ವಿದೇಶ

ಭಾರತದಲ್ಲಿ ಅಸ್ಥಿರತೆಗೆ ಯತ್ನ ಆರೋಪ 'ಬೇಸರ ತರಿಸುವಂತಿವೆ': BJP ವಿರುದ್ಧ ಅಮೆರಿಕ ಅಸಮಾಧಾನ

ಅಮೆರಿಕ ರಾಯಭಾರ ಕಚೇರಿಯ ವಕ್ತಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಅಮೆರಿಕ ವಿರುದ್ಧದ ಆರೋಪಗಳು ‘ಬೇಸರ ತರಿಸುವಂತಿವೆ. ಅಮೆರಿಕದ ಸರ್ಕಾರವು ವಿಶ್ವದ ಎಲ್ಲೆಡೆ ಮಾಧ್ಯಮ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುತ್ತಾ ಬಂದಿದೆ.

ಭಾರತದಲ್ಲಿ ಅಸ್ಥಿರತೆಗೆ ಯತ್ನ ಆರೋಪ 'ಬೇಸರ ತರಿಸುವಂತಿವೆ': BJP ವಿರುದ್ಧ ಅಮೆರಿಕ ಅಸಮಾಧಾನ
ಮೋದಿ ಬೈಡನ್
Published On :

ವಾಷಿಂಗ್ಟನ್: ಭಾರತದಲ್ಲಿ ಅಸ್ಥಿರತೆಗೆ ಯತ್ನಿಸುತ್ತಿವೆ ಎಂಬ ಬಿಜೆಪಿ ಆರೋಪಗಳನ್ನು ನಿರಾಕರಿಸಿರುವ ಅಮೆರಿಕ ಇಂತಹ ಆರೋಪಗಳು ಬೇಸರತರಿಸುವಂತಿವೆ ಎಂದು ಹೇಳಿದೆ.

ಅಮೆರಿಕದ ವಿದೇಶಾಂಗ ಸಚಿವಾಲಯದಿಂದ ದೇಣಿಗೆ ಪಡೆಯುವ ಸಂಘಟನೆಗಳು ಹಾಗೂ ಅಮೆರಿಕದಲ್ಲಿ ಸರ್ಕಾರದ ಹೊರತಾಗಿದ್ದೂ ಅಧಿಕಾರದ ಮೇಲೆ ನಿಯಂತ್ರಣ ಇರುವ ಕೂಟಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಅವರನ್ನು ಗುರಿಯಾಗಿಸಿಕೊಂಡು, ಭಾರತದಲ್ಲಿ ಅಸ್ಥಿರತೆ ಮೂಡಿಸುವ ಯತ್ನಗಳ ಹಿಂದೆ ಇವೆ ಎಂದು ಬಿಜೆಪಿ ಮಾಡಿರುವ ಆರೋಪವನ್ನು ಅಮೆರಿಕ ಶನಿವಾರ ಅಲ್ಲಗಳೆದಿದೆ.

ಅಮೆರಿಕ ರಾಯಭಾರ ಕಚೇರಿಯ ವಕ್ತಾರರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, 'ಅಮೆರಿಕ ವಿರುದ್ಧದ ಆರೋಪಗಳು ‘ಬೇಸರ ತರಿಸುವಂತಿವೆ. ಅಮೆರಿಕದ ಸರ್ಕಾರವು ವಿಶ್ವದ ಎಲ್ಲೆಡೆ ಮಾಧ್ಯಮ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುತ್ತಾ ಬಂದಿದೆ. ಭಾರತದ ಆಡಳಿತಾರೂಢ ಪಕ್ಷವು ಇಂತಹ ಆರೋಪಗಳನ್ನು ಮಾಡುತ್ತದೆ ಎಂಬುದು ಬೇಸರ ಮೂಡಿಸುವಂತಹ ಸಂಗತಿ.

ಪತ್ರಕರ್ತರ ಸಾಮರ್ಥ್ಯ ವೃದ್ಧಿ, ವೃತ್ತಿಪರತೆಯ ಬೆಳವಣಿಗೆಗೆ ನೆರವಾಗುವ ಕಾರ್ಯಕ್ರಮಗಳ ವಿಚಾರವಾಗಿ ಅಮೆರಿಕದ ಸರ್ಕಾರವು ಸ್ವತಂತ್ರವಾದ ಸಂಘಟನೆಗಳ ಜೊತೆ ಕೆಲಸ ಮಾಡುತ್ತದೆ. ಆದರೆ, ಈ ಕಾರ್ಯಕ್ರಮಗಳು ಸಂಪಾದಕೀಯ ತೀರ್ಮಾನದ ಮೇಲೆ ಪ್ರಭಾವ ಬೀರುವುದಿಲ್ಲ ಹಾಗೂ ಇಂತಹ ಸಂಘಟನೆಗಳ ನಡೆ ಏನಿರಬೇಕು ಎಂಬುದರ ಮೇಲೆ ಪ್ರಭಾವ ಉಂಟುಮಾಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಅಮೆರಿಕದಲ್ಲಿ ಸರ್ಕಾರದ ಹೊರತಾಗಿದ್ದೂ ಅಧಿಕಾರದ ಮೇಲೆ ನಿಯಂತ್ರಣ ಇರುವ ಕೂಟಗಳು (ಡೀಪ್‌ ಸ್ಟೇಟ್) ಭಾರತದ ಪ್ರತಿಷ್ಠೆಗೆ ಧಕ್ಕೆ ತರಲು, ಒಸಿಸಿಆರ್‌ಪಿ (ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿಗಾರಿಕೆ ಯೋಜನೆ) ಮಾಧ್ಯಮ ಪೋರ್ಟಲ್‌ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಜೊತೆ ಕೈಜೋಡಿಸಿವೆ ಎಂದು ಬಿಜೆಪಿಯು ಗುರುವಾರ ಆರೋಪಿಸಿತ್ತು. ಅಲ್ಲದೆ ಒಸಿಸಿಆರ್‌ಪಿ ವರದಿಗಳನ್ನು ಬಳಸಿ ರಾಹುಲ್ ಅವರು ಅದಾನಿ ಸಮೂಹದ ಮೇಲೆ ವಾಗ್ದಾಳಿ ನಡೆಸುವುದನ್ನು, ಸಮೂಹವು ಕೇಂದ್ರ ಸರ್ಕಾರಕ್ಕೆ ಹತ್ತಿರವಾಗಿದೆ ಎಂದು ಆರೋಪಿಸುವುದನ್ನು ಬಿಜೆಪಿಯು ಉಲ್ಲೇಖಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.