ಸೆಕ್ಸ್ ವೇಳೆ ಪ್ರೇಯಸಿಗೆ ತಿಳಿಯದೆ ಕಾಂಡೋಮ್ ಬಿಚ್ಚಿಟ್ಟಿದ್ದ ಪೊಲೀಸ್‌ಗೆ ಜೈಲುಶಿಕ್ಷೆ, ದಂಡ ಎಷ್ಟು ಲಕ್ಷ ಗೊತ್ತ?
ಸುರಕ್ಷತೆ ದೃಷ್ಟಿಯಿಂದ ಲೈಂಕಿಗ ಕ್ರಿಯೆ ನಡೆಸುವಾಗ ಕಾಂಡೋಮ್ ಬಳಸುವುದು ಉತ್ತಮ. ಆದರೆ ಇಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಸೆಕ್ಸ್ ವೇಳೆ ತನ್ನ ಪ್ರೇಯಸಿಗೆ...

Published On :
ಬರ್ಲಿನ್: ಸುರಕ್ಷತೆ ದೃಷ್ಟಿಯಿಂದ ಲೈಂಕಿಗ ಕ್ರಿಯೆ ನಡೆಸುವಾಗ ಕಾಂಡೋಮ್ ಬಳಸುವುದು ಉತ್ತಮ. ಆದರೆ ಇಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಸೆಕ್ಸ್ ವೇಳೆ ತನ್ನ ಪ್ರೇಯಸಿಗೆ ತಿಳಿಯದಂತೆ ಕಾಂಡೋಮ್ ಬಿಚ್ಚಿಟ್ಟದ್ದರಿಂದ ಜೈಲು ಶಿಕ್ಷೆಗೆ ಗುರಿಯಾಗಿ ದಂಡ ಸಹ ಕಟ್ಟಬೇಕಿದೆ.
ಪ್ರೇಯಸಿಗೆ ತಿಳಿಯದಂತೆ ತಿಳಿಯದಂತೆ ಕಾಂಡೋಮ್ ಬಿಚ್ಚಿಟ್ಟ ಪ್ರಕರಣ ಕುರಿತಂತೆ ನ್ಯಾಯಾಲಯದಲ್ಲಿ ಆತನ ಆರೋಪ ಸಾಬೀತಾಗಿದ್ದು ಕೋರ್ಟ್ ಆತನಿಗೆ 8 ತಿಂಗಳ ಜೈಲು ಶಿಕ್ಷೆ ಹಾಗೂ 3 ಸಾವಿರ ಯೂರೋ(ಅಂದಾಜು 2.39 ಲಕ್ಷ ರು.) ದಂಡವನ್ನು ವಿಧಿಸಿದೆ. ಅಲ್ಲದೆ 96 ಯುರೋಗಳನ್ನು(ಅಂದಾಜು 7500 ರು.) ಮಹಿಳೆಯ ಆರೋಗ್ಯ ಪರೀಕ್ಷೆಗೆ ಪಾವತಿ ಮಾಡುವಂತೆ ಸೂಚಿಸಿದೆ.
ಇನ್ನು ಜರ್ಮನ್ ನಲ್ಲಿ ಇದೇ ಮೊದಲ ಬಾರಿಗೆ ಇಂತಹ ಪ್ರಕರಣ ದಾಖಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು ಇಂತಹದ್ದೆ 2 ಪ್ರಕರಣಗಳು ಈ ಹಿಂದೆ ಸ್ವಿಜರ್ಲೆಂಡ್ ಹಾಗೂ ಕೆನಡಾದಲ್ಲಿ ವರದಿಯಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


