ಶ್ರೀದೇವಿ ಮೃತದೇಹ ಹಸ್ತಾಂತರಕ್ಕೆ ರಾಯಭಾರ ಕಛೇರಿಯಿಂದ ಸತತ ಪ್ರಯತ್ನ: ನವದೀಪ್ ಸೂರಿ
ಬಹುಭಾಷಾ ನಟಿ ಶ್ರೀದೇವಿ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸುವ ಸಂಬಂಧ ಯುಎಇ ನಲ್ಲಿನ ಭಾರತೀಯ ದೂತವಾಸ ಕಛೇರಿ ಸಾಕಷ್ಟು ಪ್ರಯತ್ನ ನಡೆಸುತ್ತಿದೆ

Published On :
ದುಬೈ: ಬಹುಭಾಷಾ ನಟಿ ಶ್ರೀದೇವಿ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸುವ ಸಂಬಂಧ ಯುಎಇ ನಲ್ಲಿನ ಭಾರತೀಯ ದೂತವಾಸ ಕಛೇರಿ ಸಾಕಷ್ಟು ಪ್ರಯತ್ನ ನಡೆಸುತ್ತಿದೆ ಎಂದು ಯುಎಇ ನ ಭಾರತೀಯ ರಾಯಭಾರಿ ನವದೀಪ್ ಸೂರಿ ಹೇಳಿದ್ದಾರೆ.
"ನಮ್ಮ ಕಛೇರಿಯು ಸ್ಥಳೀಯ ಅಧಿಕಾರಿಗಳೊಡನೆ ನಿಕಟ ಸಂಪರ್ಕದಲ್ಲಿದ್ದು ಶ್ರೀದೇವಿ ಪಾರ್ಥಿವ ಶರೀರವನ್ನು ಭಾರತಕ್ಕೆ ಹಸ್ತಾಂತರಿಸಲು ಸಾಕಷ್ಟು ಶ್ರಮಿಸುತ್ತಿದೆ. ಅದೇ ರೀತಿ ಕಪೂರ್ ಕುಟುಂಬದವರ ಕ್ಷೇಮದ ಬಗೆಗೆ ಕಾಳಜಿ ವಹಿಸಲಾಗಿದೆ" ಎಸ್ಐಐಗೆ ನೀಡಿದ ಸಂದರ್ಶನದಲ್ಲಿ ಸೂರಿ ಹೇಳಿದ್ದಾರೆ.
ಸಂಬಂಧಿಕರ ಮದುವೆಗೆಂದು ದುಬೈಗೆ ತೆರಳಿದ್ದ ನಟಿ ಶ್ರೀದೇವಿ ಫೆಬ್ರವರಿ 24ರಂದು ಅಲ್ಲಿನ ಹೋಟೆಲ್ ನಲ್ಲಿ ಅಕಾಲಿಕ ಮರಣಕ್ಕೀಡಾಗಿದ್ದರು. ಶ್ರೀದೇವಿ ಅವರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ನಡೆಸಿದ್ದ ದುಬೈ ಪೋಲೀಸರು ಅಲ್ಲಿನ ಸ್ಥಳೀಯ ಪಬ್ಲಿಕ್ ಪ್ರಾಸಿಕೂಷನ್ ಗೆ ಪ್ರಕರಣವನ್ನು ವಹಿಸಿದ್ದಾರೆ. ಇದೀಗ ಪ್ರಾಸಿಕೂಷನ್ ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಅನುಸರಿಸಬೇಕಾದ ನಿಯಮಿತ ಕಾನೂನು ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.
ಶ್ರೀದೇವಿ ಅವರ ಮೃತದೇಹವು ನಾಳೆ(ಮಂಗಳವಾರ) ಭಾರತಕ್ಕೆ ಆಗಮಿಸುವ ಆಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


