ವಿದೇಶ

ಕೊರೋನಾ ವೈರಸ್: ವಿಶ್ವಾದ್ಯಂತ ಕೋವಿಡ್-19ಗೆ 3, 13,216 ಮಂದಿ ಬಲಿ, ಸೋಂಕಿತರ ಸಂಖ್ಯೆ 47,20,077ಕ್ಕೆ ಏರಿಕೆ

ಜಗತ್ತಿನ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಈ ವರೆಗೂ ಜಗತ್ತಿನಾದ್ಯಂತ ಕೊರೋನಾ ವೈರಸ್ ಗೆ 3,13,216 ಮಂದಿ ಬಲಿಯಾಗಿದ್ದಾರೆ.

ಕೊರೋನಾ ವೈರಸ್: ವಿಶ್ವಾದ್ಯಂತ ಕೋವಿಡ್-19ಗೆ 3, 13,216 ಮಂದಿ ಬಲಿ, ಸೋಂಕಿತರ ಸಂಖ್ಯೆ 47,20,077ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
Published On :

ವಾಷಿಂಗ್ಟನ್: ಜಗತ್ತಿನ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಈ ವರೆಗೂ ಜಗತ್ತಿನಾದ್ಯಂತ ಕೊರೋನಾ ವೈರಸ್ ಗೆ 3,13,216 ಮಂದಿ ಬಲಿಯಾಗಿದ್ದಾರೆ. 

ಹೌದು.. ಜಗತ್ತಿನಾದ್ಯಂತ ಕೊರೋನಾ ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ 3,13,216ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 47,20,077ಕ್ಕೆ ಏರಿಕೆಯಾಗಿದೆ. ಮೂಲಗಳ ಪ್ರಕಾರ ಮಾರಕ ಕೊರೋನಾ ಸೋಂಕಿನಿಂದ 213 ರಾಷ್ಟ್ರಗಳು ತತ್ತರಿಸಿದ್ದು, ಸಮಾಧಾನಕರ ಸಂಗತಿ ಎಂದರೆ, ಈ ಸೋಂಕು ಕಾಣಿಸಿಕೊಂಡವರಲ್ಲಿ ವಿಶ್ವದಲ್ಲಿ 18.10 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಜಾನ್ ಹಾಪ್ಕಿನ್ಸ್ ವಿಶ್ವ ವಿದ್ಯಾಲಯ ನೀಡಿರುವ ಮಾಹಿತಿಯಂತೆ ವಿಶ್ವದ 25.94ಲಕ್ಷ ಮಂದಿ ಈ ಸೋಂಕಿನಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರಲ್ಲಿ 25.49 ಮಂದಿಯಲ್ಲಿ ಸೋಂಕು ಸ್ವಲ್ಪ ಮಟ್ಟಿಗೆ ಬಾಧಿಸುತ್ತಿದೆ. ಇವರ ಸ್ಥಿತಿ ಸುಧಾರಿಸುವ ವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಆದರೆ, 44.82 ಸಾವಿರ ಮಂದಿ ಗಂಭೀರ ಅಥವಾ ಅಪಾಯಕರ ಸ್ಥಿತಿಯಲ್ಲಿದ್ದಾರೆ. ಇದುವರೆಗೆ ವಿಶ್ವದ ರಾಷ್ಟ್ರಗಳಲ್ಲಿ 21.22 ಲಕ್ಷ ಪ್ರಕರಣಗಳು ಬಹುತೇಕ ಗುಣಮುಖಪ್ರಕರಣಗಳಾಗಿದ್ದು, ಇವುಗಳಲ್ಲಿ 18.10 ಲಕ್ಷ ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. 

ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 1,507,861ಕ್ಕೆ ತಲುಪಿದ್ದರೆ, ಒಟ್ಟು ಮೃತಪಟ್ಟವರ ಸಂಖ್ಯೆ 89,556ಕ್ಕೆ ಏರಿಕೆಯಾಗಿದೆ. ಭಾನುವಾರದ ವೇಳೆಗೆ 23, 576 ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ರಷ್ಯಾದಲ್ಲಿ 272,043 ಪ್ರಕರಣಗಳು  ಪತ್ತೆಯಾಗಿದ್ದು, 2,537 ಮಂದಿ ಮೃತಪಟ್ಟಿದ್ದಾರೆ. ಚೀನಾದಲ್ಲಿ 82,941 ಮಂದಿಯಲ್ಲಿ ಈ ಸೋಂಕು ದೃಢಪಟ್ಟಿದ್ದು, 4,633 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಭಾರತದಲ್ಲಿ ಇಲ್ಲಿಯವರೆಗೆ 90,648 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 2,871 ಮಂದಿ ಸಾವನ್ನಪ್ಪಿದ್ದಾರೆ. ಬ್ರಿಟನ್ ನಲ್ಲಿ 240, 161 ಮಂದಿಗೆ ಸೋಂಕು ತಗುಲಿದ್ದು, 34,466 ಮಂದಿ ಸಾವನ್ನಪ್ಪಿದ್ದಾರೆ. ಇಟಲಿಯಲ್ಲಿ 224,760 ಮಂದಿಗೆ ಈ ಸೋಂಕು ದೃಢಪಟ್ಟಿದ್ದು, 31,763 ಮಂದಿ ಸಾವನ್ನಪ್ಪಿದ್ದಾರೆ. ಸ್ಪೇನ್‌‌ನಲ್ಲಿ 276,505 ಮಂದಿಗೆ ಈ ಸೋಂಕು ತಗುಲಿದ್ದು, 27,563 ಮಂದಿಮೃತಪಟ್ಟಿದ್ದಾರೆ. ಪಾಕಿಸ್ತಾನದಲ್ಲಿ 38,799 ಜನರಲ್ಲಿ ಈ ಸೋಂಕು ದೃಢಪಟ್ಟಿದ್ದು, 834 ಮಂದಿ ಸಾವನ್ನಪ್ಪಿದ್ದಾರೆ.

ಜನವರಿ 22ರಿಂದ ಈ ಸೋಂಕು ಕಾಣಿಸಿಕೊಂಡಿದ್ದು, ಫೆಬ್ರವರಿ 8ರವರೆಗೆ ಸಾವಿನ ಸಂಖ್ಯೆ ಹೆಚ್ಚಿರಲಿಲ್ಲ. ಫೆಬ್ರವರಿ 8ರಿಂದ ತನ್ನ ಮಾರ್ಚ್ 2ರವರೆಗೆ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದ ವಿಶ್ವದ ಹಲವು ರಾಷ್ಟ್ರಗಳು ಎಚ್ಚೆತ್ತುಕೊಂಡು ಲಾಕ್ ಡೌನ್ ಜಾರಿಗೊಳಿಸಿವೆ. ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟುವುದೇ ಪರಿಹಾರ ಮಾರ್ಗವಾಗಿದ್ದು, ಪ್ರಸ್ತುತ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಜಾರಿಗೊಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.