ವಿದೇಶ

ಇರಾನ್ ಅಣ್ವಸ್ತ್ರ ಪಡೆದರೆ, ಸೌದಿ ಕೂಡ ಅದನ್ನೇ ಅನುಸರಿಸುತ್ತದೆ: ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್

ಒಂದು ವೇಳೆ ಇರಾನ್ ದೇಶ ಪರಮಾಣು ಅಸ್ತ್ರಗಳನ್ನು ಹೊಂದಿದ್ದೇ ಆದರೆ ಸೌದಿ ಅರೇಬಿಯಾ ಕೂಡ ಪರಮಾಣು ಅಸ್ತ್ರಗಳನ್ನು ಹೊಂದುತ್ತದೆ ಎಂದು...

ಇರಾನ್ ಅಣ್ವಸ್ತ್ರ ಪಡೆದರೆ, ಸೌದಿ ಕೂಡ ಅದನ್ನೇ ಅನುಸರಿಸುತ್ತದೆ: ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್
ಸಂಗ್ರಹ ಚಿತ್ರ
Published On :
ವಾಷಿಂಗ್ಟನ್: ಒಂದು ವೇಳೆ ಇರಾನ್ ದೇಶ ಪರಮಾಣು ಅಸ್ತ್ರಗಳನ್ನು ಹೊಂದಿದ್ದೇ ಆದರೆ ಸೌದಿ ಅರೇಬಿಯಾ ಕೂಡ ಪರಮಾಣು ಅಸ್ತ್ರಗಳನ್ನು ಹೊಂದುತ್ತದೆ ಎಂದು ಸೌದಿ ಯುವರಾಜ  ಮೊಹಮ್ಮದ್ ಬಿನ್ ಸಲ್ಮಾನ್ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ವಾಷಿಂಗ್ಟನ್ ನಲ್ಲಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಸೌದಿ ಅರೇಬಿಯಾಗೆ ಪರಮಾಣು ಅಸ್ತ್ರಗಳನ್ನು ಹೊಂದುವ ಯಾವುದೇ ಉದ್ದೇಶವಿಸ್ಸ. ಆದರೆ ಇರಾನ್ ಪರಮಾಣು ಅಸ್ತ್ಪಗಳನ್ನು ಹೊಂದಿದರೆ ಆಗ ನಮ್ಮ ನಿಲುವು ಬದಲಾಗಿ ನಾವೂ ಕೂಡ ಪರಮಾಣು ಅಸ್ತ್ರಗಳನ್ನು ಹೊಂದುವ ಕುರಿತು ಆಲೋಚಿಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಇರಾನ್ ಮುಖಂಡರನ್ನು ಸರ್ವಾಧಿಕಾರಿ ಆಡಾಲ್ಫ್ ಹಿಟ್ಲರ್ ಗೆ ಹೋಲಿಕೆ ಮಾಡಿದ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್, ಇರಾನ್ ನ ಅಯತೊಲ್ಲಾ ಅಲಿ ಖಮೆನಿ ಹೊಸ ಹಿಟ್ಲರ್ ನಂತೆ ಕಾಣುತ್ತಿದ್ದು, ತನ್ನ ಸಾಮ್ರಾಜ್ಯ ವಿಸ್ತರಣಾ ಮನೋಭಾವ, ಸರ್ವಾಧಿಕಾರಿ ಧೋರಣೆಗಳಿಂದಾಗಿ ಮಧ್ಯ ಪ್ರಾಚ್ಯದಲ್ಲಿ ಸಮಸ್ಯೆಗಳಿಗೆ ಕಾರಣನಾಗುತ್ತಿದ್ದಾನೆ. ಆತ ತನ್ನದೇ ಆದ ಮಧ್ಯ ಪ್ರಾಚ್ಯ ರಚನೆಯತ್ತ ಯೋಜನೆ ರೂಪಿಸುತ್ತಿದ್ದು, ಇದಕ್ಕಾರಿ ಅಣ್ವಸ್ತ್ರಗಳತ್ತ ತಿರುಗಿ ನೋಡಿದರೂ ಅಚ್ಚರಿ ಏನಿಲ್ಲ. ಒಂದು ವೇಳೆ ಹಾಗೆ ಆಗಿದ್ದೇ ಆದರೆ ಸೌದಿ ಕೂಡ ಯಾವುದೇ ವಿಳಂಬ ಮಾಡದೇ ಕೂಡಲೇ ಪರಮಾಣು ಅಸ್ತ್ರಗಳನ್ನು ಹೊಂದಲಿದೆ ಎಂದು ಹೇಳಿದ್ದಾರೆ. 
ಹಿಟ್ಲರ್ ಎಷ್ಟು ಅಪಾಯಕಾರಿ ಎಂದು ಆತ ಯುದ್ಥ ಘೋಷಣೆ ಮಾಡುವವರೆಗೂ ಯೂರೋಪ್ ಬಹುತೇಕ ರಾಷ್ಟ್ರಗಳಿಗೆ ತಿಳಿದಿರಲಿಲ್ಲ. ಆದರೆ ಬಳಿಕ ಏನಾಯ್ತು. ಆದರೆ ಈಗ ಅದೇ ಪರಿಸ್ಥಿತಿ ತಲೆದೋರಲು ನಾವು ಅನುವು ಮಾಡಿಕೊಡುವುದಿಲ್ಲ ಸೌದಿ ಯುವರಾಜ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಗಾಗಿ ಅಮೆರಿಕಕ್ಕೆ ಆಗಮಿಸಿರುವ ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು, ಸೌದಿಯಲ್ಲಿ ಪೆಟ್ರೋಲಿಯಂ ಉತ್ಪಾದನೆಯಲ್ಲದೇ ಅಣುಶಕ್ತಿ ಉತ್ಪಾದನೆ ಯೋಜನೆಯತ್ತ ಗಮನಹರಿಸಲು ಅಮೆರಿಕದೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಹಿಂದಷ್ಟೇ ಸೌದಿ ಸಚಿವ ಸಂಪುಟ ಸಭೆಯಲ್ಲೂ ಸೌದಿಯಲ್ಲಿ ಪರಮಾಣು ಯೋಜನೆಗಳ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.