ವಿದೇಶ

ಅಂಡರ್ವೇರ್ ಬಳಸಿ ಆತ್ಮಹತ್ಯೆಗೆ ಯತ್ನಿಸಿದ್ದ ದಕ್ಷಿಣ ಕೊರಿಯಾದ ಮಾಜಿ ರಕ್ಷಣಾ ಸಚಿವ!

ಸಿಯೋಲ್‌ನ ಬಂಧನ ಕೇಂದ್ರದಲ್ಲಿ ಕಿಮ್ ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಅವರನ್ನು ರಕ್ಷಿಸಲಾಗಿದ್ದು ಈಗ ಅವರು ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಕೊರಿಯಾ ತಿದ್ದುಪಡಿ ಸೇವಾ ಆಯುಕ್ತ ಜನರಲ್ ಶಿನ್ ಯೋಂಗ್ ಹೈ ತಿಳಿಸಿದರು.

ಅಂಡರ್ವೇರ್ ಬಳಸಿ ಆತ್ಮಹತ್ಯೆಗೆ ಯತ್ನಿಸಿದ್ದ ದಕ್ಷಿಣ ಕೊರಿಯಾದ ಮಾಜಿ ರಕ್ಷಣಾ ಸಚಿವ!
ಕಿಮ್ ಯೋಂಗ್ ಹ್ಯುನ್
Published On :

ದಕ್ಷಿಣ ಕೊರಿಯಾದಲ್ಲಿ ಮಿಲಿಟರಿ ಆಡಳಿತ ಅನುಷ್ಠಾನದ ಕುರಿತು ತನಿಖೆ ನಡೆಯುತ್ತಿದೆ. ಏತನ್ಮಧ್ಯೆ, ಈ ಪ್ರಕರಣದಲ್ಲಿ ಬಂಧಿತರಾದ ಮಾಜಿ ರಕ್ಷಣಾ ಸಚಿವ ಕಿಮ್ ಯೋಂಗ್ ಹ್ಯುನ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ರಕ್ಷಿಸಲಾಗಿದೆ. ಅಧ್ಯಕ್ಷ ಯುನ್ ಸುಕ್ ಯೋಲ್ ಅವರ 'ತುರ್ತು ಮಿಲಿಟರಿ ಆಡಳಿತ' ಆದೇಶವನ್ನು ಅನುಷ್ಠಾನಗೊಳಿಸುವಲ್ಲಿ ಕಿಮ್ ಯೋಂಗ್ ಹ್ಯುನ್ ಪಾತ್ರದ ತನಿಖೆಗಾಗಿ ಕಳೆದ ವಾರ ಇಬ್ಬರು ಉನ್ನತ ದಕ್ಷಿಣ ಕೊರಿಯಾದ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ.

ಸಿಯೋಲ್‌ನ ಬಂಧನ ಕೇಂದ್ರದಲ್ಲಿ ಕಿಮ್ ಆತ್ಮಹತ್ಯೆಗೆ ಯತ್ನಿಸಿದರು. ಆದರೆ ಅವರನ್ನು ರಕ್ಷಿಸಲಾಗಿದ್ದು ಈಗ ಅವರು ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಕೊರಿಯಾ ತಿದ್ದುಪಡಿ ಸೇವಾ ಆಯುಕ್ತ ಜನರಲ್ ಶಿನ್ ಯೋಂಗ್ ಹೈ ತಿಳಿಸಿದರು. ದಂಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಿಯೋಲ್ ನ್ಯಾಯಾಲಯವು ಕಿಮ್ ವಿರುದ್ಧ ವಾರಂಟ್ ಹೊರಡಿಸಿದ ನಂತರ ಬುಧವಾರ ಅವರನ್ನು ಬಂಧಿಸಲಾಯಿತು. ಡಿಸೆಂಬರ್ 3ರಂದು ತುರ್ತು ಮಿಲಿಟರಿ ಆಡಳಿತಕ್ಕೆ ಆದೇಶ ನೀಡಿದ ನಂತರ ಬಂಧಿಸಲಾದ ಮೊದಲ ವ್ಯಕ್ತಿ ಕಿಮ್ ಆಗಿದ್ದಾರೆ.

ದಕ್ಷಿಣ ಕೊರಿಯಾದ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ವಿರೋಧ ಪಕ್ಷ ಡೆಮಾಕ್ರಟಿಕ್ ಪಕ್ಷವು ಯೂನ್ ವಿರುದ್ಧ ದೋಷಾರೋಪಣೆಗೆ ಹೊಸ ನಿರ್ಣಯವನ್ನು ಮಂಡಿಸುವ ಕೆಲವೇ ಗಂಟೆಗಳ ಮೊದಲು ಈ ಬೆಳವಣಿಗೆ ಸಂಭವಿಸಿದೆ. ಅಲ್ಲದೆ, ದೇಶದ ಕಾನೂನು ಜಾರಿ ಸಂಸ್ಥೆಗಳು ಅಧ್ಯಕ್ಷರ ಘೋಷಣೆಯು ದಂಗೆಯೇ ಅಥವಾ ಇಲ್ಲವೇ ಎಂಬುದರ ಕುರಿತು ತನಿಖೆ ನಡೆಸುತ್ತಿದೆ. ಕಳೆದ ಶನಿವಾರ ಆಡಳಿತ ಪಕ್ಷವು ಮತದಾನವನ್ನು ಬಹಿಷ್ಕರಿಸಿದ್ದರಿಂದ ಮೊದಲ ದೋಷಾರೋಪಣೆ ಪ್ರಯತ್ನ ವಿಫಲವಾಯಿತು.

ಶನಿವಾರದಂದು ಹೊಸ ಪ್ರಸ್ತಾಪದ ಮೇಲೆ ಮತದಾನ ನಡೆಸುವುದು ತನ್ನ ಗುರಿಯಾಗಿದೆ ಎಂದು ಡೆಮಾಕ್ರಟಿಕ್ ಪಕ್ಷ ಹೇಳಿದೆ. ರಾಷ್ಟ್ರೀಯ ಪೊಲೀಸ್ ಏಜೆನ್ಸಿ ಕಮಿಷನರ್ ಜನರಲ್ ಚೋ ಜಿ-ಹೊ ಮತ್ತು ರಾಜಧಾನಿ ಸಿಯೋಲ್‌ನ ಮೆಟ್ರೋಪಾಲಿಟನ್ ಪೊಲೀಸ್ ಏಜೆನ್ಸಿಯ ಮುಖ್ಯಸ್ಥ ಕಿಮ್ ಬಾಂಗ್-ಸಿಕ್ ಅವರನ್ನು ಸಿಯೋಲ್‌ನ ನಾಮ್‌ಡೇಮುನ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸುವಲ್ಲಿ ಅವರ ಪಾತ್ರದ ಕುರಿತು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧ್ಯಕ್ಷರ ತುರ್ತು ಮಿಲಿಟರಿ ಆಡಳಿತ ಆದೇಶ ವಿರುದ್ಧವಾಗಿ ಸಂಸದರು ಮತ ಚಲಾಯಿಸುವುದನ್ನು ತಡೆಯಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ನಂಬಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.