ಮಹತ್ವದ ಒಪ್ಪಂದ: ಭಾರತದಲ್ಲಿ 6 ಅಮೆರಿಕನ್ ಪರಮಾಣು ಸ್ಥಾವರಗಳ ನಿರ್ಮಾಣ
ವಾಣಿಜ್ಯಾತ್ಮಕವಾಗಿ ಭಾರತದೊಂದಿಗೆ ಅಸಹಾಕಾರ ಹೊಂದಿರುವ ಟ್ರಂಪ್ ಆಡಳಿತ ಇದೀಗ ಮಹತ್ವದ ನಡೆಯೊಂದರಲ್ಲಿ ಬೃಹತ್ ಪ್ರಮಾಣದಲ್ಲಿ ಭಾರತಕ್ಕೆ ಪರಮಾಣು ಇಂಧನ ಮಾರಾಟಕ್ಕೆ ಹಾಕಿದ್ದು, ಪರಿಣಾಮ ಭಾರತದಲ್ಲಿ ಬರೊಬ್ಬರಿ 6 ಅಮೆರಿಕನ್ ಪರಮಾಣು ಸ್ಥಾವರ ನಿರ್ಮಾಣ ಸಂಬಂಧ ಒಪ್ಪಂದಳಿಗೆ ಸಹಿ ಹಾಕಿದೆ.

Published On :
ವಾಷಿಂಗ್ಟನ್: ವಾಣಿಜ್ಯಾತ್ಮಕವಾಗಿ ಭಾರತದೊಂದಿಗೆ ಅಸಹಾಕಾರ ಹೊಂದಿರುವ ಟ್ರಂಪ್ ಆಡಳಿತ ಇದೀಗ ಮಹತ್ವದ ನಡೆಯೊಂದರಲ್ಲಿ ಬೃಹತ್ ಪ್ರಮಾಣದಲ್ಲಿ ಭಾರತಕ್ಕೆ ಪರಮಾಣು ಇಂಧನ ಮಾರಾಟಕ್ಕೆ ಹಾಕಿದ್ದು, ಪರಿಣಾಮ ಭಾರತದಲ್ಲಿ ಬರೊಬ್ಬರಿ 6 ಅಮೆರಿಕನ್ ಪರಮಾಣು ಸ್ಥಾವರ ನಿರ್ಮಾಣ ಸಂಬಂಧ ಒಪ್ಪಂದಳಿಗೆ ಸಹಿ ಹಾಕಿದೆ.
ಭದ್ರತೆ ಮತ್ತು ನಾಗರಿಕ ಪರಮಾಣು ಸಹಕಾರ ಒಪ್ಪಂದ ಅಡಿಯಲ್ಲಿ ಭಾರತ ಮತ್ತು ಅಮೆರಿಕ 6 ಅಮೆರಿಕನ್ ಪರಮಾಣು ಸ್ಥಾವರ ನಿರ್ಮಾಣಕ್ಕೆ ಸಹಿ ಹಾಕಿದ್ದು, ನಿನ್ನೆ ಈ ಬಗ್ಗೆ ಉಭಯ ದೇಶಗಳು ಜಂಟಿ ಹೇಳಿಕೆ ನೀಡಿವೆ. ವಾಷಿಂಗ್ಟನ್ ನಲ್ಲಿ ನಡೆದ ಭಾರತೀಯ ಪ್ರತಿನಿಧಿಗಳೊಂದಿಗಿನ ಸಭೆ ಬಳಿಕ ಅಮೆರಿಕ ಸರ್ಕಾರ ಬೃಹತ್ ಪ್ರಮಾಣದಲ್ಲಿ ಭಾರತಕ್ಕೆ ಪರಮಾಣು ಇಂಧನ ಮಾರಾಟಕ್ಕೆ ಸಹಿ ಹಾಕಿದೆ ಎನ್ನಲಾಗಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹಾಗೂ ಅಮೆರಿಕದ ಆ್ಯಂಡ್ರಿಯಾ ಥಾಂಪ್ಸನ್ ಅವರು ಪರಸ್ಪರ ಒಪ್ಪಂದಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಅಮರಿಕದ ಪಿಟ್ಸ್ ಬರ್ಗ್ ಮೂಲದ ವೆಸ್ಟಿಂಗ್ ಹೌಸ್ ಸಂಸ್ಥೆ ಭಾರತದಲ್ಲಿ ಪರಮಾಣು ಸ್ಥಾವರ ನಿರ್ಮಾಣ ಸಂಬಂಧ ಭಾರತದೊಂದಿಗೆ ಚರ್ಚೆ ನಡೆಸುತ್ತಿದೆ.
ಇನ್ನು ತನ್ನ ಪರಮಾಣು ಇಂಧನ ಸಾಮರ್ಥ್ಯವನ್ನು 2024ರ ವೇಳೆಗೆ ತ್ರಿಗುಣಗೊಳಿಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಆಸ್ಟ್ರೇಲಿಯಾ ಮತ್ತು ಅಮೆರಿಕದೊಂದಿಗೆ ನಿರಂತರ ಚರ್ಚೆ ನಡೆಸುತ್ತಿದೆ.
ಕಳೆದ ಅಕ್ಟೋಬರ್ ನಲ್ಲಿ ಭಾರತ ಮತ್ತು ರಷ್ಯಾ ಕೂಡ ಪರಸ್ಪರ ಒಪ್ಪಂದ ಮಾಡಿಕೊಂಡು, ಭಾರತದಲ್ಲಿ 6 ಪರಮಾಣು ಸ್ಥಾವರ ನಿರ್ಮಾಣ ಸಂಬಂಧ ಸಹಿ ಹಾಕಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


