ಪೋರ್ಚುಗಲ್: ಜಗತ್ತಿನ ಅತ್ಯಂತ ಹಿರಿಯ ನಾಯಿ ಬೊಬಿ ಸಾವು
ಜಗತ್ತಿನ ಅತ್ಯಂತ ಹಿರಿಯ ನಾಯಿ ಎಂದು ವಿಶ್ವ ದಾಖಲೆ ಬರೆದಿದ್ದ ಬೋಬಿ ತನ್ನ 31 ವಯಸ್ಸಿನಲ್ಲಿ ಮೃತವಾಗಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೋಮವಾರ ಹೇಳಿದೆ.

ಲಿಸ್ಬನ್: ಜಗತ್ತಿನ ಅತ್ಯಂತ ಹಿರಿಯ ನಾಯಿ ಎಂದು ವಿಶ್ವ ದಾಖಲೆ ಬರೆದಿದ್ದ ಬೋಬಿ ತನ್ನ 31 ವಯಸ್ಸಿನಲ್ಲಿ ಮೃತವಾಗಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೋಮವಾರ ಹೇಳಿದೆ.
ಮಧ್ಯ ಪೋರ್ಚುಗಲ್‌ನ ಹಳ್ಳಿಯೊಂದರಲ್ಲಿ ವಾಸವಾಗಿದ್ದ ರಫೀರೊ ಅಲೆಂಟೆಜಾನೊ ‘ಬೋಬಿ’ಗೆ 31 ವರ್ಷ ಮತ್ತು 165 ದಿನಗಳಾಗಿದ್ದವು. ಇದಕ್ಕೂ ಮೊದಲು ಜಗತ್ತಿನ ಹಿರಿಯ ನಾಯಿ ಎಂಬ ದಾಖಲೆ 1993ರಿಂದಲೂ ಆಸ್ಟ್ರೇಲಿಯಾದ ಕ್ಯಾಟಲ್ ಡಾಗ್ ಹೆಸರಿನಲ್ಲಿತ್ತು. ಈ ನಾಯಿ 29 ವರ್ಷ ಮತ್ತು 5 ತಿಂಗಳ ಕಾಲ ಬದುಕಿತ್ತು.
ಸಾಂಪ್ರದಾಯಿಕವಾಗಿ ಕುರಿ ನಾಯಿಗಳಾಗಿ ಬಳಸಲಾಗುವ ಬೋಬಿ ತಳಿಯ ನಾಯಿಯು ಸಾಮಾನ್ಯವಾಗಿ 12 ರಿಂದ 14 ವರ್ಷಗಳ ಜೀವಿತಾವಧಿಯನ್ನು ಹೊಂದಿರುತ್ತದೆ. ಈ ಪೋರ್ಚುಗಲ್‌ನ ಈ ನಾಯಿ 31 ವರ್ಷಗಳ ಕಾಲ ಬದುಕಿತ್ತು.
ಬೊಬಿ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಡಾ. ಕರೆನ್, ‘ಬೊಬಿಯನ್ನು ಕಳೆದುಕೊಂಡಿದ್ದಕ್ಕೆ ತುಂಬಾ ದುಃಖವಾಗಿದೆ. ಬೊಬಿ ದೀರ್ಘಾಯುಷ್ಯಕ್ಕೆ ಅವನ ಮಾಲೀಕ ಲಿಯೊನೆಲ್ ಹಲವು ಕಾರಣಗಳನ್ನು ನೀಡಿದ್ದಾರೆ. ಉತ್ತಮ ಆಹಾರ, ಪ್ರಕೃತಿಯೊಂದಿಗೆ ಒಡನಾಟ, ಸ್ವಾತಂತ್ರ್ಯ ಮತ್ತು ಪ್ರೀತಿ. ನಾವು ಅವನನ್ನು ತುಂಬಾ ಪ್ರೀತಿಸುತ್ತೇವೆ ಎಂಬುವುದು ಅವನಿಗೂ ಗೊತ್ತಿದೆ’ ಎಂದು ಬರೆದುಕೊಂಡಿದ್ದಾರೆ.
‘ಈ ತಳಿಯ ನಾಯಿಗಳು ಸುಮಾರು 12ರಿಂದ 14 ವರ್ಷ ಬದುಕುತ್ತವೆ. ಆದರೆ ಬೊಬಿ ಅದನ್ನು ಸುಳ್ಳು ಮಾಡಿದ್ದಾನೆ. ಬೊಬಿಗೆ ಪ್ರಪಂಚಾದಾದ್ಯಂತ ಹಲವು ಅಭಿಮಾನಿಗಳು ಇದ್ದಾರೆ. ಅವನನ್ನು ಕಳೆದುಕೊಂಡಿದ್ದಕ್ಕೆ ತುಂಬಾ ದುಃಖವಾಗುತ್ತಿದೆ’ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


