ಮೆಕ್ಕಾದ ಪವಿತ್ರ ಮಸೀದಿಯಲ್ಲಿ ಮಹಿಳೆಯರಿಂದ ಬೋರ್ಡ್ ಗೇಮ್ ಆಟ, ಫೋಟೋ ವೈರಲ್
ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಮೆಕ್ಕಾ-ಮದೀನದಲ್ಲಿ ಮಹಿಳೆಯರ ತಂಡವೊಂದು ಬೋರ್ಡ್ ಗೇಮ್ ಆಟವಾಡುತ್ತಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Published On :
ಮೆಕ್ಕಾ: ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ ಮೆಕ್ಕಾ-ಮದೀನದಲ್ಲಿ ಮಹಿಳೆಯರ ತಂಡವೊಂದು ಬೋರ್ಡ್ ಗೇಮ್ ಆಟವಾಡುತ್ತಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಸ್ಟೆಪ್ ಫೀಡ್ ಎಂಬ ಇಂಗ್ಲೀಷ್ ವೆಬ್ ಸೈಟಿನಲ್ಲಿ ಪ್ರಕಟವಾಗಿದ್ದ ಈ ಫೋಟೋಗೆ ಇದೀಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಪವಿತ್ರ ಮಸೀದಿಯಲ್ಲಿ ಮಹಿಳೆಯರು ಬೋರ್ಡ್ ಗೇಮ್ ಆಟವಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಮಹಿಳೆಯರು ಕುಳಿತಿದ್ದ ಭಂಗಿಗೂ ಮೂಲಭೂತ ವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೇ ವ್ಯಾಪಕ ವಿರೋಧಾತ್ಮಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಇನ್ನು ಈ ನಾಲ್ಕು ಮಹಿಳೆಯರು ಮಸೀದಿ ಆವರಣದಲ್ಲಿ ಕುಳಿತು ಬೋರ್ಡ್ ಗೇಮ್ ಆಡುತ್ತಿರುವುದರ ಕುರಿತು ಮೆಕ್ಕಾ-ಮದೀನಾ ಮಸೀದಿ ಆಡಳಿತ ಮಂಡಳಿ ಸ್ಪಷ್ಟನೆ ಕೂಡ ನೀಡಿದ್ದು, ಹೌದು ನಾಲ್ಕು ಮಹಿಳೆಯರ ತಂಡ ಸೀಕ್ವೆನ್ಸ್ ಎಂಬ ಬೋರ್ಡ್ ಗೇಮ್ ಆಡುತ್ತಿತ್ತು. ಇದನ್ನರಿತ ಸಿಬ್ಬಂದಿ ಕೂಡಲೇ ಪವಿತ್ರ ಸ್ಥಳದಲ್ಲಿ ಈ ಆಟವನ್ನು ಆಡಬಾರದು ಎಂದು ತಿಳಿಹೇಳಿ ಕಳುಹಿಸಿದ್ದಾರೆ. ಮಹಿಳೆಯರೂ ಕೂಡ ಅದಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸಿ ಅಲ್ಲಿಂದ ಹೊರಟು ಹೋಗಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.
ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಹಿಂದೆ 2015ರಲ್ಲೂ ಇಂತಹುದೇ ಘಟನೆ ಮೆಕ್ಕಾ-ಮದೀನ ಮಸೀದಿಯಲ್ಲಿ ನಡೆದಿತ್ತು. ಯುವಕರ ಗುಂಪು ಇದೇ ರೀತಿ ಬೋರ್ಡ್ ಗೇಮ್ ಆಡುತ್ತಿದ್ದರು. ಈ ವೇಳೆ ಸಿಬ್ಬಂದಿಗಳನ್ನು ಅವರನ್ನು ಮಸೀದಿಯಿಂದ ಹೊರಗೆ ಕಳುಹಿಸಿದ್ದರು. ಈ ವೇಳೆಯೂ ಇದೇ ರೀತಿ ವಿವಾದ ಭುಗಿಲೆದ್ದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Saudi Arabiaಸೌದಿ ಅರೇಬಿಯಾcontroversyವಿವಾದMuslimsಮುಸ್ಲಿಮರುMeccaಮೆಕ್ಕಾMecca-Madina mosqueಮೆಕ್ಕಾ-ಮದೀನಾ ಮಸೀದಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


