ರಷ್ಯಾದ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಪುತಿನ್ ಪಕ್ಷಕ್ಕೆ 450 ರಲ್ಲಿ 324 ಸೀಟು: ಚುನಾವಣಾ ಅಧಿಕಾರಿಗಳ ಭವಿಷ್ಯ
ವಿರೋಧ ಪಕ್ಷದ ಮುಖಂಡರನ್ನು ಚುನಾವಣೆಗೂ ಮುನ್ನ ಬಂಧಿಸಲಾಗಿತ್ತು. ಪುತಿನ್ ಅವರ ಪ್ರತೀಕಾರದ ಭಯದಿಂದ ಹಲವು ಮಂದಿ ವಿರೋಧ ಪಕ್ಷ ಮುಖಂಡರು ವಿದೇಶಕ್ಕೆ ಪಲಾಯನ ಮಾಡಿದ್ದರು.

ಮಾಸ್ಕೊ: ರಷ್ಯಾ ಅಡಳಿತಾರೂಢ ಪಕ್ಷ 2024ರಲ್ಲಿ ನಡೆಯಲಿರುವ ರಾಷ್ಟ್ರೀಯ ಸಂಸತ್ ಚುನಾವಣೆಯಲ್ಲಿ 450ರಲ್ಲಿ 324 ಸೀಟುಗಳನ್ನು ಗೆದ್ದುಕೊಳ್ಳಲಿದೆ ಎಂದು ಚುನಾವಣಾಧಿಕಾರಿಗಳು ಭವಿಷ್ಯ ನುಡಿದಿದ್ದಾರೆ. ಈ ಸಂಖ್ಯೆ ಕಳೆದ ಬಾರಿಯ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ ಕಡಿಮೆ. ಆದರು ಸರ್ಕಾರ ರಚಿಸಲು ಆ ಸಂಖ್ಯೆ ಸಾಕಾಗುತ್ತರೆ.
ಇತ್ತೀಚಿಗಷ್ಟೆ ಕೆಳಮನೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಿ ಪುತಿನ್ ರ ಪಕ್ಷ ಮತ್ತೆ ಜಯಶಾಲಿಯಾಗಿ ಹೊಮ್ಮಿತ್ತು. 2024ರಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಅವಧಿ ಕೊನೆಗೊಳ್ಳುತ್ತದೆ.
ಆ ಸಮಯಕ್ಕೆ ಪುತಿನ್ 12 ವರ್ಷಗಳ ಕಾಲ ರಷ್ಯಾ ಆಳಿದಂತಾಗುತ್ತದೆ. ಒಂದು ವೇಳೆ ಪುತಿನ್ ಮತ್ತೆ ಅಧ್ಯಕ್ಷ ಪದವಿ ಮೇಲೆ ಕಣ್ಣಿಟ್ಟರೆ, ಆತ ಮರು ಚುನಾವಣೆಗೆ ಸಿದ್ಧವಾಗಬಹುದು ಇಲ್ಲವೇ ಅಧಿಕಾರದಲ್ಲಿರಲು ಮತ್ತೇನಾದರೂ ತಂತ್ರ ಹೂಡಬಹುದು ಎಂಡು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಕೊನೆಗೊಂಡ ಕೆಳಮನೆ ಸಂಸದೀಯ ಚುನಾವಣೆಯಲ್ಲಿ ಪುತಿನ್ ಅಕ್ರಮ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ವಿರೋಧ ಪಕ್ಷದ ಮುಖಂಡರನ್ನು ಚುನಾವಣೆಗೂ ಮುನ್ನ ಬಂಧಿಸಲಾಗಿತ್ತು. ಪುತಿನ್ ಅವರ ಪ್ರತೀಕಾರದ ಭಯದಿಂದ ಹಲವು ಮಂದಿ ವಿರೋಧ ಪಕ್ಷ ಮುಖಂಡರು ವಿದೇಶಕ್ಕೆ ಪಲಾಯನ ಮಾಡಿದ್ದರು.
Related Article
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ನಿರ್ದೇಶಕ ಹಮೀದ್ ಶಿನ್ವಾರಿ ವಜಾಗೊಳಿಸಿದ ತಾಲಿಬಾನ್
ಅಫ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳು 'ಆದಷ್ಟು ಬೇಗ' ಶಾಲೆಗೆ ಮರಳಲು ಅವಕಾಶ: ತಾಲಿಬಾನ್
ಸೆ.23ಕ್ಕೆ ಪ್ರಧಾನಿ ನರೇಂದ್ರ ಮೋದಿ- ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಭೇಟಿ, ಮಾತುಕತೆ
ಕುಡಿಯುವ ನೀರಿಗಾಗಿ ಮಸೀದಿಗೆ ಹೋಗಿದ್ದಕ್ಕೆ ಒತ್ತೆಯಾಳು; ಪಾಕಿಸ್ತಾನದಲ್ಲಿ ಹಿಂದೂ ಕುಟುಂಬಕ್ಕೆ ಕಿರುಕುಳ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


