ಉಗ್ರರಿಗೆ ಆರ್ಥಿಕ ನೆರವು: ಹಫೀಜ್ ಸಯೀದ್ ಗೆ 11 ವರ್ಷಗಳ ಜೈಲು ಶಿಕ್ಷೆ
ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದ ಭಯೋತ್ಪಾದಕ, ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಗೆ ಪಾಕಿಸ್ತಾನ ಭಯೋತ್ಪಾನೆ ನಿಗ್ರಹ ನ್ಯಾಯಾಲಯ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಲಾಹೋರ್: ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದ ಭಯೋತ್ಪಾದಕ, ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಗೆ ಪಾಕಿಸ್ತಾನ ಭಯೋತ್ಪಾನೆ ನಿಗ್ರಹ ನ್ಯಾಯಾಲಯ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕರಿಗೆ ಆರ್ಥಿಕ ಸಹಕಾರ ನೀಡುತ್ತಿದ್ದ ಎರಡು ಪ್ರಕರಣದಲ್ಲಿ ಹಫೀಜ್ ಸಯೀದ್ ಗೆ ತಲಾ 5ವರೆ ವರ್ಷಗಳ ಶಿಕ್ಷೆ ವಿಧಿಸಲಾಗಿದೆ
ಡಿ.11 ರಂದು ಹಫೀಜ್ ಸಯೀದ್ ಹಾಗೂ ಸಹಚರರ ವಿರುದ್ಧದ ಪ್ರಕರಣದಲ್ಲಿ ದೋಷಾರೋಪಣೆ ಸಲ್ಲಿಸಲಾಗಿತ್ತು. ಈ ಬಳಿಕ ಕೋರ್ಟ್ ಪ್ರತಿ ದಿನವೂ ವಿಚಾರಣೆ ನಡೆಸಿದ್ದು ತೀರ್ಪು ಪ್ರಕಟಿಸಿದೆ. 5 ವರೆ ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವುದರ ಜೊತೆಗೆ ಪ್ರಕರಣದ ಅಪರಾಧಿಗಳಿಗೆ ತಲಾ 15,000 ರೂ ದಂಡ ವಿಧಿಸಿದೆ.
ಇನ್ನೂ ನಾಲ್ಕು ಪ್ರಕರಣಗಳು ಸಯೀದ್ ವಿರುದ್ಧ ಇದ್ದು, ವಿಚಾರಣೆ ಅಂತ್ಯಗೊಳ್ಳುವವರೆಗೂ ಈಗಾಗಲೇ ವಿಚಾರಣೆ ಮುಕ್ತಾಯಗೊಂಡಿರುವ 2 ಪ್ರಕರಣಗಳ ತೀರ್ಪನ್ನು ವಿಳಂಬವಾಗಿ ಪ್ರಕಟಿಸಲು ಹಫೀಜ್ ಸಯೀದ್ ಸಲ್ಲಿಸಿದ್ದ ಅರ್ಜಿಯನ್ನು ಲಾಹೋರ್ ನ್ಯಾಯಾಲಯ ಅಂಗೀಕರಿಸಿತ್ತು.
ಸಯೀದ್, ಜಾಫರ್ ಇಕ್ಬಾಲ್, ಯಾಹ್ಯಾ ಅಜೀಜ್, ಅಬ್ದುಲ್ ರೆಹಮಾನ್ ಮಕ್ಕಿ ವಿರುದ್ಧದ ಇನ್ನೂ ನಾಲ್ಕು ಪ್ರಕರಣಗಳು ಭಯೋತ್ಪಾದನ ನಿಗ್ರಹ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


