ಕರೋನ ವೈರಸ್ ಮಹಾಮಾರಿಗೆ ಆಸ್ಪತ್ರೆ ಮಾಲೀಕನೇ ಬಲಿ!
ಚೀನಾದ ವುಹಾನ್ ನಗರದಲ್ಲಿ ಕರೋನ ವೈರಸ್ ಮಹಾಮಾರಿ ವಿಶ್ವದಾದ್ಯಂತ ಬಹಳ ಸುದ್ದಿ ಮಾಡಿದೆ.

ಬೀಜಿಂಗ್: ಚೀನಾದ ವುಹಾನ್ ನಗರದಲ್ಲಿ ಕರೋನ ವೈರಸ್ ಮಹಾಮಾರಿ ವಿಶ್ವದಾದ್ಯಂತ ಬಹಳ ಸುದ್ದಿ ಮಾಡಿದೆ.
ಈಗ ಅದರ ಹೆಸರು ಕೇಳಿದರೆ ಜನ ಬೆಚ್ಚಿಬೀಳುತ್ತಾರೆ. ಮಾರುದ್ದ ಓಡುತ್ತಾರೆ, ಅಲ್ಲಿ ನಿರಂತರ ಮರಣಗಂಟೆ, ಮರಣ ಮೃದಂಗ ಬಾರಿಸುತ್ತಲೇ ಇದೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಈಗ ನಗರದ ಆಸ್ಪತ್ರೆಯೊಂದರ ನಿರ್ದೇಶಕರೇ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ದೇಶಾದ್ಯಂತ ಹರಡಿರುವ ಕೊರೋನಾ ವೈರಸ್ ಇದೇ ಮೊದಲ ಬಾರಿಗೆ ವೈದ್ಯಕೀಯ ಕ್ಷೇತ್ರದ ಪ್ರಮುಖರು ಬಲಿಯಾಗಿದ್ದಾರೆ ಎಂದು ಚೀನಾ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ವರ್ಷಾಂತ್ಯದಲ್ಲಿ ವುಹಾನ್ ನಗರದಲ್ಲಿ ಪತ್ತೆಯಾಗಿದೆ ಎನ್ನಲಾದ ಕೊರೋನಾ ವೈರಸ್ ಸೋಂಕು ಚೀನಾದಲ್ಲಿ 72 ಸಾವಿರ ಜನರಿಗೆ ಜನರಿಗೆ ತಗಲಿದ್ದು, ಈವರೆಗೆ ಸುಮಾರು ಎರಡು ಸಾವಿರ ಜನರನ್ನೂ ಬಲಿತೆಗೆದುಕೊಂಡಿದೆ.
ವುಹಾನ್ನಲ್ಲಿರುವ ವುಚಾಂಗ್ ಆಸ್ಪತ್ರೆಯ ನಿರ್ದೇಶಕರಾದ ಲಿಯು ಝಿಮಿಂಗ್ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಝಿಮಿಂಗ್ರನ್ನು ಬದುಕಿಸಿಕೊಳ್ಳಲು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿವೆ ಎಂದೂ ಸರಕಾರಿ ಪ್ರಸಾರ ಸಂಸ್ಥೆ ಸಹ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


