ಪಾಕ್ ಗೆ ತೀವ್ರ ಮುಖಭಂಗ: ವಿಶ್ವಸಂಸ್ಥೆಯಲ್ಲಿ ಉಗ್ರರ ಪಟ್ಟಿಗೆ ಭಾರತೀಯರನ್ನು ಸೇರಿಸುವ ಯತ್ನ ವಿಫಲ
ಉಗ್ರರನ್ನು ಪೋಷಿಸಿಕೊಂಡು ಬರುತ್ತಿರುವ ಪಾಕಿಸ್ತಾನ ಇದೀಗ ವಿಶ್ವಸಂಸ್ಥೆಯಲ್ಲಿ ಭಾರತದ ಇಬ್ಬರನ್ನು ಉಗ್ರರ ಪಟ್ಟಿಗೆ ಸೇರಿಸುವ ಹುನ್ನಾರ ನಡೆಸಿತ್ತು. ಆದರೆ ಇದಕ್ಕೆ ವಿಶ್ವಸಂಸ್ಥೆ ಸೊಪ್ಪು ಹಾಕಲಿಲ್ಲ.

ವಿಶ್ವಸಂಸ್ಥೆ: ಉಗ್ರರನ್ನು ಪೋಷಿಸಿಕೊಂಡು ಬರುತ್ತಿರುವ ಪಾಕಿಸ್ತಾನ ಇದೀಗ ವಿಶ್ವಸಂಸ್ಥೆಯಲ್ಲಿ ಭಾರತದ ಇಬ್ಬರನ್ನು ಉಗ್ರರ ಪಟ್ಟಿಗೆ ಸೇರಿಸುವ ಹುನ್ನಾರ ನಡೆಸಿತ್ತು. ಆದರೆ ಇದಕ್ಕೆ ವಿಶ್ವಸಂಸ್ಥೆ ಸೊಪ್ಪು ಹಾಕಲಿಲ್ಲ.
ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಯ ಮೂಲಕ ಭಾರತದ ಅಂಗಾರ ಅಪ್ಪಾಜಿ ಹಾಗೂ ಗೋಬಿಂದ ಪಟ್ನಾಯಕ್ ಹೆಸರು ಸೇರ್ಪಡೆಗೆ ಪಾಕಿಸ್ತಾನ ಪ್ರಯತ್ನಿಸಿತ್ತು. ಆದರೆ ಪಾಕ್ ಪ್ರಯತ್ನ ಉಲ್ಟಾ ಹೊಡೆದಿದೆ.
ಅಲ್ ಕೈದಾ ನಿರ್ಬಂಧ ಸಮಿತಿಯಡಿ ಇಬ್ಬರನ್ನು ಉಗ್ರರ ಪಟ್ಟಿಗೆ ಸೇರಿಸಲು ಅಗತ್ಯವಾದ ಸಾಕ್ಷ್ಯಗಳನ್ನು ಪಾಕಿಸ್ತಾನ ನೀಡಿರಲಿಲ್ಲ. ಹೀಗಾಗಿ ಅಮೆರಿಕಾ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ಅಡ್ಡಿಪಡಿಸಿದೆ.
ಈ ಸಂಬಂಧ ವಿಶ್ವಸಂಸ್ಥೆಯ ಮಂಡಳಿಯ ಸದಸ್ಯರಿಗೆ ಭಾರತ ಕೃತಜ್ಞತೆ ಸಲ್ಲಿಸಿದೆ. ಇನ್ನು ಭಯೋತ್ಪಾದನೆ ವಿಚಾರವನ್ನೂ ರಾಜಕೀಯಗೊಳಿಸುವ ಪಾಕಿಸ್ತಾನದ ನಿರ್ಲಜ್ಜ ಯತ್ನವನ್ನು ಕಟುವಾಗಿ ಟೀಕಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


