ವಿದೇಶ

ಇಮ್ರಾನ್ ಖಾನ್ ಪ್ರಮಾಣವಚನ: ಯಾವುದೇ ವಿದೇಶಿ ನಾಯಕರಿಗೆ ಆಮಂತ್ರಣ ಇಲ್ಲ ಎಂದ ಪಾಕ್

ಪಾಕಿಸ್ಥಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಮಾಜಿ ಕ್ರಿಕೆಟ್‌ ನಾಯಕ ಇಮ್ರಾನ್‌ ಖಾನ್‌ ಪದಗ್ರಹಣ ಕಾರ್ಯಕ್ರಮಕ್ಕೆ ...

ಇಮ್ರಾನ್ ಖಾನ್ ಪ್ರಮಾಣವಚನ: ಯಾವುದೇ ವಿದೇಶಿ ನಾಯಕರಿಗೆ ಆಮಂತ್ರಣ ಇಲ್ಲ ಎಂದ ಪಾಕ್
ಇಮ್ರಾನ್ ಖಾನ್
Published On :
ಇಸ್ಲಮಾಬಾದ್: ಪಾಕಿಸ್ಥಾನದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿರುವ ಮಾಜಿ ಕ್ರಿಕೆಟ್‌ ನಾಯಕ ಇಮ್ರಾನ್‌ ಖಾನ್‌ ಪದಗ್ರಹಣ ಕಾರ್ಯಕ್ರಮಕ್ಕೆ ಯಾವುದೇ ವಿದೇಶಿ ನಾಯಕರುಗಳನ್ನು ಆಹ್ವಾನಿಸುತ್ತಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಕಾರ್ಯಾಲಯ ತಿಳಿಸಿದೆ.
ಈ ಮೂಲಕ ಇಮ್ರಾನ್ ಖಾನ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಭಾಗವಹಿಸುತ್ತಾರೆ ಎಂಬ ಎಲ್ಲಾ ಊಹಾ ಪೋಹಗಳಿಗೆ ತೆರೆ ಬಿದ್ದಿದೆ.
ಆದರೆ ಇಮ್ರಾನ್ ಖಾನ್ ಭಾರತೀಯ ನಟ ಅಮೀರ್ ಖಾನ್, ಹಾಗೂ ಮಾಜಿ ಕ್ರಿಕೆಟಿಗರಾದ ಸುನೀಲ್ ಗವಾಸ್ಕರ್, ಕಪಿಲ್ ದೇವ್, ನವಜೋತ್ ಸಿಂಗ್ ಸಿದು ಅವರಿಗೆ ಆಗಸ್ಟ್ 11 ರಂದು ನಡೆಯುವ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಿದ್ದಾರೆ.
ಇನ್ನೂ ತಮಗೆ ನೀಡಿರುವ ಆಹ್ವಾನದ ಬಗ್ಗೆ ಪ್ರತಿಕ್ರಿಯಿಸಿರುವ ನವಜೋತ್ ಸಿಂಗ್ ಸಿದು, ಇದೊಂದು ಬಹಳ ದೊಡ್ಡ ಗೌರವ, ಇದು ಅವರ ವಯಕ್ತಿಕ ಆಹ್ವಾನ, ನಾನು ರಾಷ್ಟ್ರದ ವಿದೇಶಾಂಗ ನೀತಿಯನ್ನು ಗೌರವಿಸುತ್ತೇನೆ, ಕ್ರೀಡಾಪಟುಗಳು ಮತ್ತು ಕಲಾವಿದರು ಅಡತಡೆಗಳನ್ನು ಮುರಿಯುತ್ತಾರೆ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ನೇತೃತ್ವದಲ್ಲಿ ಪಿಟಿಐ ಪಕ್ಷ ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರಕಾರವನ್ನು ರಚಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.