ವಿದೇಶ

ನ್ಯೂಜಿಲೆಂಡ್ ಶೂಟಿಂಗ್: ಬಂದೂಕುಧಾರಿಯ ಹುಚ್ಚಾಟಕ್ಕೆ 5 ಭಾರತೀಯರೂ ಸೇರಿ 50 ಮಂದಿ ಸಾವು

ನ್ಯೂಜಿಲೆಂಡ್ ನಲ್ಲಿ ನಿನ್ನೆ ನಡೆದ ಬಂದೂಕುಧಾರಿಯ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೆ ಏರಿಕೆಯಾಗಿದ್ದು, ಸಾವನ್ನಪ್ಪಿದವರ ಪೈಕಿ ಐದು ಮಂದಿ ಭಾರತೀಯರೂ ಸೇರಿದ್ದಾರೆ.

ನ್ಯೂಜಿಲೆಂಡ್ ಶೂಟಿಂಗ್: ಬಂದೂಕುಧಾರಿಯ ಹುಚ್ಚಾಟಕ್ಕೆ 5 ಭಾರತೀಯರೂ ಸೇರಿ 50 ಮಂದಿ ಸಾವು
ಸಂಗ್ರಹ ಚಿತ್ರ
Published On :
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ನಲ್ಲಿ ನಿನ್ನೆ ನಡೆದ ಬಂದೂಕುಧಾರಿಯ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೆ ಏರಿಕೆಯಾಗಿದ್ದು, ಸಾವನ್ನಪ್ಪಿದವರ ಪೈಕಿ ಐದು ಮಂದಿ ಭಾರತೀಯರೂ ಸೇರಿದ್ದಾರೆ. 
ನಿನ್ನೆ ಶೂಟಿಂಗ್ ನಲ್ಲಿ 50 ಮಂದಿಯ ಜೀವ ತೆಗೆದಿದ್ದ ದಾಳಿಕೋರ ಬ್ರೆಂಟ್ಟನ್ ಟ್ಯಾರಂಟ್ 2017ರ ನವೆಂಬರ್‌ನಲ್ಲಿ ಕ್ಯಾಟಗರಿ ಎ ಬಂದೂಕು ಪರವಾನಗಿ ಪಡೆದುಕೊಂಡಿದ್ದ ಮತ್ತು ಬಂದೂಕು, ಗುಂಡುಗಳನ್ನು ಖರೀದಿಸಿ ಸಂಗ್ರಹಿಸಿಕೊಂಡಿದ್ದ. ಶುಕ್ರವಾರ ನಡೆಸಿದ ದಾಳಿಯಲ್ಲಿ ಆತ ಐದು ಶಸ್ತ್ರಾಸ್ತ್ರಗಳನ್ನು ಬಳಸಿದ್ದ. ಎರಡು ಸೆಮಿ ಆಟೋಮೆಟಿಕ್‌ ರೈಫಲ್ ಗಳು, ಎರಡು ಶಾಟ್‌ ಗನ್‌ಗಳು ಹಾಗೂ ಲಿವರ್‌ ಆ್ಯಕ್ಷನ್ ಬಂದೂಕಿನೊಂದಿಗೆ ದಾಳಿ ಮಾಡಿರುವುದಾಗಿ ತಿಳಿದು ಬಂದಿದೆ.
ಸಾವನ್ನಪ್ಪಿದ ಭಾರತೀಯರನ್ನು ಮಹೇಬೂಬ್ ಖೋಖರ್, ರಮೀಜ್ ವೋರಾ, ಆಸಿಫ್ ವೋರಾ, ಅನ್ಸಿ ಅಲಿಬಾವಾ, ಮತ್ತು ಓಝೈರ್ ಕಾದಿರ್ ಎಂದು ಗುರುತಿಸಲಾಗಿದೆ. ಅಂತೆಯೇ ಸಾವನ್ನಪ್ಪಿದವರ ಭಾರತೀಯ ಶವಗಳನ್ನು ಅವರ ಕುಟುಂಬಸ್ಥರಿಗೆ ರವಾನಿಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.