ವಿದೇಶ

ಅಕ್ರಮ ಪ್ರವೇಶ: ಅಮೆರಿಕದಲ್ಲಿ ಸುಮಾರು 100 ಭಾರತೀಯರ ಬಂಧನ

ಅಮೆರಿಕವನ್ನು ಅದರ ದಕ್ಷಿಣ ಗಡಿಯ ಮೂಲಕ ಅಕ್ರಮವಾಗಿ ಪ್ರವೇಶಿಸಿರುವ, ಪಂಜಾಬಿಗಳೇ ಹೆಚ್ಚಿನ...

ಅಕ್ರಮ ಪ್ರವೇಶ: ಅಮೆರಿಕದಲ್ಲಿ ಸುಮಾರು 100 ಭಾರತೀಯರ ಬಂಧನ
ಅಮೆರಿಕದ ಅಕ್ರಮ ವಲಸೆ ಬಂಧನ ಕೇಂದ್ರ
Published On :
ವಾಷಿಂಗ್ಟನ್‌: ಅಮೆರಿಕವನ್ನು ಅದರ ದಕ್ಷಿಣ ಗಡಿಯ ಮೂಲಕ ಅಕ್ರಮವಾಗಿ ಪ್ರವೇಶಿಸಿರುವ, ಪಂಜಾಬಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ, ಸುಮಾರು 100 ಭಾರತೀಯರನ್ನು ಬಂಧಿಸಿ, ಎರಡು ಅಕ್ರಮ ವಲಸೆ ಬಂಧನ ಕೇಂದ್ರದಲ್ಲಿರಿಸಲಾಗಿದೆ.
ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಆ ಎರಡು ವಲಸೆ ಬಂಧನ ಕೇಂದ್ರಗಳ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ.
ಸುಮಾರು 40 ರಿಂದ 45 ಭಾರತೀಯರು ದಕ್ಷಿಣ ಅಮೆರಿಕದ ನ್ಯೂ ಮೆಕ್ಸಿಕೋದಲ್ಲಿನ ಒಕ್ಕೂಟ ಬಂಧನ ಕೇಂದ್ರದಲ್ಲಿದ್ದಾರೆ. ಇನ್ನೂ 52 ಭಾರತೀಯರು, ಇವರಲ್ಲಿ ಹೆಚ್ಚಿನವರು ಸಿಕ್ಖರು ಮತ್ತು ಕ್ರೈಸ್ತರು, ಒರೆಗಾನ್‌ ವಲಸೆ ಬಂಧನ ಕೇಂದ್ರದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಈಗಾಗಲೇ ಒರೆಗಾನ್ ವಲಸೆ ಬಂಧನ ಕೇಂದ್ರಕ್ಕೆ ಭೇಟಿ ನೀಡಿದ್ದು, ಮತ್ತೊಬ್ಬ ಅಧಿಕಾರಿ ನ್ಯೂ ಮೆಕ್ಸಿಕೋ ಕೇಂದ್ರಕ್ಕೆ ಶೀಘ್ರದಲ್ಲೇ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.