ವಿದೇಶ

ಸೌದಿ ಅರೇಬಿಯಾ: ಶಾಂತಿಭಂಗಕ್ಕೆ ಯತ್ನಿಸಿದ್ದ 11 ರಾಜಕುಮಾರರ ಬಂಧನವನ್ನು ಖಚಿತಪಡಿಸಿದ ಅಟಾರ್ನಿ ಜನರಲ್

ಸೌದಿ ಅರೇಬಿಯಾ ಸರ್ಕಾರಾದ ಮಿತವ್ಯಯ ಕ್ರಮಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲುರಿಯಾದ್ ನಲ್ಲಿನ ಅರಮನೆಯಲ್ಲಿ ಸೇರಿದ್ದ........

ಸೌದಿ ಅರೇಬಿಯಾ: ಶಾಂತಿಭಂಗಕ್ಕೆ ಯತ್ನಿಸಿದ್ದ 11 ರಾಜಕುಮಾರರ ಬಂಧನವನ್ನು ಖಚಿತಪಡಿಸಿದ  ಅಟಾರ್ನಿ ಜನರಲ್
ಸೌದಿ ರಾಜ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್
Published On :
ರಿಯಾದ್: ಸೌದಿ ಅರೇಬಿಯಾ ಸರ್ಕಾರಾದ ಮಿತವ್ಯಯ ಕ್ರಮಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲುರಿಯಾದ್ ನಲ್ಲಿನ ಅರಮನೆಯಲ್ಲಿ ಸೇರಿದ್ದ 11ರಾಜಕುಮಾರರನ್ನು ಬಂಧಿಸಿರುವ ವಿಚಾರವನ್ನು ಸೌದಿ ಅರೇಬಿಯಾದ ಅಟಾರ್ನಿ ಜನರಲ್ ಇಂದು ಸ್ಪಷ್ಟಪಡಿಸಿದ್ದಾರೆ.
ಸೌದಿ ರಾಜಕುಮಾರರ ಬಂಧನದ ವರದಿ ನಿನ್ನೆಯಷ್ಟೇ ಸೌದಿ ಮಾದ್ಯಮಗಳಲ್ಲಿ ಬಿತ್ತರವಾಗಿದ್ದು ಇಂದು ಸ್ವತಃ ಅಲ್ಲಿನ ಅಧಿಕಾರಿಗಳೇ ಖಚಿತಪಡಿಸಿದ್ದಾರೆ. 
ಜಗತ್ತಿನ ಅತ್ಯಂತ ದೊಡ್ಡ ತೈಲ ರಫ್ತು ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಕಳೆದ ಕೆಲ ವರ್ಷಗಳಿಂದ ಜಾಗತಿಕ ತೈಲ ಬೆಲೆಯಲ್ಲಿನ ಕುಸಿತದಿಂದ ಎದುರಾಗುವ ಆರ್ಥಿಕ ಸಂಕಷ್ಟಗಳನ್ನು ತಪ್ಪಿಸಲು ಕೆಲವು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುತ್ತಲಿದೆ. ರಾಜಕುಟುಂಬ, ಪರಿವಾರದ ನೀರು ಹಾಗೂ ವಿದ್ಯುತ್ ಬಿಲ್ ಗಳನ್ನು ಸರ್ಕಾರ ಪಾವತಿಸುವುದನ್ನು ನಿಲ್ಲಿಸುವ ಕ್ರಮವೂ ಇದರಲ್ಲಿ ಸೇರಿದೆ. ಸರ್ಕಾರದ ಈ ಕ್ರಮ ವಿರೋಧಿಸಿ ರಾಜಕುಮಾರರು ಪ್ರತಿಭಟನೆಗೆ ಸಜ್ಜಾಗಿದ್ದರು. ಆಗ ಅವರುಗಳನ್ನು ಬಂಧಿಸಲಾಗಿದೆ ಎಂದು ಮಾದ್ಯಮವೊಂದು ವರದಿ ಮಾಡಿತ್ತು.
"ತಮ್ಮ ಬೇಡಿಕೆಗಳು ಕಾನೂನುಬದ್ದವಾಗಿಲ್ಲ ಎಂದ್ರೂ ಕೇಳದೆ ಅವರು ಪ್ರತಿಭಟನೆಯನ್ನು ಮುಂದುವರಿಸಿದ್ದರು. ಸಾರ್ವಜನಿಕ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರಂದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಅವರ ಮೇಲೆ ಕಾನೂನಿನ ನಾನಾ ವಿಭಾಗಗಳಡಿಯಲ್ಲಿ ಪ್ರಕರಣ ದಾಖಲಾಗಿದೆ" ಅಟಾರ್ನಿ ಜನರಲ್ ಸೌದ್ ಅಲ್-ಮೊಜೆಬ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.