ಶ್ರೀಲಂಕಾ: ಪ್ರಧಾನಿಯಾಗಿ ರಾಜಪಕ್ಸ ಯಾವುದೇ ಕ್ರಮಗಳನ್ನು ಕೈಗೊಳ್ಳುವಂತಿಲ್ಲ- ನ್ಯಾಯಾಲಯ ಹೇಳಿಕೆ
ರಾಜಪಕ್ಸ ಶ್ರೀಲಂಕಾ ಪ್ರಧಾನಿಯಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುವಂತಿಲ್ಲ ಎಂದು ಅಲ್ಲಿನ ನ್ಯಾಯಾಲಯ ಹೇಳಿದೆ.

Published On :
ಕೊಲಂಬೊ: ವಿವಾದಾತ್ಮಕ ನಿರ್ಧಾರದ ಮೂಲಕ ರಾನಿಲ್ ವಿಕ್ರಮ್ ಸಿಂಘೆ ಅವರನ್ನು ವಜಾಗೊಳಿಸಿ ಮಹಿಂದಾ ರಾಜಪಕ್ಸ ಅವರನ್ನು ಪ್ರಧಾನಿಯಾಗಿ ನೇಮಿಸಿದ್ದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಅವರಿಗೆ ಭಾರೀ ಮುಖಭಂಗವಾಗಿದೆ. ರಾಜಪಕ್ಸ ಪ್ರಧಾನಿಯಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳುವಂತಿಲ್ಲ ಎಂದು ಅಲ್ಲಿನ ನ್ಯಾಯಾಲಯ ಹೇಳಿದೆ.
ಪ್ರಧಾನಿ, ಕ್ಯಾಬಿನೆಟ್ ಮತ್ತು ಉಪಮಂತ್ರಿಗಳಂತೆ ಕಾರ್ಯನಿರ್ವಹಿಸುವುದನ್ನು ತಡೆಗಟ್ಟಿ ರಾಜಪಕ್ಸ ಹಾಗೂ ಆತನ ಸರ್ಕಾರದ ವಿರುದ್ಧ ಮಧ್ಯಂತರ ಆದೇಶ ಹೊರಡಿಸಲಾಗಿದ್ದು, ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ ಎಂದು ಕೊಲಂಬೊ ಗೆಜೆಟ್ ವರದಿ ಮಾಡಿದೆ.
ರಾಜಪಕ್ಸ ಹಾಗೂ ಆತನ ಸರ್ಕಾರದ ವಿರುದ್ಧ 122 ಸಂಸದರು ಸಲ್ಲಿಸಿದ ಕೋ ವಾರೆಂಟ್ ಪ್ರಕರಣದಲ್ಲಿ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ಶ್ರೀಲಂಕಾ ಅಧ್ಯಕ್ಷ ಸಿರಿಸೇನಾ ವಿಕ್ರಮ್ ಸಿಂಘೆ ಅವರನ್ನು ವಜಾಗೊಳಿಸಿ ಅವರ ಸ್ಥಾನದಲ್ಲಿ ರಾಜಪಕ್ಸ ಅವರನ್ನು ನೇಮಕಗೊಳಿಸಿದ ನಂತರ ಅಕ್ಟೋಬರ್ 26 ರಿಂದ ಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ.
ಸಿರಿಸೇನಾ ಸಂಸತ್ತು ವಿಸರ್ಜಿಸಿದ ಬಳಿಕ ಅವಧಿ ಮುಗಿಯುವ ಸುಮಾರು 20 ತಿಂಗಳುಗಳ ಮುಂಚಿತವಾಗಿಯೇ ಚುನಾವಣೆ ನಡೆಯಬೇಕು ಎಂದು ಆದೇಶ ನೀಡಿದ್ದರು.ಸಂಸತ್ತು ವಿಸರ್ಜಿಸುವ ಸಿರಿಸೇನಾ ನಿರ್ಧಾರವನ್ನು ಸರ್ವೋಚ್ಛ ನ್ಯಾಯಾಲಯ ರದ್ದುಪಡಿಸಿದ್ದು, ಚುನಾವಣಾ ಸಿದ್ಧತಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


