ಪ್ಯಾಂಡೋರಾ ಪೇಪರ್ಸ್: ಜಗತ್ತಿನ ಪ್ರಭಾವಿ ವ್ಯಕ್ತಿಗಳ ವಿದೇಶಿ ಹೂಡಿಕೆಗಳ ರಹಸ್ಯ ದಾಖಲೆಗಳು ಸೋರಿಕೆ
117 ದೇಶಗಳ 600 ಪತ್ರಕರ್ತದ ಸಹಯೋಗದಲ್ಲಿ ನಡೆದ ಈ ಕಾರ್ಯಚರಣೆಗೆ ಪ್ಯಾಂಡೋರಾ ಪೇಪರ್ಸ್ ಎಂದು ಹೆಸರಿಡಲಾಗಿದೆ. ಭಾರತದ ಕ್ರಿಕೆಟ್ ಸೂಪರ್ ಸ್ಟಾರ್ ಸಚಿನ್ ತೆಂಡೂಲ್ಕರ್, ಪಾಪ್ ಸ್ಟಾರ್ ಶಕೀರಾ ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ.

ನವದೆಹಲಿ: 91 ದೇಶದ 35 ಮಂದಿ ಪ್ರಭಾವಿ ವಿಶ್ವ ನಾಯಕರು, 330 ರಾಜಕಾರಣಿಗಳು ಮತ್ತು ಸಾರ್ವಜನಿಕ ಅಧಿಕಾರಿಗಳ ರಹಸ್ಯ ಸಂಪತ್ತಿನ ಮಾಹಿತಿಯನ್ನೊಳಗೊಂಡ ಲಕ್ಷಾಂತರ ದಾಖಲೆಗಳು ಅಂತರ್ಜಾಲದಲ್ಲಿ ಸೋರಿಕೆಯಾಗಿವೆ. ಪ್ರಭಾವಿ ವ್ಯಕ್ತಿಗಳು ವಿದೇಶದಲ್ಲಿ ನಡೆಸಿರುವ ಹೂಡಿಕೆ ಮಾಹಿತಿಯನ್ನು ಈ ದಾಖಲೆಗಳು ಒಳಗೊಂಡಿವೆ. ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಮಂಡಳಿ ಈ ತನಿಖೆಯನ್ನು ನಡೆಸಿತ್ತು.
ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ ಪುತಿನ್, ಜೋರ್ಡಾನ್ ರಾಜ ಸೇರಿದಂತೆ ಭಾರತ ಪಾಕಿಸ್ತಾನದ ರಾಜಕಾರಣಿಗಳು, ಸೆಲಬ್ರಿಟಿಗಳ ದಾಖಲೆಯೂ ಇದರಲ್ಲಿದೆ ಎನ್ನಲಾಗುತ್ತಿದೆ. 117 ದೇಶಗಳ 600 ಪತ್ರಕರ್ತದ ಸಹಯೋಗದಲ್ಲಿ ನಡೆದ ಈ ಕಾರ್ಯಚರಣೆಗೆ ಪ್ಯಾಂಡೋರಾ ಪೇಪರ್ಸ್ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ: ಬಡತನ-ಸಿರಿತನಕ್ಕೆ ಕಾರಣವೇನು?
ಬಿಬಿಸಿ, ಗಾರ್ಡಿಯನ್ ಸೇರಿದಂತೆ ಭಾರತದ ಮಾಧ್ಯಮ ಸಂಸ್ಥೆಗಳೂ ಈ ತನಿಖೆಯಲ್ಲಿ ಪಾಲ್ಗೊಂಡಿವೆ. ಭಾರತದ ಕ್ರಿಕೆಟ್ ಸೂಪರ್ ಸ್ಟಾರ್ ಸಚಿನ್ ತೆಂಡೂಲ್ಕರ್, ಪಾಪ್ ಸ್ಟಾರ್ ಶಕೀರಾ ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ.
ಸಚಿನ್ ತೆಂಡೂಲ್ಕರ್ ಅಟಾರ್ನಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಚಿನ್ ಅವರು ವಿದೇಶದಲ್ಲಿ ನಡೆಸಿರುವ ಹೂಡಿಕೆಗಳು ಕಾನೂನುಬದ್ಧವಾಗಿರುವುದಾಗಿ ತಿಳಿಸಿದ್ದಾರೆ. ಭಾರತದ 6 ಮತ್ತು ಪಾಕಿಸ್ತಾನದ 7 ಮಂದಿ ಪ್ರಭಾವಿ ರಾಜಕಾರಣಿಗಳ ವಿದೇಶಿ ಹೂಡಿಕೆ ಮಾಹಿತಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಯುಕ್ರೇನ್, ಕೆನ್ಯಾ, ಈಕ್ವೆಡಾರ್ ಅಧ್ಯಕ್ಷ, ಜೆಕ್ ಪ್ರಧಾನಿ ಸೇರಿದಂತೆ ರಷ್ಯಾದ 130 ಮಂದಿ ಶತಕೋಟ್ಯಧಿಪತಿಗಳು, ಅಮೆರಿಕದ ಶತಕೋಟ್ಯಧಿಪತಿಗಳ ವ್ಯವಹಾರಗಳನ್ನು ಈ ದಾಖಲೆಗಳಲ್ಲಿ ಬಹಿರಂಗಪಡಿಸಲಾಗಿದೆ.
2016ರಲ್ಲಿ ಇದೇ ತನಿಖಾ ಪತ್ರಕರ್ತರ ಅಂತಾರಾಷ್ಟ್ರೀಯ ಮಂಡಳಿ ಪನಾಮ ಪೇಪರ್ಸ್ ಎನ್ನುವ ಪ್ರಾಜೆಕ್ಟ್ ಅಡಿ ರಹಸ್ಯ ದಾಖಲೆಗಳನ್ನು ಬಿಡುಗಡೆಗೊಳಿಸಿತ್ತು. ಅಮಿತಾಭ್ ಬಚ್ಚನ್ ಸೇರಿದಂತೆ ವಿಶ್ವದ ಹಲವು ನಾಯಕರ ಹೂಡಿಕೆ ದಾಖಲೆಗಳನ್ನು ಆ ಸಮಯದಲ್ಲಿ ಬಹಿರಂಗಗೊಳಿಸಲಾಗಿತ್ತು.
Related Article
ನಿಷೇಧಿತ ಉಗ್ರಸಂಘಟನೆ ಜೊತೆ ಸರ್ಕಾರ ಮಾತುಕತೆ: ಪಾಕ್ ಗೃಹಸಚಿವ ಸಮರ್ಥನೆ
ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಒಂದು ವರ್ಷ ಜೈಲು ಶಿಕ್ಷೆ
ಜರ್ಮನಿ: ಹಿಟ್ಲರನ ನಾಜಿ ಕಮಾಂಡರ್ ಪಿಎ ಆಗಿದ್ದ 96 ವರ್ಷದ ಮಹಿಳೆ ವಿಚಾರಣೆ: ಆರೋಪ ದಾಖಲಾದಾಗ ಆಕೆಗೆ 21
ಪಾಕಿಸ್ತಾನ: ಧರ್ಮ ನಿಂದನೆ ಎಸಗಿದ್ದ ಮಹಿಳೆಗೆ ಮರಣದಂಡನೆ
ರಾಜಪ್ರಭುತ್ವದ ಕತಾರ್ ನಲ್ಲಿ ಇದೇ ಮೊದಲ ಬಾರಿಗೆ ಶಾಸಕಾಂಗ ಮಂಡಳಿ ಮತದಾನ
ಪಾಕ್ ಸಂಸ್ಥಾಪಕ ಮೊಹಮದ್ ಆಲಿ ಜಿನ್ನಾ ವಿಗ್ರಹ ಸ್ಫೋಟಿಸಿ ಧ್ವಂಸ: ಬಲೂಚ್ ಬಂಡುಕೋರರ ಕೃತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


