ಕೇರಳ ವ್ಯಕ್ತಿಗೆ 28 ಕೋಟಿ ರು. ದುಬೈ ಲಾಟರಿ, ಟಾಪ್ 10 ರಲ್ಲಿ 8 ಭಾರತೀಯರಿಗೆ ಜಾಕ್ ಪಾಟ್
ಕೇರಳದ ಶರತ್ ಪುರುಷೋತ್ತಮಾನ್ ಎಂಬುವವರು ದುಬೈನ ಬಿಗ್ ಟಿಕೆಟ್ ರಾಫೆಲ್ ಲಾಟರಿಯಲ್ಲಿ ಬರೋಬ್ಬರಿ 28 ಕೋಟಿ ರುಪಾಯಿ...

Published On :
ದುಬೈ: ಕೇರಳದ ಶರತ್ ಪುರುಷೋತ್ತಮಾನ್ ಎಂಬುವವರು ದುಬೈನ ಬಿಗ್ ಟಿಕೆಟ್ ರಾಫೆಲ್ ಲಾಟರಿಯಲ್ಲಿ ಬರೋಬ್ಬರಿ 28 ಕೋಟಿ ರುಪಾಯಿ(15 ಮಿಲಿಯನ್ ಯುಎಇ ಧಿರ್ಹಾಮ್ಸ್) ಗೆದ್ದುಕೊಂಡಿದ್ದಾರೆ.
ಅಚ್ಚರಿ ಎಂದರೆ, ಲಾಟರಿ ಗೆದ್ದಿರುವ ಟಾಪ್ 10ರಲ್ಲಿ ಎಂಟು ಮಂದಿ ಭಾರತೀಯರಿದ್ದು, ಈ ಪೈಕಿ ಆರು ಜನ ಕೇರಳದವರಾಗಿದ್ದಾರೆ.
ವರದಿಗಳ ಪ್ರಕಾರ, ಗುರುವಾರ ಬೆಳಗ್ಗೆ ದುಬೈನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಾಟರಿ ಎತ್ತಲಾಗಿದ್ದು, 083733 ನಂಬರಿನ ಟಿಕೆಟ್ ಬಿಗ್ ಟಿಕೆಟ್ ರಾಫೆಲ್ ಲಾಟರಿ ಗೆದ್ದುಕೊಂಡಿದೆ.
083733 ನಂಬರಿನ ಟಿಕೆಟ್ ಹೊಂದಿದ್ದ ಶರತ್ ಅವರಿಗೆ, ನಿಮಗೆ 28 ಕೋಟಿ ರುಪಾಯಿ ಲಾಟರಿ ಹೊಡೆದಿದೆ ಎಂದು ಹೇಳಿದರೆ, ನಂಬಲು ಸಿದ್ಧರಿಲ್ಲದ ಅವರು, ಸರಿ, ನಾನು ವೆಬ್ ಸೈಟ್ ನಲ್ಲಿ ಪರಿಶೀಲಿಸಿ ಹೇಳುತ್ತೇನೆ ಎಂದರು.
ನೀವು 15 ಮಿಲಿಯನ್ ಧಿರ್ಹಾಮ್ಸ್ ಗೆದ್ದಿದ್ದೀರಾ, ಏನು ಅನಿಸುತ್ತಿದ್ದೆ ಎಂದು ಲಾಟರಿ ಸಂಘಟಕರು ಕೇಳಿದರೆ, ಯಾವುದೇ ಉದ್ವೇಗಕ್ಕೆ ಒಳಗಾಗದ ಶರತ್ ಬರೀ ಓಕೆ ಎಂದಷ್ಟೇ ಹೇಳಿದ್ದಾರೆ.
ನಂತರ, ನಾನು ನನ್ನ ಸ್ನೇಹಿತರೊಂದಿಗೆ ಸೇರಿ ಬಿಗ್ ಟಿಕೆಟ್ ಖರೀದಿಸಿದ್ದೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಈ ಟಿಕೆಟ್ ಖರೀದಿಸುತ್ತಿದ್ದೆ ಎಂದು ಶರತ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


