ಪಾಕ್ ಸಿನಿಮಾ ನಟಿಯೊಂದಿಗೆ ಭೂತಕ ಪಾತಕಿ ದಾವೂದ್ ಇಬ್ರಾಹಿಂ ಪ್ರೇಮಾಯಣ?
1993 ರ ಮುಂಬೈ ಸರಣಿ ಸ್ಫೋಟಗಳ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ಚಿತ್ರರಂಗದ ಪ್ರಮುಖ ನಟಿ ಮೆಹ್ವೀಶ್ ಹಯಾತ್ ರೊಂದಿಗೆ ಸಂಬಂಧವಿದೆಯೇ? ಎಂದು ಪ್ರಶ್ನಿಸಿದರೆ ಹೌದು ಎನ್ನುತ್ತವೆ ಕೆಲವು ಪಾಕಿಸ್ತಾನದ ಚಿತ್ರರಂಗದ ಮೂಲಗಳು.

ಕರಾಚಿ: 1993 ರ ಮುಂಬೈ ಸರಣಿ ಸ್ಫೋಟಗಳ ರೂವಾರಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ಚಿತ್ರರಂಗದ ಪ್ರಮುಖ ನಟಿ ಮೆಹ್ವೀಶ್ ಹಯಾತ್ ರೊಂದಿಗೆ ಸಂಬಂಧವಿದೆಯೇ? ಎಂದು ಪ್ರಶ್ನಿಸಿದರೆ ಹೌದು ಎನ್ನುತ್ತವೆ ಕೆಲವು ಪಾಕಿಸ್ತಾನದ ಚಿತ್ರರಂಗದ ಮೂಲಗಳು.
ದಶಕಗಳ ಹಿಂದೆ ಭಾರತದಿಂದ ಪರಾರಿಯಾಗಿರುವ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯ ಪ್ರಮುಖ ಪ್ರದೇಶದ ಬಂಗಲೆಯಲ್ಲಿ ವಾಸಿಸುತ್ತಿದ್ದಾನೆ. ದಾವೂದ್ ಇಬ್ರಾಹಿಂ ಪಾಕಿಸ್ತಾನಿ ಚಲನಚಿತ್ರೋದ್ಯಮದೊಂದಿಗೆ, 37 ವರ್ಷದ ನಟಿ ಮೆಹ್ವಿಶ್ ಹಯಾತ್ ಜೊತೆ ಸಂಬಂಧ ಹೊಂದಿದ್ದಾನೆ. ದಾವೂದ್ ಆಕೆಯೊಂದಿಗೆ ನಿಯಮಿತ ಸಂಪರ್ಕದಲ್ಲಿರುತ್ತಾನೆ ಎಂಬ ಅಂಶ ಹೊರಬಿದ್ದಿದೆ.
ಈ ಹಿಂದೆ ದಾವೂದ್ ಇಬ್ರಾಹಿಂ ಮುಂಬೈನಲ್ಲಿ ನಲ್ಲಿದ್ದಾಗಲೂ, ಬಾಲಿವುಡ್ ಸಿನಿ ನಟರೊಂದಿಗೆ ನಿಕಟ ಸಂಬಂಧ ಹೊಂದಿದ್ದ. ಅ ಸಮಯದಲ್ಲಿ, ದಾವೂದ್ ಹಲವು ಬಾಲಿವುಡ್ ಸಿನಿಮಾಗಳಿಗೆ ಬಂಡವಾಳ ಹೂಡಿದ್ದ, ಹಲವಾರು ಬಾಲಿವುಡ್ ನಟರು ದಾವೂದ್ ಮನೆಯಲ್ಲಿ ನಡೆಯುತ್ತಿದ್ದ ಔತಣ ಕೂಟಗಳಿಗೆ ಹಾಜರಾಗುತ್ತಿದ್ದರು.ಮುಂಬೈನಿಂದ ಕರಾಚಿಗೆ ಪರಾರಿಯಾದ ನಂತರ ಪಾತಕಿ ದಾವೂದ್ ಇಬ್ರಾಹಿಂ ಚಿತ್ರರಂಗದ ಬಗ್ಗೆ ಆಸಕ್ತಿ ಕಳೆದುಕೊಂಡಿಲ್ಲ ಎಂದು ಹೇಳಲಾಗಿದೆ.
ಪಾಕಿಸ್ತಾನ ನಟಿ ಮೆಹ್ವಿಶ್, ದಾವೂದ್ ನೊಂದಿಗೆ ಹೊಂದಿರುವ ಒಡನಾಟದಿಂದಾಗಿ ೨೦೧೯ ರಲ್ಲಿ ಆಕೆಗೆ ಪ್ರತಿಷ್ಟಿತ ಪಾಕಿಸ್ತಾನ ನಾಗರಿಕ ಪುರಸ್ಕಾರ ’ತಮ್ಗಾ ಇಂತಿಯಾಜ್’ ಲಭಿಸಿದೆ ಎಂಬುದು ವರದಿ. ಅಂತಹ ಪ್ರಖ್ಯಾತ ನಟಿಯಲ್ಲದಿದ್ದರೂ, ಮೆಹ್ವಿಶ್ ಗೆ ಸರ್ಕಾರ ಪ್ರಶಸ್ತಿ ನೀಡಿರುವುದು ಪಾಕ್ ಚಿತ್ರರಂಗಕ್ಕೆ ಅಚ್ಚರಿ ಮೂಡಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


