ಕೋವಿಡ್ ಉಲ್ಬಣ: ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದ ಕುವೈತ್
ದೇಶದಲ್ಲಿ ಭಾರೀ ಏರಿಕೆ ಕಾಣುತ್ತಿರುವ ಕೋವಿಡ್19 ಪರಿಸ್ಥಿತಿಯಿಂದಾಗಿ ಮುಂದಿನ ಆದೇಶದವರೆಗೂ ಭಾರತದಿಂದ ಬರುವ ಎಲ್ಲಾ ವಾಣಿಜ್ಯ ವಿಮಾನಗಳನ್ನು ಕುವೈತ್ ಸ್ಥಗಿತಗೊಳಿಸಿದೆ. ಆರೋಗ್ಯ ಅಧಿಕಾರಿಗಳ ಸೂಚನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ

ನವದೆಹಲಿ: ದೇಶದಲ್ಲಿ ಭಾರೀ ಏರಿಕೆ ಕಾಣುತ್ತಿರುವ ಕೋವಿಡ್-19 ಪರಿಸ್ಥಿತಿಯಿಂದಾಗಿ ಮುಂದಿನ ಆದೇಶದವರೆಗೂ ಭಾರತದಿಂದ ಬರುವ ಎಲ್ಲಾ ವಾಣಿಜ್ಯ ವಿಮಾನಗಳನ್ನು ಕುವೈತ್ ಸ್ಥಗಿತಗೊಳಿಸಿದೆ. ಆರೋಗ್ಯ ಅಧಿಕಾರಿಗಳ ಸೂಚನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ
ಏಪ್ರಿಲ್ 24 ರಿಂದ ಜಾರಿಗೆ ಬರುವಂತೆ ಭಾರತದಿಂದ ಬರುವ ಎಲ್ಲಾವಾಣಿಜ್ಯ ವಿಮಾನಗಳನ್ನು ಸ್ಥಗಿತಗೊಳಿಸಿದೆ ಎಂದು ಕುವೈತ್ ನ ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ. ಭಾರತದಿಂದ ನೇರವಾಗಿ ಅಥವಾ ಬೇರೆ ದೇಶದ ಮೂಲಕ ಬರುವ ಎಲ್ಲಾ ಪ್ರಯಾಣಿಕರನ್ನು ಅವರು ಭಾರತದ ಹೊರಗೆ ಕನಿಷ್ಟ 14 ದಿನಗಳನ್ನು ಕಳೆಯದ ಹೊರತು ದೇಶ ಪ್ರವೇಶಿಸುವುದನ್ನು ನಿಷೇಧಿಸಲಾಗುವುದು ಎಂದು ಟ್ವಿಟರ್‌ನಲ್ಲಿ ಪ್ರಕಟಣೆ ನೀಡಿದೆ.
ಕುವೈತ್ ನಾಗರಿಕರು, ಅವರ ಪ್ರಾಥಮಿಕ ಸಂಬಂಧಿಗಳುಮತ್ತು ಅವರ ಮನೆಯ ಕೆಲಸಗಾರರಿಗೆ ದೇಶ ಪ್ರವೇಶಿಸಲು ಅವಕಾಶ ನೀಡಲಾಗುವುದು. ಅಲ್ಲದೆ ಸರಕು ಹಾರಾಟದ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಪ್ರಕಟಣೆ ಹೇಳಿದೆ.
ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ದೇಶದ ಅತಿದೊಡ್ಡ ವಲಸಿಗ ಸಮುದಾಯವಾಗಿರುವ ಭಾರತೀಯ ಜನರು ಒಂದು ದಶಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ವಾಸವಿದ್ದಾರೆ.
ಈ ಹಿಂದೆ, ಯುಕೆ, ಯುಎಇ ಮತ್ತು ಕೆನಡಾ ರಾಷ್ಟ್ರಗಳು ಭಾರತದಿಂದ ಬರುವ ವಿಮಾನಯಾನವನ್ನು ನಿಷೇಧಿಸಿದ್ದವು.
ಏತನ್ಮಧ್ಯೆ, ಯುಎಇ ಶುಕ್ರವಾರ ಭಾರತಕ್ಕೆ ತನ್ನ ಪ್ರಯಾಣ ನಿಷೇಧವನ್ನು ನವೀಕರಿಸಿದೆ, ಯುಎಇ ಗುರುವಾರ 10 ದಿನಗಳವರೆಗೆ ಭಾರತದ ಪ್ರಯಾಣಿಕರನ್ನು ನಿರ್ಬಂಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


