ವಿದೇಶ

ಬಿಕ್ಕಟ್ಟು ಬಗೆಹರಿಯುವವರೆಗೂ ಹೈಕಮಿಷನರ್ ನ್ನು ಭಾರತಕ್ಕೆ ಕಳಿಸದೇ ಇರಲು ಪಾಕಿಸ್ತಾನ ನಿರ್ಧಾರ

ಪಾಕಿಸ್ತಾನದ ರಾಯಭಾರಿ ಅಧಿಕಾರಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಭಾರತದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಮಾಡಿರುವ ಪಾಕಿಸ್ತಾನ ಭಾರತದಲ್ಲಿದ್ದ...

ಬಿಕ್ಕಟ್ಟು ಬಗೆಹರಿಯುವವರೆಗೂ ಹೈಕಮಿಷನರ್ ನ್ನು ಭಾರತಕ್ಕೆ ಕಳಿಸದೇ ಇರಲು ಪಾಕಿಸ್ತಾನ ನಿರ್ಧಾರ
ಬಿಕ್ಕಟ್ಟು ಬಗೆಹರಿಯುವವರೆಗೂ ಹೈಕಮಿಷನರ್ ನ್ನು ಭಾರತಕ್ಕೆ ಕಳಿಸದೇ ಇರಲು ಪಾಕಿಸ್ತಾನ ನಿರ್ಧಾರ
Published On :
ನವದೆಹಲಿ: ಪಾಕಿಸ್ತಾನದ ರಾಯಭಾರಿ ಅಧಿಕಾರಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಭಾರತದಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಮಾಡಿರುವ ಪಾಕಿಸ್ತಾನ ಭಾರತದಲ್ಲಿದ್ದ ಪಾಕ್ ಹೈಕಮಿಷನರ್ ಸೊಹೈಲ್ ಮಹಮೂದ್ ಅವರನ್ನು ಸಧ್ಯದಲ್ಲಿ ಭಾರತಕ್ಕೆ ವಾಪಸ್ ಕಳಿಸದೇ ಇರಲು ನಿರ್ಧರಿಸಿದೆ. 
ಪಾಕಿಸ್ತಾನದ ನಿರ್ಧಾರದ ಬಗ್ಗೆ ಅಲ್ಲಿನ ವಿದೇಶಾಂಗ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಕಿರುಕುಳದ ಬಿಕ್ಕಟ್ಟು ಬಗೆಹರಿಯುವವರೆಗೂ ಭಾರತದಲ್ಲಿದ್ದ ಪಾಕಿಸ್ತಾನ ಹೈಕಮಿಷನರ್ ನ್ನು ಮರಳಿ ಭಾರತಕ್ಕೆ ಕಳಿಸದೇ ಇರಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. 
ನವದೆಹಲಿಯಿಂದ ಪಾಕಿಸ್ತಾನದ ಹೈಕಮಿಷನರ್ ಪಾಕ್ ಗೆ ತೆರಳಿದ ಕೆಲವೇ ಗಂಟೆಗಳಲ್ಲಿ ವಿದೇಶಾಂಗ ಇಲಾಖೆ ಅಧಿಕಾರಿಗಳು ಈ ಹೇಳಿಕೆ ನೀಡಿದ್ದು, ಅನಿರ್ದಿಷ್ಟಾವಧಿ ಪಾಕ್ ಹೈಕಮಿಷನರ್ ಪಾಕಿಸ್ತಾನದಲ್ಲೇ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. 
ಇನ್ನು ಪಾಕಿಸ್ತಾನದ ಹೈಕಮಿಷನರ್ ಪಾಕ್ ಗೆ ವಾಪಸ್ ತೆರಳಿರುವುದರ ಬಗ್ಗೆ ಭಾರತ ಪ್ರತಿಕ್ರಿಯೆ ನೀಡಿದ್ದು, ಸಾಮಾನ್ಯದ ಸಂಗತಿ ಎಂದಷ್ಟೇ ಹೇಳಿದೆ. 2001 ರ ಡಿ.13 ರಂದು ಭಾರತೀಯ ಸಂಸತ್ ಮೇಲೆ ಉಗ್ರರ ದಾಳಿಯಾದಾಗಲೂ ಇದೇ ರೀತಿಯಾಗಿ, ಉಭಯ ದೇಶಗಳೂ ತಮ್ಮ ರಾಯಭಾರಿ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿದ್ದವು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.