ವಿದೇಶ

ಥಾಯ್ಲೆಂಡ್‌ ಗುಹೆಯಲ್ಲಿ ಸಿಲುಕಿದ್ದ 8 ಬಾಲಕರ ರಕ್ಷಣೆ, ಕಾರ್ಯಾಚರಣೆ ಸ್ಥಗಿತ

ಕಳೆದ 15 ದಿನಗಳಿಂದ ಥಾಯ್ಲೆಂಡ್ ನ ಗುಹೆಯೊಂದರಲ್ಲಿ ಸಿಲುಕಿದ್ದ 13 ಥಾಯ್ ಯುವ ಫುಟ್ಬಾಲ್ ತಂಡದ...

ಥಾಯ್ಲೆಂಡ್‌ ಗುಹೆಯಲ್ಲಿ ಸಿಲುಕಿದ್ದ 8 ಬಾಲಕರ ರಕ್ಷಣೆ, ಕಾರ್ಯಾಚರಣೆ ಸ್ಥಗಿತ
ರಕ್ಷಣಾ ಕಾರ್ಯಾಚರಣೆ
Published On :
ಬ್ಯಾಂಕಾಕ್: ಕಳೆದ 15 ದಿನಗಳಿಂದ ಥಾಯ್ಲೆಂಡ್ ನ ಗುಹೆಯೊಂದರಲ್ಲಿ ಸಿಲುಕಿದ್ದ 13 ಥಾಯ್ ಯುವ ಫುಟ್ಬಾಲ್ ತಂಡದ ಆಟಗಾರರ ಪೈಕಿ ಎಂಟು ಬಾಲಕರನ್ನು ರಕ್ಷಿಸಲಾಗಿದ್ದು, ಸೋಮವಾರದ ಕಾರ್ಯಾಚರಣೆ ಅಂತ್ಯವಾಗಿದೆ.
ಇಂದು ನಾಲ್ವರು ಬಾಲಕರನ್ನು ಹೊರಗೆ ಕರೆತರುವಲ್ಲಿ ರಕ್ಷಣ ತಂಡ ಯಶಸ್ವಿಯಾಗಿದ್ದು, ಇದರೊಂದಿಗೆ ಎಂಟು ಮಂದಿಯನ್ನು ರಕ್ಷಿಸದಂತಾಗಿದೆ. ಆದರೆ ರಕ್ಷಿಸಿದ ಬಾಲಕರ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ.
ಪ್ರವಾಹದಿಂದಾಗಿ ಥಾಯ್ ಲುವಾಂಗ್ ಗುಹೆಯಲ್ಲಿ ಸಿಲುಕಿಕೊಂಡಿದ್ದ ಬಾಲಕರ ರಕ್ಷಣೆಗೆ ಭಾನುವಾರ ಸಂಜೆ ಥಾಯ್ಲೆಂಡ್ ಸೇನೆ ತಜ್ಞರ ನೆರವಿನಿಂದ ಕಾರ್ಯಾಚರಣೆ ಆರಂಭಿಸಿತ್ತು.
ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ನಾಲ್ಕು ಬಾಲಕರನ್ನು ರಕ್ಷಿಸಲಾಗಿತ್ತು. ನಂತರ ಗುಹೆಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿ ತಾತ್ಕಾಲಿಕ ಸ್ಥಗಿತಗೊಳಿಸಲಾಗಿತ್ತು. ಇಂದು ಮತ್ತೆ ಕಾರ್ಯಾಚರಣೆ ಆರಂಭಿಸಿ ನಾಲ್ವರನ್ನು ರಕ್ಷಿಸಲಾಗಿದೆ. ಥಾಯ್ ನೌಕಾಪಡೆ ಶೀಘ್ರದಲ್ಲೇ ಇತರೆ ಬಾಲಕರನ್ನು ರಕ್ಷಿಸುವ ವಿಶ್ವಾಸ ವ್ಯಕ್ತಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.