ರಷ್ಯಾ ಜೊತೆ ಸೇರಿ 400ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದ ಸಿರಿಯಾ ಸೇನೆ!
ಮಿಲಿಟರಿ ಕೇಂದ್ರೀಕೃತ ವಾಯು, ಕ್ಷಿಪಣಿ ಮತ್ತು ಫಿರಂಗಿ ದಾಳಿಗಳು 'ಭಯೋತ್ಪಾದಕರಿಗೆ' ಸೇರಿದ ಐದು ಕಮಾಂಡ್ ಸೆಂಟರ್‌ಗಳು ಮತ್ತು ಏಳು ಮದ್ದುಗುಂಡು ಡಿಪೋಗಳನ್ನು ನಾಶಪಡಿಸಿವೆ.

ಡಮಾಸ್ಕಸ್: ಉತ್ತರ ಪ್ರಾಂತ್ಯದ ಅಲೆಪ್ಪೊ ಮತ್ತು ಇಡ್ಲಿಬ್‌ನಲ್ಲಿ ಬಂಡುಕೋರ ಪಡೆಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವುದಾಗಿ ಸಿರಿಯಾ ಸೇನೆ ಪ್ರಕಟಿಸಿದ್ದು, ಕಳೆದ 24 ಗಂಟೆಗಳಲ್ಲಿ ರಷ್ಯಾದ ಪಡೆಗಳ ಬೆಂಬಲದೊಂದಿಗೆ 400ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿದೆ ಎಂದು ಹೇಳಿಕೊಂಡಿದೆ.
ಸೇನೆ ಮತ್ತು ಸಶಸ್ತ್ರ ಪಡೆಗಳ ಜನರಲ್ ಕಮಾಂಡ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಮಿಲಿಟರಿ ಕೇಂದ್ರೀಕೃತ ವಾಯು, ಕ್ಷಿಪಣಿ ಮತ್ತು ಫಿರಂಗಿ ದಾಳಿಗಳು 'ಭಯೋತ್ಪಾದಕರಿಗೆ' ಸೇರಿದ ಐದು ಕಮಾಂಡ್ ಸೆಂಟರ್‌ಗಳು ಮತ್ತು ಏಳು ಮದ್ದುಗುಂಡು ಡಿಪೋಗಳನ್ನು ನಾಶಪಡಿಸಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕಳೆದ 24 ಗಂಟೆಗಳಲ್ಲಿ, ನಮ್ಮ ಸಶಸ್ತ್ರ ಪಡೆಗಳು, ಸಿರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ನೇಹಪರ ರಷ್ಯಾದ ಪಡೆಗಳ ಸಹಕಾರದೊಂದಿಗೆ, ಅಲೆಪ್ಪೊ ಮತ್ತು ಇಡ್ಲಿಬ್‌ನ ಗ್ರಾಮಾಂತರ ಪ್ರದೇಶದಲ್ಲಿ ಭಯೋತ್ಪಾದಕ ಸ್ಥಾನಗಳು, ಅವರ ಗೋದಾಮುಗಳು, ಸರಬರಾಜು ಮಾರ್ಗಗಳ ಮೇಲೆ ವೈಮಾನಿಕ, ಕ್ಷಿಪಣಿ ಮತ್ತು ಫಿರಂಗಿ ದಾಳಿ ಮಾಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಸಿರಿಯನ್ ಪಡೆಗಳು ಅಲೆಪ್ಪೊ, ಹಮಾ ಮತ್ತು ಇಡ್ಲಿಬ್ ಪ್ರಾಂತ್ಯಗಳ ಗ್ರಾಮಾಂತರ ಭಾಗಗಳಲ್ಲಿ ಭಯೋತ್ಪಾದಕರನ್ನು ಸುತ್ತುವರಿಯಲು, ಅವರು ಪ್ರವೇಶಿಸಿದ ಪ್ರದೇಶಗಳಿಂದ ಹೊರಹಾಕಲು ಸಾರ್ವಜನಿಕರನ್ನು ಸಂಪೂರ್ಣವಾಗಿ ಸುರಕ್ಷಿತವಾಗಿರಿಸಲು ಮತ್ತು ಮುಂದಿನ ದಾಳಿಯ ಕುರಿತಂತೆ ಹೊಸ ಯೋಜನೆ ಕೈಗೊಳ್ಳಲಾಗಿದೆ. ಹೆಚ್ಚುವರಿ ಸೇನೆಯನ್ನು ನಿಜಯೋಜಿಸಲಾಗುತ್ತಿದೆ ಎಂದು ಹೇಳಿಕೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



