ವಿದೇಶ

ತಾಲೀಬಾನ್ ವಶಕ್ಕೆ ಅಫ್ಘಾನಿಸ್ತಾನ: ಪಾಕಿಸ್ತಾನದ ಪ್ರಭಾವಿ ಗುಪ್ತಚರ ಮುಖ್ಯಸ್ಥ ಕಾಬೂಲ್ ಗೆ ಆಗಮನ

ಅಫ್ಘಾನಿಸ್ತಾನ ತಾಲೀಬಾನ್ ವಶವಾದ ನಂತರ ಪಾಕಿಸ್ತಾನದ ಪ್ರಭಾವಿ ಗುಪ್ತಚರ ವಿಭಾಗದ ಮುಖ್ಯಸ್ಥ ಕಾಬೂಲ್ ಗೆ ಭೇಟಿ ನೀಡಿದ್ದಾರೆ.

ತಾಲೀಬಾನ್ ವಶಕ್ಕೆ ಅಫ್ಘಾನಿಸ್ತಾನ: ಪಾಕಿಸ್ತಾನದ ಪ್ರಭಾವಿ ಗುಪ್ತಚರ ಮುಖ್ಯಸ್ಥ ಕಾಬೂಲ್ ಗೆ ಆಗಮನ
ಹಮೀದ್ ಕರ್ಜೈ ವಿಮಾನ ನಿಲ್ದಾಣದ ಬಳಿ ತಾಲೀಬಾನ್ ವಿಶೇಷ ಪಡೆಗಳು (ಸಂಗ್ರಹ ಚಿತ್ರ)
Published On :

ಕಾಬೂಲ್: ಅಫ್ಘಾನಿಸ್ತಾನ ತಾಲೀಬಾನ್ ವಶವಾದ ನಂತರ ಪಾಕಿಸ್ತಾನದ ಪ್ರಭಾವಿ ಗುಪ್ತಚರ ವಿಭಾಗದ ಮುಖ್ಯಸ್ಥ ಕಾಬೂಲ್ ಗೆ ಭೇಟಿ ನೀಡಿದ್ದಾರೆ. 

ಪಾಕಿಸ್ತಾನದ ಇಬ್ಬರು ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಜನರಲ್ ಫೈಜ್ ಹಮೀದ್ ಶನಿವಾರದ ಭೇಟಿಯಲ್ಲಿ ತಾಲೀಬಾನ್ ಗೆ ಹೇಳಿದ್ದೇನು? ಎಂಬ ಬಗ್ಗೆ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಈ ಮೂಲಕ ತಾಲೀಬಾನ್ ಮೆಲೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಪ್ರಭಾವ ಬೀರುತ್ತಿದೆ ಎಂಬುದಂತೂ ಸ್ಪಷ್ಟವಾಗಿದೆ. 

ತಾಲೀಬಾನ್ ನಾಯಕತ್ವ ಪಾಕಿಸ್ತಾನದಲ್ಲಿ ತನ್ನ ಪ್ರಧಾನ ಕೇಂದ್ರವನ್ನು ಹೊಂದಿದ್ದು ಪಾಕ್ ನ ಇಂಟರ್ ಸರ್ವಿಸಸ್ ಇಂಟಲಿಜೆನ್ಸ್ ಏಜೆನ್ಸಿಯೊಂದಿಗೆ ನೇರ ಸಂಪರ್ಕದಲ್ಲಿದೆ. ಪಾಕಿಸ್ತಾನ ತಾಲೀಬಾನ್ ಗೆ ಸೇನಾ ಬೆಂಬಲ ನೀಡುತ್ತಿದೆ ಎಂಬುದನ್ನು ನಿರಂತರವಾಗಿ ಅಲ್ಲಗಳೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.