ಲಕ್ಕಿ ಡ್ರಾ: ಯುಎಇಯಲ್ಲಿ 19.90 ಕೋಟಿ ಗೆದ್ದ ಭಾರತೀಯ!
ಅಬುಧಾಬಿಯಲ್ಲಿ ನಡೆದ ರಾಫಲ್ ಡ್ರಾನಲ್ಲಿ 35 ವರ್ಷದ ಭಾರತೀಯ ವ್ಯಕ್ತಿಯೊಬ್ಬರು 19.90 ಕೋಟಿ ಜಾಕ್‌ಪಾಟ್ ಗೆದ್ದಿದ್ದಾರೆ. ಇದು ಭಾರತದ ಅದೃಷ್ಟ ವಿಜೇತರ ದೀರ್ಘ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಎಂದು ಮಾಧ್ಯಮ ವರದಿ ತಿಳಿಸಿದೆ.

ದುಬೈ: ಅಬುಧಾಬಿಯಲ್ಲಿ ನಡೆದ ರಾಫಲ್ ಡ್ರಾನಲ್ಲಿ 35 ವರ್ಷದ ಭಾರತೀಯ ವ್ಯಕ್ತಿಯೊಬ್ಬರು 19.90 ಕೋಟಿ ಜಾಕ್‌ಪಾಟ್ ಗೆದ್ದಿದ್ದಾರೆ. ಇದು ಭಾರತದ ಅದೃಷ್ಟ ವಿಜೇತರ ದೀರ್ಘ ಪಟ್ಟಿಗೆ ಇತ್ತೀಚಿನ ಸೇರ್ಪಡೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಮೂಲತಃ ಪಂಜಾಬ್ ಮೂಲದವರು ಮತ್ತು ಶಾರ್ಜಾದಲ್ಲಿ ಐಟಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಗುರ್‌ಪ್ರೀತ್ ಸಿಂಗ್ ಅವರು ಆಗಸ್ಟ್ 12ರಂದು ಲಕ್ಕಿ ಟಿಕೆಟ್ ಸಂಖ್ಯೆ 067757 ಅನ್ನು ಖರೀದಿಸಿದ್ದರು ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
ಸೆಪ್ಟೆಂಬರ್ 3ರಂದು ಸಿಂಗ್ ಅವರಿಗೆ ರಾಫಲ್ ಡ್ರಾ ಸಂಘಟಕರು ಕರೆ ಮಾಡಿದ್ದರು. ಈ ವೇಳೆ ನೀವು ವಿಜೇತರಲ್ಲಿ ಒಬ್ಬರು ಎಂದು ಹೇಳಿದಾಗ, ಇದು ತಮಾಷೆಯ ಕರೆ ಎಂದು ಭಾವಿಸಿದ್ದೆ ಎಂದು ಗುರುಪ್ರೀತ್ ಸಿಂಗ್ ಹೇಳಿದ್ದಾರೆ.
ಸಿಂಗ್ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಬಿಗ್ ಟಿಕೆಟ್ ರಾಫೆಲ್‌ನಲ್ಲಿ ಭಾಗವಹಿಸುತ್ತಿದ್ದಾರೆ ಆದರೆ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಡ್ರಾವನ್ನು ಲೈವ್ ಆಗಿ ಅನುಸರಿಸುತ್ತಿರಲಿಲ್ಲವಂತೆ.
ಜಾಕ್‌ಪಾಟ್ ಹಣದಿಂದ ಯುಎಇಯಲ್ಲಿ ಒಂದು ಮನೆಯನ್ನು ಖರೀದಿಸುತ್ತೇನೆ. ನಂತರ ಪೋಷಕರನ್ನು ಪಂಜಾಬ್‌ನಿಂದ ಕರೆತರಲು ಪ್ರಯತ್ನಿಸುತ್ತೇನೆ. ಈ ಮೂಲಕ ಕುಟುಂಬದೊಂದಿಗೆ ಇರುವ ಆಸೆಯನ್ನು ಗುರುಪ್ರೀತ್ ಹೊಂದಿದ್ದಾರೆ.
ಇದೇ ವೇಳೆ ಲಕ್ಕಿ ಡ್ರಾದಲ್ಲಿ ಪ್ರತಿಯೊಬ್ಬರೂ ತಮ್ಮ ಅದೃಷ್ಟವನ್ನು ಪ್ರಯತ್ನಿಸುತ್ತಲೇ ಇರಬೇಕೆಂದು ಸಿಂಗ್ ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


