್ಕೋ: ರಷ್ಯಾ ವಿಪಕ್ಷ ನಾಯಕ, ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಟೀಕಾಕಾರ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಮೃತಪಟ್ಟಿದ್ದಾರೆ. ಅಲ್ ಜಝೀರ ಈ ಬಗ್ಗೆ ಶುಕ್ರವಾರ (ಫೆ.16 ರಂದು) ರಷ್ಯಾದ ಸರ್ಕಾರಿ ಮಾಧ್ಯಮವನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ. ಯಮಲೋ-ನೆನೆಟ್ಸ್ ಪ್ರಾಂತ್ಯದಲ್ಲಿ ರಷ್ಯಾ ವಿಪಕ್ಷ ನಾಯಕ ಜೈಲು ಶಿಕ್ಷೆ ಅನುಭವಿಸುತ್ತಿದ್ದರು.
ವಾಕಿಂಗ್ ಬಳಿಕ ಅಲೆಕ್ಸಿ ನವಲ್ನಿ ಅಸ್ವಸ್ಥರಾದರು ತಕ್ಷಣವೇ ಪ್ರಜ್ಞಾಹೀನರಾದರು. ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರಾದರೂ ಅವರು ಬದುಕಿ ಉಳಿಯಲಿಲ್ಲ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಜೈಲು ಶಿಕ್ಷೆಗೆ ಗುರಿಯಾಗಿದ್ದ ಖೈದಿಯ ಸಾವನ್ನು ವೈದ್ಯರು ದೃಢಪಡಿಸಿದ್ದಾರೆ. ಸಾವಿಗೆ ನಿಖರ ಕಾರಣಗಳು ತಿಳಿದುಬಂದಿಲ್ಲ.
ಈ ಜನವರಿಯಲ್ಲಿ ಹೊಸ ವರ್ಷದ ಸಂದರ್ಭದಲ್ಲಿ, ಅವರು ಸಾಮಾಜಿಕ ಮಾಧ್ಯಮದ ಹೇಳಿಕೆ ಬಿಡುಗಡೆ ಮಾಡಿದ್ದ ಅಲೆಕ್ಸಿ ನವಲ್ನಿ, ತಾವು ಜೈಲಿನಲ್ಲಿ ಒಂಟಿತನವನ್ನು ಅನುಭವಿಸುತ್ತಿಲ್ಲ ಮತ್ತು 'ಉತ್ತಮ' ಮನಸ್ಥಿತಿಯಲ್ಲಿರುವುದಾಗಿ ಹೇಳಿದ್ದರು. ಆದರೆ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ವೈಯಕ್ತಿಕವಾಗಿ ಸಮಯ ಕಳೆಯುವುದನ್ನು ಕಳೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಉಗ್ರವಾದದ ಆರೋಪದ ಹಿನ್ನೆಲೆಯಲ್ಲಿ ರಷ್ಯಾ ಕೋರ್ಟ್ ಅವರಿಗೆ 19 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. 2021 ರ ಜನವರಿಯಿಂದ ಅವರು ಜೈಲುವಾಸ ಅನುಭವಿಸುತ್ತಿದ್ದರು. ತಮ್ಮ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾದದ್ದು ಎಂದು ಅಲೆಕ್ಸಿ ನವಲ್ನಿ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




