ಯುಎಇಯಲ್ಲಿ ಕೆಲಸದ ಪರವಾನಗಿ: ಪಾಕ್ ವಿದೇಶಾಂಗ ಸಚಿವ ಖವಾಜಾ ಅಸೀಫ್ ಹುದ್ದೆಯಿಂದ ಅನರ್ಹ
ಯುಎಇಯಲ್ಲಿ ಕೆಲಸದ ಪರವಾನಗಿ ಹೊಂದಿದ್ದ ಪಾಕ್ ವಿದೇಶಾಂಗ ಸಚಿವ ಖವಾಜಾ ಅಸೀಫ್ ಅವರನ್ನು ಪಾಕಿಸ್ತಾನದ ಕೋರ್ಟ್ ಸಂಸದ ಹಾಗೂ ವಿದೇಶಾಂಗ ಸಚಿವನ ಹುದ್ದೆಯಿಂದ ಅನರ್ಹಗೊಳಿಸಿದೆ.

Published On :
ಯುಎಇಯಲ್ಲಿ ಕೆಲಸದ ಪರವಾನಗಿ ಹೊಂದಿದ್ದ ಪಾಕ್ ವಿದೇಶಾಂಗ ಸಚಿವ ಖವಾಜಾ ಅಸೀಫ್ ಅವರನ್ನು ಪಾಕಿಸ್ತಾನದ ಕೋರ್ಟ್ ಸಂಸದ ಹಾಗೂ ವಿದೇಶಾಂಗ ಸಚಿವನ ಹುದ್ದೆಯಿಂದ ಅನರ್ಹಗೊಳಿಸಿದೆ.
2013 ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಖವಾಜಾ ಅಸೀಫ್ ಯುಎಇಯಲ್ಲಿ ಕೆಲಸದ ಪರವಾನಗಿ ಹೊಂದಿದ್ದ ವಿಷಯವನ್ನು ಮರೆಮಾಚಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ನಾಯಕ ಉಸ್ಮಾನ್ ದರ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿರುವ ಇಸ್ಲಾಮಾಬಾದ್ ನ ಹೈಕೋರ್ಟ್ ನ ತ್ರಿಸದಸ್ಯ ಪೀಠ ಖವಾಜಾ ಅಸೀಫ್ ಅವರನ್ನು ಹುದ್ದೆಯಿಂದ ಅನರ್ಹಗೊಳಿಸಿದೆ.
ಯುಎಇಯಲ್ಲಿ ಕೆಲಸದ ಪರವಾನಗಿ ಹೊಂದಿರುವುದನ್ನು ಪ್ರಶ್ನಿಸಿದ್ದ ಉಸ್ಮಾನ್ ದರ್, ಸಂವಿಧಾನದ ಪರಿಚ್ಛೇಧ 62 ಹಾಗೂ 63 ಪ್ರಕಾರ ಖವಾಜಾ ಅಸೀಫ್ ಅವರನ್ನು ಅನರ್ಹಗೊಳಿಸಬೇಕೆಂದು ಆಗ್ರಹಿಸಿದ್ದರು. ಪರವಾನಗಿಯ ವಿಷಯವನ್ನು ಮರೆಮಾಚಿರುವ ಖವಾಜಾ ಅಸೀಫ್, ಸಂಸದ ವಿದೇಶಾಂಗ ಸಚಿವನ ಸ್ಥಾನದಲ್ಲಿ ಮುಂದುವರೆಯುವುದಕ್ಕೆ ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪಾಕಿಸ್ತಾನUAEKhawaja Asifವಿದೇಶಾಂಗ ಸಚಿವPakistan Foreign MinisterUAE work permitಖವಾಜಾ ಅಸೀಫ್ಕೆಲಸದ ಪರವಾನಗಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


