ಇಸ್ಲಾಮಿಕ್ ಸಹಕಾರ ಸಂಘಟನಾ ಸಭೆಯಲ್ಲಿ ಮತ್ತೆ ಕಾಶ್ಮೀರದ ಬಗ್ಗೆ ಚರ್ಚೆಗೆ ಪಾಕ್ ಪೀಠಿಕೆ
ಇಸ್ಲಾಮಿಕ್ ಸಹಕಾರ ಸಂಘಟನೆ (ಓಐಸಿ) ಸಭೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕಾಶ್ಮೀರದ ಬಗ್ಗೆ ಚರ್ಚೆಗೆ ಪೀಠಿಕೆ ಹಾಕಿದೆ.

ಪಾಕಿಸ್ತಾನ: ಇಸ್ಲಾಮಿಕ್ ಸಹಕಾರ ಸಂಘಟನೆ (ಓಐಸಿ) ಸಭೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಕಾಶ್ಮೀರದ ಬಗ್ಗೆ ಚರ್ಚೆಗೆ ಪೀಠಿಕೆ ಹಾಕಿದೆ.
ಪಾಕ್ ಪ್ರಧಾನಿ ಇಮ್ರಾನ್ ಖಾನ್, ಒಐಸಿ ಪ್ರಧಾನ ಕಾರ್ಯದರ್ಶಿ ಹಿಸೈನ್ ಇಬ್ರಾಹಿಂ ತಾಹಾ ಅವರೊಂದಿಗಿನ ಈ ಸಭೆಯಲ್ಲಿ ಕಾಶ್ಮೀರ ವಿಷಯದ ಬಗ್ಗೆ ಚರ್ಚಿಸಿದ್ದು, ಈ ಚರ್ಚೆಯಲ್ಲಿ ಈ ಇಬ್ಬರೂ ಕಾಶ್ಮೀರಿ ಜನರಿಗೆ ತಮ್ಮ ಸ್ವ-ನಿರ್ಣಯ ಮತ್ತು ಹಕ್ಕುಗಳ ಹೋರಾಟದಲ್ಲಿ ಬೆಂಬಲವನ್ನು ಮುಂದುವರೆಸುವ ಬಗ್ಗೆ ಮಾತನಾಡಿದ್ದಾರೆ.
“ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯ ಬೆಳವಣಿಗೆಗಳು ಮತ್ತು ಕಾಶ್ಮೀರಿ ಜನರು ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಪಡೆಯುವ ಹೋರಾಟದಲ್ಲಿ ಓಐಸಿಯ ಪ್ರಯತ್ನಗಳನ್ನು ಬೆಂಬಲಿಸಲು ಚರ್ಚಿಸಲಾಗಿದೆ. ಇಸ್ಲಾಮಿಕ್ ಶೃಂಗಸಭೆಗಳು ಮತ್ತು ಸಿಎಫ್‌ಎಂ ಸಭೆಗಳ ಎಲ್ಲಾ ನಿರ್ಣಯಗಳು, ಹಾಗೆಯೇ ಯುನೈಟೆಡ್ ನೇಷನ್ ಮತ್ತು ಅಂತರಾಷ್ಟ್ರೀಯ ಭದ್ರತಾ ಮಂಡಳಿಯ ನಿರ್ಣಯಗಳಲ್ಲಿ ಪ್ರತಿಪಾದಿಸಲ್ಪಟ್ಟಿರುವ ಸ್ವಯಂ-ನಿರ್ಣಯದ ಹಕ್ಕಿನ ಬಗ್ಗೆ ಸಹ ಮಾತನಾಡಲಾಗಿದೆ ಎಂದು ಓಐಸಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಇಮ್ರಾನ್ ಖಾನ್ ಮತ್ತು ಒಐಸಿ ಪ್ರಧಾನ ಕಾರ್ಯದರ್ಶಿ ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಅಲ್ಲಿನ ಜನರಿಗೆ ನೆರವು ನೀಡುವ ಪ್ರಯತ್ನಗಳ ಬಗ್ಗೆ ಸಭೆಯಲ್ಲಿ ಮಾತನಾಡಿ ಅಫ್ಘಾನಿಸ್ತಾನದಲ್ಲಿ ಭದ್ರತೆ ಮತ್ತು ಸ್ಥಿರತೆಗಾಗಿ ತಕ್ಷಣದ ನೆರವು ನೀಡುವ ಮಹತ್ವದ ಜೊತೆಗೆ ಇಸ್ಲಾಮೋಫೋಬಿಯಾ ಬಗ್ಗೆಯೂ ಮಾತುಕತೆ ನಡೆಸಿದರು. ಜಗತ್ತಿನಲ್ಲಿ ಹೆಚ್ಚುತ್ತಿರುವ ಇಸ್ಲಾಮೋಫೋಬಿಯಾವನ್ನು ಎದುರಿಸಲು ಓಐಸಿ ಮತ್ತು ಪಾಕಿಸ್ತಾನದ ಪ್ರಯತ್ನಗಳನ್ನು ಎರಡೂ ಕಡೆಯವರು ಪರಿಶೀಲಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ಓಐಸಿಯಲ್ಲಿ ಕಾಶ್ಮೀರದ ಸಮಸ್ಯೆ ಹೆಚ್ಚಾಗಿ ಪ್ರಸ್ತಾಪವಾಗುತ್ತದೆ. ಕಳೆದ ತಿಂಗಳು ಒಐಸಿ ವಿಶೇಷ ರಾಯಭಾರಿ ಯೂಸೆಫ್ ಎಲ್ಡೋಬ್ ಪಾಕಿಸ್ತಾನಕ್ಕೆ ತೆರಳಿದ್ದಾಗಲೂ ಕಾಶ್ಮೀರದ ವಿಷಯ ಪ್ರಸ್ತಾಪಿಸಿದ್ದರು. ಪಾಕಿಸ್ತಾನದಲ್ಲಿ ಆಲ್ ಪಾರ್ಟಿಸ್ ಹುರಿಯತ್ ಕಾನ್ಫರೆನ್ಸ್ (ಎಪಿಎಚ್‌ಸಿ) ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ, ಕಾಶ್ಮೀರದ ಜನರ ಸ್ವ-ನಿರ್ಣಯದ ಹಕ್ಕನ್ನು ಓಐಸಿ ಬೆಂಬಲಿಸುವುದನ್ನು ಮುಂದುವರಿಸುವುದಾಗಿ ಹೇಳಿದ್ದರು.ಅಲ್ಲದೇ ಮುಂದಿನ ಓಐಸಿ ಸಚಿವರ ಸಭೆಯಲ್ಲಿ ಕಾಶ್ಮೀರದ ಪರಿಸ್ಥಿತಿಯ ಕುರಿತು ವರದಿಯನ್ನು ಮಂಡಿಸುವುದಾಗಿ ಎಲ್ಡೋಬ್ ಹೇಳಿದ್ದರು.
ಕಳೆದ ವರ್ಷವೂ, ಓಐಸಿ ನಿರ್ಣಯವು ಜಮ್ಮು ಮತ್ತು ಕಾಶ್ಮೀರವನ್ನು ಉಲ್ಲೇಖಿಸಿದ್ದನ್ನು ಭಾರತವು ಅನ್ಯಾಯ ಎಂದು ಕರೆದು, ಓಐಸಿ ದೇಶದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಭಾರತ ಕಟ್ಟುನಿಟ್ಟಿನ ಧ್ವನಿಯಲ್ಲಿ ಹೇಳಿತ್ತು. ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರದ ವಿಷಯವನ್ನೂ ಒಳಗೊಂಡಿದೆ. ಸಭೆಯಲ್ಲಿ ಇರಿಸಲಾದ ಸಂಗತಿಗಳು ತಪ್ಪು. ಓಐಸಿ ಭಾರತದ ಆಂತರಿಕ ವಿಷಯಗಳ ಬಗ್ಗೆ ನಿಲುವು ಹೊಂದಿರಬಾರದು ಎಂದು ಭಾರತ ನಿರೀಕ್ಷಿಸಿದೆ.
ಇನ್ನು ಕಳೆದ ಭಾನುವಾರ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಆಯೋಜಿಸಿದ್ದ ಓಐಸಿಯ ಈ 17ನೇ ವಿಶೇಷ ಸಭೆಯಲ್ಲಿ ಒಐಸಿಯ ಒಟ್ಟು 57 ಸದಸ್ಯ ರಾಷ್ಟ್ರಗಳ ಪೈಕಿ 20 ದೇಶಗಳ ವಿದೇಶಾಂಗ ಸಚಿವರು ಭಾಗವಹಿಸಿದ್ದರು.ಓಐಸಿಯಲ್ಲಿ 10 ಉಪ ಮಂತ್ರಿಗಳು ಸಹ ತಮ್ಮ ದೇಶಗಳನ್ನು ಪ್ರತಿನಿಧಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


