ಅಮೆರಿಕದಲ್ಲಿ ಓಮೈಕ್ರಾನ್ ಗೆ ಮೊದಲ ಬಲಿ, ಕೋವಿಡ್ ಲಸಿಕೆ ಪಡೆದುಕೊಳ್ಳದ ವ್ಯಕ್ತಿ ಸಾವು
ಜಗತ್ತಿನಾದ್ಯಂತ ಅತಿ ವೇಗದಲ್ಲಿ ಹರಡುತ್ತಿರುವ ಕೊರೋನಾ ವೈರಸ್ ರೂಪಾಂತರಿ ತಳಿ ಓಮೈಕ್ರಾನ್‍ನಿಂದಾಗಿ ಅಮೆರಿಕದ ಟೆಕ್ಸಾಸ್‍ನ ಕೌಂಟಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಓಮೈಕ್ರಾನ್‍ನಿಂದಾಗಿ ಸಂಭವಿಸಿದ ಮೊದಲ ಸಾವು ಇದಾಗಿದೆ.

ಟೆಕ್ಸಾಸ್: ಜಗತ್ತಿನಾದ್ಯಂತ ಅತಿ ವೇಗದಲ್ಲಿ ಹರಡುತ್ತಿರುವ ಕೊರೋನಾ ವೈರಸ್ ರೂಪಾಂತರಿ ತಳಿ ಓಮೈಕ್ರಾನ್‍ನಿಂದಾಗಿ ಅಮೆರಿಕದ ಟೆಕ್ಸಾಸ್‍ನ ಕೌಂಟಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಓಮೈಕ್ರಾನ್‍ನಿಂದಾಗಿ ಸಂಭವಿಸಿದ ಮೊದಲ ಸಾವು ಇದಾಗಿದೆ.
ಸಾವನ್ನಪ್ಪಿದ ವ್ಯಕ್ತಿಯು 50 ವರ್ಷ ವಯಸ್ಸಿನವರಾಗಿದ್ದು, ಕೋವಿಡ್ ಲಸಿಕೆ ಪಡೆದುಕೊಂಡಿರಲಿಲ್ಲ. ಇದು ಅಮೆರಿಕದಲ್ಲಿ ದಾಖಲಾದ ಮೊದಲ ಓಮೈಕ್ರಾನ್ ಸಾವು ಎಂದು ಕೌಂಟಿ ಆರೋಗ್ಯ ಇಲಾಖೆ ತಿಳಿಸಿದೆ.
ಈ ವ್ಯಕ್ತಿಯು ಕೋವಿಡ್ ಲಸಿಕೆ ಪಡೆದುಕೊಳ್ಳದೇ ಇರುವುದರಿಂದ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿತ್ತು ಮತ್ತು ಈ ಮುನ್ನ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿತ್ತು” ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚುತ್ತಿದೆ ಓಮೈಕ್ರಾನ್ ಪ್ರಕರಣಗಳು
ಕಳೆದ ವಾರದಲ್ಲಿ ಶೇ 73.2 ರಷ್ಟು ಹೊಸ ಪ್ರಕರಣಗಳು ದಾಖಲಾಗಿವೆ. ಇನ್ನು ಪೆಸಿಫಿಕ್ ವಾಯುವ್ಯ ರಾಜ್ಯಗಳಾದ ಒರೆಗಾನ್, ವಾಷಿಂಗ್ಟನ್ ಮತ್ತು ಇಡಾಹೊಗಳಲ್ಲಿ, ಓಮಿಕ್ರಾನ್ ಶೇ. 96.3 ರಷ್ಟು ಹೊಸ ಪ್ರಕರಣಗಳು ಕಂಡು ಬಂದಿವೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


