ವಿದೇಶ

ಸೆಪ್ಟೆಂಬರ್ ನಲ್ಲಿ ಜಪಾನ್ ಪ್ರಧಾನಿ ಕಿಶಿದಾ ರಾಜೀನಾಮೆ; ಮರು ಚುನಾವಣೆ ಬಯಸದಿರಲು ನಿರ್ಧಾರ

ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ತಮ್ಮ ಸ್ಥಾನಕ್ಕೆ ಸೆಪ್ಟೆಂಬರ್ ನಲ್ಲಿ ರಾಜೀನಾಮೆ ನೀಡಲಿದ್ದಾರೆ. ಹಗರಣಗಳು ಹಾಗೂ ಬೆಲೆ ಏರಿಕೆಯ ನಡುವೆ ಪ್ರಧಾನಿ ಹುದ್ದೆಯಲ್ಲಿ ಕಿಶಿದಾ 3 ವರ್ಷಗಳ ಕಾಲ ಪ್ರಧಾನಿಯಾಗಿದ್ದಾರೆ.

ಸೆಪ್ಟೆಂಬರ್ ನಲ್ಲಿ ಜಪಾನ್ ಪ್ರಧಾನಿ ಕಿಶಿದಾ ರಾಜೀನಾಮೆ; ಮರು ಚುನಾವಣೆ ಬಯಸದಿರಲು ನಿರ್ಧಾರ
ಫುಮಿಯೊ ಕಿಶಿಡಾ — online desk
Published On :

ಟೋಕಿಯೋ: ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ತಮ್ಮ ಸ್ಥಾನಕ್ಕೆ ಸೆಪ್ಟೆಂಬರ್ ನಲ್ಲಿ ರಾಜೀನಾಮೆ ನೀಡಲಿದ್ದಾರೆ. ಹಗರಣಗಳು ಹಾಗೂ ಬೆಲೆ ಏರಿಕೆಯ ನಡುವೆ ಪ್ರಧಾನಿ ಹುದ್ದೆಯಲ್ಲಿ ಕಿಶಿದಾ 3 ವರ್ಷಗಳ ಕಾಲ ಪ್ರಧಾನಿಯಾಗಿದ್ದಾರೆ.

ಕಿಶಿದಾಗೆ ಸಾರ್ವಜನಿಕ ಬೆಂಬಲ ಕ್ಷೀಣಿಸುತ್ತಿದ್ದು, ಮರು ಚುನಾವಣೆ ಬಯಸದಿರಲು ಲಿಬರಲ್ ಡೆಮಾಕ್ರೆಟಿಕ್ ಪಕ್ಷದ ನಾಯಕ ನಿರ್ಧರಿಸಿದ್ದಾರೆ ಎಂದು ಸಾರ್ವಜನಿಕ ಪ್ರಸಾರಕ NHK ಸೇರಿದಂತೆ ಜಪಾನಿನ ಮಾಧ್ಯಮವು ಹಿರಿಯ ಆಡಳಿತ ಸಿಬ್ಬಂದಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.

LDP ವಕ್ತಾರರು ಈ ವರದಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಕಿಶಿದಾ ಅವರು ಪದವಿ ತ್ಯಜಿಸುವ ನಿರ್ಧಾರ, ಪಕ್ಷದ ಮುಖ್ಯಸ್ಥರ ಸ್ಥಾನಕ್ಕೆ ಮತ್ತು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಗೆ ಹೊಸ ನಾಯಕನ ಆಯ್ಕೆ ಮಾಡಲು ಸ್ಪರ್ಧೆಯನ್ನು ಉಂಟುಮಾಡಲಿದೆ.

LDP ಆಯ್ಕೆ ಮಾಡುವ ಕಿಶಿದಾ ಉತ್ತರಾಧಿಕಾರಿಗೆ ಜೀವನ ವೆಚ್ಚದಲ್ಲಿ ಹೆಚ್ಚಳ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಸವಾಲಿನ ಸಂಗತಿಯಾಗಿರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.