ಪರಸ್ಪರ ನಂಬಿಕೆಯ ಕೊರತೆಯಿಂದ ಡೊಕ್ಲಾಮ ಬಿಕ್ಕಟ್ಟು ಉದ್ಬವ - ಚೀನಾ
ಭಾರತ ಮತ್ತು ಚೀನಾ ನಡುವಿನ ಪರಸ್ಪರ ನಂಬಿಕೆಯ ಕೊರತೆಯಿದ ಡೊಕ್ಲಾಮ ಬಿಕ್ಕಟ್ಟು ಉಂಟಾಗಿದೆ ಎಂದು ಚೀನಾದ ಹಿರಿಯ ರಾಯಬಾರಿ ಅಧಿಕಾರಿಯೊಬ್ಬರು ಇಂದು ಹೇಳಿದ್ದಾರೆ.

ಬೀಜಿಂಗ್ : ಭಾರತ ಮತ್ತು ಚೀನಾ ನಡುವಿನ ಪರಸ್ಪರ ನಂಬಿಕೆಯ ಕೊರತೆಯಿದ ಡೊಕ್ಲಾಮ ಬಿಕ್ಕಟ್ಟು ಉಂಟಾಗಿದೆ. ಅನುಕೂಲಕರ ಪರಿಸ್ಥಿತಿ ಸೃಷ್ಟಿಸಿ ಇಬ್ಬರು ಗಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಚೀನಾದ ಹಿರಿಯ ರಾಯಬಾರಿ ಅಧಿಕಾರಿಯೊಬ್ಬರು ಇಂದು ಹೇಳಿದ್ದಾರೆ.
ಈ ವಾರ ನಿಗದಿಯಾಗಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ನಡುವಣ ಔಪಚಾರಿಕ ಸಭೆಯ ಹಿನ್ನೆಲೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಕಳೆದ ವರ್ಷ ಸಿಕ್ಕಿಂ ಬಳಿಯ ಡೋಕ್ಲಾಮ ಬಳಿ ಎರಡು ತಿಂಗಳಿಗೂ ಹೆಚ್ಚು ಕಾಲ ಭಾರತ ಹಾಗೂ ಚೀನಾ ಸೈನಿಕರನ್ನು ನಿಯೋಜಿಸುವ ಮೂಲಕ ಕೆಲಕಾಲ ಪರಿಸ್ಥಿತಿ ಬಿಗಡಾಯಿಸುವಂತಾಗಿತ್ತು.
ಉಭಯ ದೇಶಗಳ ನಡುವಣ ಪರಸ್ಪರ ನಂಬಿಕೆಯ ಕೊರತೆಯೇ ಇದಕ್ಕೆ ಕಾರಣವಾಗಿತ್ತು ಎಂದು ಉಪ ವಿದೇಶಾಂಗ ವ್ಯವಹಾರಗಳ ಸಚಿವ ಕಾಂಗ್ ಕ್ಯೂಂಯ್ ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.
ಭೇಟಿ ವೇಳೆ ಉಭಯ ದೇಶಗಳ ನಾಯಕರು ಈ ಸಮಸ್ಯೆ ಕುರಿತು ಮಾತನಾಡಬೇಕು, ಪರಸ್ಪರ ಸಹಕಾರದ ಮೂಲಕ ಗಡಿಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಪರಸ್ಪರ ನಂಬಿಕೆ ಆಧಾರದ ಮೇಲೆ ಸಮಸ್ಯೆ ಬಗೆಹರಿಸಿಕೊಳ್ಳಲು ಉಭಯ ದೇಶಗಳು ಪ್ರಯತ್ನಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಭೇಟಿ ವೇಳೆ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತಂತೆ ಮಾತುಕತೆ ನಡೆಸಲಿದ್ದಾರೆ. ಕೆಲ ವಿವಾದಗಳನ್ನು ನಂಬಿಕೆಯಿಂದ ಬಗೆಹರಿಸಿಕೊಂಡು ಧೀರ್ಘಕಾಲದ ಸಮಸ್ಯೆಗೆ ಅಂತ್ಯವಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


