ಇಮ್ರಾನ್ ಖಾನ್ ಭೂಮಿಯ ಮೇಲಿನ ದೊಡ್ಡ ಸುಳ್ಳುಗಾರ: ಶೆಹಬಾಜ್ ಷರೀಫ್ ಆರೋಪ
ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಭೂಮಿಯ ಮೇಲಿನ ದೊಡ್ಡ ಸುಳ್ಳುಗಾರ ಎಂದು ಪಾಕ್ ಪ್ರಧಾನಿ, ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷರು ಶೆಹಬಾಜ್ ಷರೀಫ್ ಆರೋಪಿಸಿದ್ದಾರೆ.

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಭೂಮಿಯ ಮೇಲಿನ ದೊಡ್ಡ ಸುಳ್ಳುಗಾರ ಎಂದು ಪಾಕ್ ಪ್ರಧಾನಿ, ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷರು ಶೆಹಬಾಜ್ ಷರೀಫ್ ಆರೋಪಿಸಿದ್ದಾರೆ.
UK ಪತ್ರಿಕೆ ದಿ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ದೇಶೀಯ ಮತ್ತು ವಿದೇಶಿ ವ್ಯವಹಾರಗಳಿಗೆ ಉಂಟಾದ ಹಾನಿ ಕುರಿತು ಮಾತನಾಡಿದ ಅವರು, ಇಮ್ರಾನ್ ಖಾನ್ ಅವರು ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದಾರೆ ಎಂದು ಹೇಳಿದರು.
ಇಮ್ರಾನ್ ಖಾನ್ ಅವರ ಇತ್ತೀಚಿನ ಆಪಾದಿತ ಸೈಫರ್ ಆಡಿಯೋ ಸೋರಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ಇಮ್ರಾನ್ ಭೂಮಿಯ ಮೇಲಿನ ದೊಡ್ಡ ಸುಳ್ಳುಗಾರ ಎಂಬುದು ನಿರಾಕರಿಸಲಾಗದ ಮಾತು ಎಂದು ಹೇಳಿದರು.
ನಾನು ಇದನ್ನು ಸಂತೋಷ, ಮುಜುಗರ ಮತ್ತು ಕಾಳಜಿಯ ಭಾವನೆಯಿಂದ ಹೇಳುತ್ತಿಲ್ಲ. ವೈಯಕ್ತಿಕ ಹಿತಾಸಕ್ತಿಯಿಂದ ಹೇಳಲಾದ ಈ ಸುಳ್ಳುಗಳಿಂದ ನನ್ನ ದೇಶದ ಪ್ರತಿಷ್ಠೆಗೆ ಭಾರಿ ಹಾನಿಯಾಗಿದೆ ಎಂದು ಷರೀಫ್ ಬ್ರಿಟಿಷ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಡಾನ್ ವರದಿ ಮಾಡಿದೆ.
ಎಪ್ರಿಲ್‌ನಲ್ಲಿ ಯಶಸ್ವಿ ಅವಿಶ್ವಾಸ ಮತದ ಮೂಲಕ ಪದಚ್ಯುತಗೊಂಡಾಗಿನಿಂದ ಇಮ್ರಾನ್ ಖಾನ್ ಅವರು ಚುನಾಯಿತರನ್ನು ಅಪಾಯಕಾರಿಯಾಗಿ ಧ್ರುವೀಕರಣಗೊಳಿಸಲು ಸಮಾಜಕ್ಕೆ ವಿಷಬೀಜ ಬಿತ್ತುತ್ತಿದ್ದಾರೆ ಎಂದು ಆರೋಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


