ಪ್ಯಾಲೆಸ್ತೀನಿಯರ ರಕ್ಷಣೆಯಲ್ಲಿ ತೊಡಗಿದ್ದ ವಿಶ್ವಸಂಸ್ಥೆ ಘಟಕದ ಇಂಧನ, ಔಷಧಿಗಳನ್ನೇ ಕೊಳ್ಳೆ ಹೊಡೆದ ಹಮಾಸ್ ಉಗ್ರರು!
ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆಯ ದಾಳಿ ತೀವ್ರವಾಗುತ್ತಿದ್ದಂತೆಯೇ ಇತ್ತ ಇಂಧನದ ಗಂಭೀರ ಕೊರತೆ ಎದುರಿಸುತ್ತಿರುವ ಹಮಾಸ್ ಉಗ್ರರು ಇದೀಗ ಪ್ಯಾಲೆಸ್ತೀನಿಯರ ರಕ್ಷಣೆಯಲ್ಲಿ ತೊಡಗಿದ್ದ ವಿಶ್ವಸಂಸ್ಥೆಯ ನಿರಾಶ್ರಿತರ ರಕ್ಷಣಾ ಶಿಬಿರದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಇಂಧನ ಮತ್ತು ಔಷಧೀಯ ಪರಿಕರಗಳನ್ನು ಕೊಳ್ಳೆ ಹೊಡೆದಿದ್ದಾರೆ ಎನ್ನಲಾಗಿದೆ.

ಟೆಲ್ ಅವೀವ್: ಗಾಜಾಪಟ್ಟಿಯಲ್ಲಿ ಇಸ್ರೇಲ್ ಸೇನೆಯ ದಾಳಿ ತೀವ್ರವಾಗುತ್ತಿದ್ದಂತೆಯೇ ಇತ್ತ ಇಂಧನದ ಗಂಭೀರ ಕೊರತೆ ಎದುರಿಸುತ್ತಿರುವ ಹಮಾಸ್ ಉಗ್ರರು ಇದೀಗ ಪ್ಯಾಲೆಸ್ತೀನಿಯರ ರಕ್ಷಣೆಯಲ್ಲಿ ತೊಡಗಿದ್ದ ವಿಶ್ವಸಂಸ್ಥೆಯ ನಿರಾಶ್ರಿತರ ರಕ್ಷಣಾ ಶಿಬಿರದ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಇಂಧನ ಮತ್ತು ಔಷಧೀಯ ಪರಿಕರಗಳನ್ನು ಕೊಳ್ಳೆ ಹೊಡೆದಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸ್ವತಃ ಇಸ್ರೇಲ್ ಡಿಫೆನ್ಸ್ ಫೋರ್ಸ್ ಮಾಹಿತಿ ನೀಡಿದ್ದು, ಗಾಜಾಪಟ್ಟಿ ಸಮೀಪದ ಪೂರ್ವದಲ್ಲಿ ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ಯುನೈಟೆಡ್ ನೇಷನ್ಸ್ ರಿಲೀಫ್ ಮತ್ತು ವರ್ಕ್ಸ್ ಏಜೆನ್ಸಿ (UNRWA) ಘಟಕ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣ ಇಂಧನ ಮತ್ತು ವೈದ್ಯಕೀಯ ಉಪಕರಣಗಳನ್ನು ಹಮಾಸ್ ಉಗ್ರ ಸಂಘಟನೆ ಕದ್ದಿದೆ ಎಂದು ಆರೋಪಿಸಿದೆ.
Wait @UNRWA - Did Hamas also break into your Twitter account? Or are you just scared of disappointing your terrorist friends? pic.twitter.com/K1a8Dp51pG
— Israel ישראל

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


