ವಿದೇಶ

ತಾಯಿ ಜೊತೆ ಜಗಳವಾಡಿ, ಲ್ಯಾಂಬೊರ್ಗಿನಿ ಕಾರ್ ಖರೀದಿಸಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ 5ರ ಬಾಲಕ, ವಿಡಿಯೋ!

ತಾಯಿ ಜೊತೆ ಜಗಳವಾಡಿದ 5 ವರ್ಷದ ಬಾಲಕನೊಬ್ಬ ಜೇಬಿಗೆ 3 ಡಾಲರ್ ಇರಿಸಿಕೊಂಡು ಲ್ಯಾಂಬೊರ್ಗಿನಿ ಕಾರನ್ನು ಖರೀದಿಸಲು ತಾಯಿಯ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ತಾಯಿ ಜೊತೆ ಜಗಳವಾಡಿ, ಲ್ಯಾಂಬೊರ್ಗಿನಿ ಕಾರ್ ಖರೀದಿಸಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದ 5ರ ಬಾಲಕ, ವಿಡಿಯೋ!
ಪೊಲೀಸರು
Published On :

ನ್ಯೂಯಾರ್ಕ್: ತಾಯಿ ಜೊತೆ ಜಗಳವಾಡಿದ 5 ವರ್ಷದ ಬಾಲಕನೊಬ್ಬ ಜೇಬಿಗೆ 3 ಡಾಲರ್ ಇರಿಸಿಕೊಂಡು ಲ್ಯಾಂಬೊರ್ಗಿನಿ ಕಾರನ್ನು ಖರೀದಿಸಲು ತಾಯಿಯ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ತನಗೆ ಲ್ಯಾಂಬೊರ್ಗಿನಿ ಕಾರು ಕೊಡಿಸುವಂತೆ ತಾಯಿಯನ್ನು ಬಾಲಕ ಕೇಳುತ್ತಿದ್ದ. ಇದಕ್ಕೆ ತಾಯಿ ಒಪ್ಪಿಗೆ ನೀಡದಿದ್ದಾಗ ಮುನಿಸಿಕೊಂಡ ಬಾಲಕ ತನ್ನ ತಾಯಿ ಕಾರನ್ನು ತೆಗೆದುಕೊಂಡು ಕ್ಯಾಲಿಫೋರ್ನಿಯಾಗೆ ಹೋಗುತ್ತಿದ್ದಾಗ ರಸ್ತೆ ಮಧ್ಯೆ ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿದ್ದರಿಂದ ಪೊಲೀಸರು ಕಾರನ್ನು ತಡೆದು ನಿಲ್ಲಿಸಿದಾಗ ಅವರಿಗೆ ಶಾಕ್ ಎದುರಾಗಿತ್ತು. 

ನಂತರ ಬಾಲಕನನ್ನು ವಿಚಾರಿಸಿದಾಗ ಆತ ಲ್ಯಾಂಬೊರ್ಗಿನಿ ಕಾರನ್ನು ತರಲು ತೆರಳುತ್ತಿರುವುದಾಗಿ ತಿಳಿಸಿದ್ದಾನೆ. ಇದಕ್ಕೆ ಪೊಲೀಸರು ಬಾಲಕನಿಗೆ ಹೊಸ ಲ್ಯಾಂಬೊರ್ಗಿನಿ ಕಾರಿನ ಬೆಲೆ ಸುಮಾರು 2 ಲಕ್ಷ ಡಾಲರ್ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಬಗ್ಗೆ ಬಾಲಕನ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಅವರನ್ನು ವಿಚಾರಿಸಿದಾಗ ಈ ಮೊದಲು ಬಾಲಕ ಕಾರು ಚಲಾಯಿಸಿರಲಿಲ್ಲ ಮತ್ತು ಈ ರೀತಿ ವರ್ತಿಸಿರಲಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.