ಇನ್ನು ದುಡಿದು ತಂದು ಊಟ ಹಾಕಲು ಸಾಧ್ಯವಿಲ್ಲ: ಹೆಂಡತಿ ಮತ್ತು 7 ಅಪ್ರಾಪ್ತ ಮಕ್ಕಳನ್ನು ಕೊಚ್ಚಿ ಕೊಂದ ಪಾಪಿ!
ಪತಿಯೋರ್ವ ತನ್ನ ಪತ್ನಿ ಮತ್ತು ಏಳು ಅಪ್ರಾಪ್ತ ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭಯಾನಕ ಘಟನೆಯೊಂದು ಪಾಕಿಸ್ತಾನದ ಪಂಜಾಬ್ ನಲ್ಲಿ ಬೆಳಕಿಗೆ ಬಂದಿದೆ.

ಲಾಹೋರ್ : ಪತಿಯೋರ್ವ ತನ್ನ ಪತ್ನಿ ಮತ್ತು ಏಳು ಅಪ್ರಾಪ್ತ ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭಯಾನಕ ಘಟನೆಯೊಂದು ಪಾಕಿಸ್ತಾನದ ಪಂಜಾಬ್ ನಲ್ಲಿ ಬೆಳಕಿಗೆ ಬಂದಿದೆ.
ಕೂಲಿ ಕಾರ್ಮಿಕನಾದ ಸಜ್ಜದ್ ಖೋಖರ್ ತನ್ನ 42 ವರ್ಷದ ಪತ್ನಿ ಕೌಸರ್ ಮತ್ತು ಏಳು ಮಕ್ಕಳನ್ನು ಕೊಲೆಗೈದಿದ್ದಾನೆ. 10 ವರ್ಷದೊಳಗಿನ ನಾಲ್ವರು ಪುತ್ರಿಯರು ಮತ್ತು ಮೂವರು ಗಂಡು ಮಕ್ಕಳ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ, ಎಲ್ಲರನ್ನು ಸ್ಥಳದಲ್ಲೇ ಕೊಂದು ಹಾಕಿದ್ದಾರೆ. ಪಂಬಾಜ್ ಪೊಲೀಸರ ಮಹಿತಿಯಂತೆ, ಕೂಲಿ ಕಾರ್ಮಿಕ ಮಾನಸಿಕವಾಗಿ ತೊಂದರೆಗೀಡಾಗಿದ್ದಾನೆ. ಆತ ಆಗಾಗ ತನ್ನ ಹೆಂಡತಿ ಜೊತೆಗೆ ಜಗಳ ಮಾಡುತ್ತಿದ್ದನು. ಸದ್ಯ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಪತ್ನಿಯ ಕುಟುಂಬದವರು ಆತನ ಮೇಲೆ ಕೇಸ್ ನೀಡಿದ್ದಾರೆ.
ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನ್ನ ಮಕ್ಕಳಿಗೆ ಇನ್ನು ಮುಂದೆ ಆಹಾರ ನೀಡಲು ಸಾಧ್ಯವಾಗದ ಕಾರಣ ಈ ಕೃತ್ಯ ಎಸಗಿರುವುದಾಗಿ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯಮಂತ್ರಿ ಮರ್ಯಮ್ ನವಾಜ್ ಅವರು ಹತ್ಯೆ ಬಗ್ಗೆ ತಮ್ಮ ಸಂತಾಪ ಸೂಚಿಸಿದ್ದು ಪೊಲೀಸ್ ಮಹಾನಿರೀಕ್ಷಕರಿಂದ ವರದಿಯನ್ನು ಕೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



