ಬ್ರಿಟನ್ ಗೃಹ ಕಾರ್ಯದರ್ಶಿಯಾಗಿ ಭಾರತೀಯ ಮೂಲದ ಪ್ರೀತಿ ಪಟೇಲ್ ನೇಮಕ
ಬ್ರಿಟನ್ ನೂತನ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತೀಯ ಮೂಲದ ಬ್ರಿಟನ್ ರಾಜಕಾರಣಿ ಪ್ರೀತಿ ಪಟೇಲ್ ಅವರನ್ನು ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.

Published On :
ಲಂಡನ್: ಬ್ರಿಟನ್ ನೂತನ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತೀಯ ಮೂಲದ ಬ್ರಿಟನ್ ರಾಜಕಾರಣಿ ಪ್ರೀತಿ ಪಟೇಲ್ ಅವರನ್ನು ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ಈ ಮೂಲಕ ಬ್ರಿಟನ್ ಕ್ಯಾಬಿನೆಟ್ ನಲ್ಲಿ ಉನ್ನತ ಹುದ್ದೆಗೇರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಕೀರ್ತಿಗೆ ಪ್ರೀತಿ ಭಾಜನರಾಗಿದ್ದಾರೆ. 47 ವರ್ಷದ ಪ್ರೀತಿ ಪಟೇಲ್ ಈ ಹಿಂದೆ ಇಂಟರ್ ನ್ಯಾಶನಲ್ ಡೆವಲಪ್ ಮೆಂಟ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದು ಬೋರಿಸ್ ಜಾನ್ಸನ್ ಅವರ ನಾಯಕತ್ವ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ಪ್ರೀತಿಗೆ ಮುನ್ನ ಗೃಹ ಕಾರ್ಯದರ್ಶಿಗಳಾಗಿದ್ದ ಸಾಜಿದ್ ಜಾವಿದ್ ಅವರನ್ನು ನೂತನ ಪ್ರಧಾನಿ ಜಾನ್ಸನ್ ಚಾನ್ಸಲರ್ ಆಗಿ ನೇಮಕ ಮಾಡಿದ್ದಾರೆ. ಹಾಗೆ ಜಾವಿದ್ ಅವರಿಂದ ತೆರವಾದ ಸ್ಥಾನಕ್ಕೆ ಪ್ರೀತಿ ನೇಮಕವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


