ವಿಶ್ವ ಪಾರಂಪರಿಕ ತಾಣದಲ್ಲಿ ಪೋರ್ನ್ ಚಿತ್ರೀಕರಣ: ರೊಚ್ಚಿಗೆದ್ದ ಭಕ್ತಾದಿಗಳು!
ವಿಶ್ವ ಪಾರಂಪರಿಕ ತಾಣದಲ್ಲಿ ಪೋರ್ನ್ ಚಿತ್ರೀಕರಣ ನಡೆಸಿ, ಪೋಸ್ಟ್ ಮಾಡಿರುವ ಜನಪ್ರಿಯ ಇಟ್ಯಾಲಿಯನ್ ಜೋಡಿ ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಯಾಂಗೊನ್: ವಿಶ್ವ ಪಾರಂಪರಿಕ ತಾಣದಲ್ಲಿ ಪೋರ್ನ್ ಚಿತ್ರೀಕರಣ ನಡೆಸಿ, ಪೋಸ್ಟ್ ಮಾಡಿರುವ ಜನಪ್ರಿಯ ಇಟ್ಯಾಲಿಯನ್ ಜೋಡಿ ಈಗ ಜನರ ಕೆಂಗಣ್ಣಿಗೆ ಗುರಿಯಾಗಿದೆ.
11 ತಿಂಗಳಿನ ಹಿಂದಷ್ಟೇ ಈ 23 ವರ್ಷದ ಇಟ್ಯಾಲಿಯನ್ ಜೋಡಿ (YeeesYeeesYeees) ಪೋರ್ನ್ ಹಬ್ ನಲ್ಲಿ ಸಕ್ರಿಯರಾಗಿದ್ದು, ಮಯನ್ಮಾರ್ ನ ವಿಶ್ವಪಾರಂಪರಿಕ ತಾಣ, ಜನಪ್ರಿಒಯ ಪ್ರವಾಸಿ ತಾಣವಾಗಿರುವ ಬೌದ್ಧ ಪಗೋಡಾದ ಬಳಿ ಪೋರ್ನ್ ಚಿತ್ರೀಕರಣ ನಡೆಸಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿದ್ದಾರೆ.
ಈ ಜೋಡಿಗೆ ಪೋರ್ನ್ ಹಬ್ ನಲ್ಲಿ 81,000 ಚಂದಾದಾರರಿದ್ದು, 11 ತಿಂಗಳಿನಿಂದ 35 ಮಿಲಿಯನ್ ವಿಡಿಯೋ ವೀಕ್ಷಕರಿದ್ದಾರೆ. ಈಗ ಈ ಜೋಡಿ ಮಯನ್ಮಾರ್ ನ ಬೌದ್ಧ ಪಗೋಡಾದ ಬಳಿ ಚಿತ್ರೀಕರಣ ಮಾಡಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡಿರುವ ವಿಡಿಯೋಗೆ ಮಯನ್ಮಾರ್ ನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನ್ಯೂ ಫೆಂಟಾಸ್ಟಿಕ್ ಏಷ್ಯಾ ಟೂರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪಾರಂಪರಿಕ ತಾಣದಲ್ಲಿನ ಭದ್ರತೆಯ ಕುರಿತು ಪ್ರಶ್ನಿಸಿದ್ದಾರೆ. ಮಯನ್ಮಾರ್ ನ ಅಧಿಕಾರಿಗಳು ಇದರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


