ಚೀನಾ: ಬಸ್ ಅಪಘಾತದಲ್ಲಿ 27 ಸಾವು, ಈ ವರ್ಷ ದೇಶ ಕಂಡ ಅತ್ಯಂತ ಭೀಕರ ರಸ್ತೆ ಅಪಘಾತ
ನೈರುತ್ಯ ಚೀನಾದಲ್ಲಿ ಭಾನುವಾರ ಸಂಭವಿಸಿದ ಬಸ್ ಅಪಘಾತದಲ್ಲಿ 27 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಇದು ಈ ವರ್ಷ ಇದುವರೆಗಿನ ದೇಶದ ಅತ್ಯಂತ ಭೀಕರ ರಸ್ತೆ ಅಪಘಾತ ಎನ್ನಲಾಗಿದೆ.

ಬೀಜಿಂಗ್: ನೈರುತ್ಯ ಚೀನಾದಲ್ಲಿ ಭಾನುವಾರ ಸಂಭವಿಸಿದ ಬಸ್ ಅಪಘಾತದಲ್ಲಿ 27 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಇದು ಈ ವರ್ಷ ಇದುವರೆಗಿನ ದೇಶದ ಅತ್ಯಂತ ಭೀಕರ ರಸ್ತೆ ಅಪಘಾತ ಎನ್ನಲಾಗಿದೆ.
ಒಟ್ಟು 47 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಗ್ರಾಮೀಣ ಗೈಝೌ ಪ್ರಾಂತ್ಯದ ಹೆದ್ದಾರಿಯಲ್ಲಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನೆಯಲ್ಲಿ 27 ಜನರು ಸಾವಿಗೀಡಾಗಿದ್ದು, ಉಳಿದ 20 ಜನ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವಾರು ಜನಾಂಗೀಯ ಅಲ್ಪಸಂಖ್ಯಾತರ ನೆಲೆಯಾಗಿರುವ ಗುಯಿಝೌನ ಬಡ, ದೂರದ ಮತ್ತು ಪರ್ವತ ಭಾಗ ಕಿಯಾನ್ನಾನ್ ಪ್ರಿಫೆಕ್ಚರ್‌ನಲ್ಲಿ ಅಪಘಾತ ಸಂಭವಿಸಿದೆ.
ಜೂನ್‌ನಲ್ಲಿ, ಗೈಝೌ ಪ್ರಾಂತ್ಯದಲ್ಲಿ ಹೈಸ್ಪೀಡ್ ರೈಲು ಹಳಿತಪ್ಪಿದ ನಂತರ ಚಾಲಕನೊಬ್ಬ ಮೃತಪಟ್ಟಿದ್ದ ಮತ್ತು ಮಾರ್ಚ್‌ನಲ್ಲಿ ಚೀನಾದ ಪ್ರಯಾಣಿಕ ವಿಮಾನ ಪತನದಲ್ಲಿ ಎಲ್ಲಾ 132 ಜನರು ಸಾವಿಗೀಡಾಗಿದ್ದರು. ಇದು ದಶಕಗಳಲ್ಲಿ ಚೀನಾದಲ್ಲಿ ನಡೆದ ಅತ್ಯಂತ ಭೀಕರ ವಾಯುಯಾನ ಅಪಘಾತವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


