ಕೊರೋನಾವೈರಸ್: ಇಟಲಿಯಲ್ಲಿ 24 ಗಂಟೆಗಳಲ್ಲಿ 49 ಸಾವು
ಕಳೆದ 24 ಗಂಟೆಗಳಲ್ಲಿ 49 ಕೊರೋನಾ ಸೋಂಕಿನಿಂದ ಹೊಸ ಸಾವಿನ ಪ್ರಕರಣದೊಂದಿಗೆ, ಮಾರಣಾಂತಿಕ ಕೊರೋನಾವೈರಸ್‌ಗೆ ಏಕಾಏಕಿ ಸಾವನ್ನಪ್ಪಿದವರ ಸಂಖ್ಯೆ ಇಟಲಿಯಲ್ಲಿ 196 ಕ್ಕೆ ಏರಿಕೆಯಾಗಿದೆ.

ರೋಮ್: ಕಳೆದ 24 ಗಂಟೆಗಳಲ್ಲಿ 49 ಕೊರೋನಾ ಸೋಂಕಿನಿಂದ ಹೊಸ ಸಾವಿನ ಪ್ರಕರಣದೊಂದಿಗೆ, ಮಾರಣಾಂತಿಕ ಕೊರೋನಾವೈರಸ್‌ಗೆ ಏಕಾಏಕಿ ಸಾವನ್ನಪ್ಪಿದವರ ಸಂಖ್ಯೆ ಇಟಲಿಯಲ್ಲಿ 196 ಕ್ಕೆ ಏರಿಕೆಯಾಗಿದೆ.
15 ದಿನಗಳ ಹಿಂದೆ ಇಲ್ಲಿ ಸಾಂಕ್ರಾಮಿಕ ರೋಗ ಹರಡಿದ ನಂತರ ಒಟ್ಟು 3,916 ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 2,394 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 1,060 ಮಂದಿ ಸೋಂಕಿತರನ್ನು ಅವರ ಮನೆಗಳಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಾಗರಿಕ ಸಂರಕ್ಷಣಾ ಇಲಾಖೆ ಶುಕ್ರವಾರ ತಿಳಿಸಿದೆ. ಈ ಅಂಕಿ ಅಂಶವು ಚೇತರಿಕೆ ಮತ್ತು ಸಾವಿನ ಪ್ರಕರಣಗಳನ್ನು ಒಳಗೊಂಡಿಲ್ಲ. ಎಂದು ನಾಗರಿಕ ಸಂರಕ್ಷಣಾ ವಿಭಾಗದ ಮುಖ್ಯಸ್ಥ ಏಂಜೆಲೊ ಬೊರೆಲ್ಲಿ ಹೇಳಿದ್ದಾರೆ.
197 ಜನರು ಸಾವನ್ನಪ್ಪಿದ್ದಾರೆ ಮತ್ತು 523 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಬೊರೆಲ್ಲಿ ಸುದ್ದಿಗಾರರಿಗೆ ಸುದ್ದಿಗಾರರಿಗೆ ತಿಳಿಸಿದರು. ಚೇತರಿಕೆ ಪ್ರಮಾಣ 11.28 ರಷ್ಟಿದೆ ಮತ್ತು ಮೃತರು ಪ್ರಮಾಣ 4.25 ರಷ್ಟಿದೆ " ಎಂದು ಕೊರೊನಾವೈರಸ್ ತುರ್ತು ಪರಿಸ್ಥಿತಿಯ ಆಯುಕ್ತರಾಗಿಯೂ ಕಾರ್ಯನಿರ್ವಹಿಸುತ್ತಿರುವ ಬೊರೆಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


