ವಿದೇಶ

ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಇಟಲಿ ಸರ್ಕಾರದಿಂದ ಹೆಚ್ಚುವರಿ 25 ಶತಕೋಟಿ ಯೂರೊ ಮಂಜೂರು

ಮಾರಣಾಂತಿಕ ಕರೋನವೈರಸ್ (ಕೊವಿದ್‍ -19) ವಿರುದ್ಧ ಹೋರಾಟಕ್ಕೆ ಇಟಲಿ ಹೆಚ್ಚುವರಿ 25 ಶತಕೋಟಿ ಯುರೋ ( ಸುಮಾರು 28 ಶತಕೋಟಿ ಅಮೆರಿಕನ್‍ ಡಾಲರ್ ) ವಿನಿಯೋಗಿಸಲು ಸಜ್ಜಾಗಿದೆ ಎಂದು ಪ್ರಧಾನಿ ಗೈಸೆಪೆ ಕಾಂಟೆ ಬುಧವಾರ ಪ್ರಕಟಿಸಿದ್ದಾರೆ.

ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಇಟಲಿ ಸರ್ಕಾರದಿಂದ ಹೆಚ್ಚುವರಿ 25 ಶತಕೋಟಿ ಯೂರೊ ಮಂಜೂರು
ಸಂಗ್ರಹ ಚಿತ್ರ
Published On :

ಜಿನೀವಾ: ಮಾರಣಾಂತಿಕ ಕರೋನವೈರಸ್ (ಕೊವಿದ್‍ -19) ವಿರುದ್ಧ ಹೋರಾಟಕ್ಕೆ ಇಟಲಿ ಹೆಚ್ಚುವರಿ 25 ಶತಕೋಟಿ ಯುರೋ ( ಸುಮಾರು 28 ಶತಕೋಟಿ ಅಮೆರಿಕನ್‍ ಡಾಲರ್ ) ವಿನಿಯೋಗಿಸಲು ಸಜ್ಜಾಗಿದೆ ಎಂದು ಪ್ರಧಾನಿ ಗೈಸೆಪೆ ಕಾಂಟೆ ಬುಧವಾರ ಪ್ರಕಟಿಸಿದ್ದಾರೆ.

‘ಸರ್ಕಾರ 25 ಶತಕೋಟಿ ಯುರೋಗಳಷ್ಟು ಭಾರೀ ಮೊತ್ತದ ಅನುದಾನ ಒದಗಿಸಿದೆ. ಇದನ್ನು ತಕ್ಷಣವೇ ಬಳಸಿಕೊಳ್ಳುವುದಿಲ್ಲ. ಆದರೆ ಈ ತುರ್ತು ಪರಿಸ್ಥಿತಿಯ ಎಲ್ಲಾ ತೊಂದರೆಗಳನ್ನು ಎದುರಿಸಲು ಅನುದಾನ ಬಳಕೆಗೆ ಲಭ್ಯವಿರುತ್ತದೆ.’ ಎಂದು ಕಾಂಟೆ ಸಚಿವ ಸಂಪುಟ ಸಭೆ ನಂತರ ತಿಳಿಸಿದ್ದಾರೆ.

ರೋಗಿಗಳನ್ನು ಪ್ರತ್ಯೇಕವಾಗಿರಿಸುವ ಕ್ರಮಗಳನ್ನು ಕಠಿಣಗೊಳಿಸುವಂತೆ ವೈರಸ್ ಪೀಡಿತ ಲೊಂಬಾರ್ಡಿ ಸೇರಿದಂತೆ ದೇಶದ ಉತ್ತರದ ಪ್ರದೇಶಗಳ ಅಧಿಕಾರಿಗಳ ಮನವಿಯನ್ನು ಪರಿಶೀಲಿಸಲು ಇಟಾಲಿಯನ್ ಸರ್ಕಾರ ಸಿದ್ಧವಾಗಿದೆ ಎಂದು ಕಾಂಟೆ ಹೇಳಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.