ಮಹಾತ್ಮಗಾಂಧಿ ಸಹಿ ಇರುವ ಅಪರೂಪದ ಪೋಟೋ ಅಮೆರಿಕಾದಲ್ಲಿ 10 ಸಾವಿರ ಡಾಲರ್ ಗೆ ಹರಾಜು
ರಾಷ್ಟ್ರಪಿತ ಮಹಾತ್ಮಗಾಂಧಿ ಮದನ್ ಮೋಹನ್ ಮಾಳವಿಯ ಜೊತೆಗಿರುವ ಪೋಟೋ ಅಮೆರಿಕಾದಲ್ಲಿ10 ಸಾವಿರ ಡಾಲರ್ ಗೆ ಹರಾಜು ಆಗುವ ನಿರೀಕ್ಷೆಯಲ್ಲಿದೆ.

ಅಮೆರಿಕಾ: ರಾಷ್ಟ್ರಪಿತ ಮಹಾತ್ಮಗಾಂಧಿ ಮದನ್ ಮೋಹನ್ ಮಾಳವಿಯ ಜೊತೆಗಿರುವ ಪೋಟೋ ಅಮೆರಿಕಾದಲ್ಲಿ 10 ಸಾವಿರ ಡಾಲರ್ ಗೆ ಹರಾಜು ಆಗುವ ನಿರೀಕ್ಷೆಯಲ್ಲಿದೆ.
ಮಹಾತ್ಮಗಾಂಧಿ ಸಹಿ ಹೊಂದಿರುವ ಈ ಪೋಟೋವನ್ನು 1931ರಲ್ಲಿ ಲಂಡನ್ ನಲ್ಲಿ ನಡೆದಿದ್ದಎರಡನೇ ದುಂಡು ಮೇಜಿನ ಸಮ್ಮೇಳನ ಸಂದರ್ಭದಲ್ಲಿ ತೆಗೆಯಲಾಗಿದ್ದು,ಪ್ರೇಸ್ ಆಫ್ ಗ್ರೇಟ್ ಬ್ರಿಟನ್ ಹಕ್ಕುಸ್ವಾಮ್ಯಕ್ಕೊಳಪಟ್ಟಿದೆ.
ನೋವಿನಿಂದ ನರಳುತ್ತಿದ್ದ ಮಹಾಾತ್ಮಗಾಂಧಿ ಬಲಕೈ ಬದಲಿಗೆ ಎಡಗೈನಿಂದ ಸಹಿ ಹಾಕಿದ್ದಾರೆ. 1931 ಆಗಸ್ಟ್ 19ರಂದು ಈ ಸಹಿ ಹಾಕಿರುವ ಸಾಧ್ಯತೆ ಇದೆ ಅಮೆರಿಕಾ ತಿಳಿಸಿದೆ.
ಭಾರತೀಯ ಸಂವಿಧಾನ ಸುಧಾರಣೆಗಾಗಿ ಲಂಡನ್ ನಲ್ಲಿ 1930ರಿಂದ 1932 ರವರೆಗೆ ಮೂರು ದುಂಡುಮೇಜಿನ ಸಮ್ಮೇಳನವನ್ನು ಬ್ರಿಟನ್ ಸರ್ಕಾರ ಆಯೋಜಿಸಿರುತ್ತದೆ.
ಆ ಸಂದರ್ಭದಲ್ಲಿ ಮದನ್ ಮಾಳವೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದು,ಅಸಹಕಾರ ಚಳವಳಿಯಲ್ಲಿ ಪ್ರಮುಖವಾದ ಪಾತ್ರ ವಹಿಸಿದ್ದರು. ಭಾರತ ಸ್ವಾತಂತ್ರ್ಯಕ್ಕಾಗಿ ಮಹಾತ್ಮಗಾಂಧಿ ಜೊತೆಯಲ್ಲಿ ಮದನ್ ಮಾಳವೀಯ ಜೊತೆ ಪ್ರತಿನಿಧಿಸಿದ್ದರು.
ಈ ಪೋಟೋಗೆ ಮಾರ್ಚ್ 7ರವರೆಗೂ ಬಿಡ್ಡಿಂಗ್ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


