ವಿದೇಶ

ಎಸ್‏ಸಿಒ ಶೃಂಗಸಭೆ: ಒನ್ ಬೆಲ್ಟ್ ಮತ್ತು ಒನ್ ರಸ್ತೆ ಯೋಜನೆಗೆ ಭಾರತದ ಬೆಂಬಲ ಪಡೆಯುವಲ್ಲಿ ಚೀನಾ ವಿಫಲ

ಮಹತ್ವಾಕಾಂಕ್ಷಿಯ ಬೆಲ್ಟ್ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ ಭಾರತದ ಬೆಂಬಲ ಪಜೆಯುವಲ್ಲಿ ಚೀನಾ ವಿಫಲವಾಗಿದೆ.

ಎಸ್‏ಸಿಒ ಶೃಂಗಸಭೆ: ಒನ್ ಬೆಲ್ಟ್ ಮತ್ತು  ಒನ್ ರಸ್ತೆ  ಯೋಜನೆಗೆ  ಭಾರತದ ಬೆಂಬಲ ಪಡೆಯುವಲ್ಲಿ ಚೀನಾ ವಿಫಲ
ಸುಷ್ಮಾ ಸ್ವರಾಜ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ
Published On :

ಬೀಜಿಂಗ್ :ಚೀನಾದ  ಮಹತ್ವಾಕಾಂಕ್ಷಿಯ ಒನ್  ಬೆಲ್ಟ್ ಮತ್ತು ಒನ್  ರಸ್ತೆ ಯೋಜನೆಯ ನಿರ್ಮಾಣ ಕಾಮಗಾರಿಗೆ ಭಾರತದ ಬೆಂಬಲ ಪಡೆಯುವಲ್ಲಿ  ಚೀನಾ ವಿಫಲವಾಗಿದೆ. 

ಇಂದು ಅಂತ್ಯಗೊಂಡ ವಿದೇಶಾಂಗ ಸಚಿವರ ಸಭೆಯಲ್ಲಿ ಈ ಸಂಬಂಧ ಒಮ್ಮತ ಮೂಡದಿರಲು  ಮುಂದಿನ ವಾರ ಪ್ರಧಾನಿ ನರೇಂದ್ರಮೋದಿ ಚೈನಾಕ್ಕೆ ಕೈಗೊಂಡಿರುವ ಪ್ರವಾಸದ ಮೇಲೂ ಕಾರ್ಮೋಡ ಆವರಿಸಿದೆ.

ಏಷ್ಯಾ ಮತ್ತು ಸುತ್ತಮುತ್ತಲಿನ ರಾಷ್ಟ್ರಗಳನ್ನು ಚೀನಾದೊಂದಿಗೆ ಸಂಪರ್ಕಿಸುವ ಈ ಯೋಜನೆಯ  ಕಾಮಗಾರಿಗೆ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಶಂಕುಸ್ಥಾಪನೆ ನೆರವೇರಿಸಿದ್ದರು. 

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸುಮಾರು 57 ಬಿಲಿಯನ್  ಅಮೆರಿಕನ್ ಡಾಲರ್ ವೆಚ್ಚದ ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ ಸಾಗುವುದರಿಂದ ಭಾರತ ಉದ್ದೇಶಿತ ಒಪ್ಪಂದಕ್ಕೆ ಸಹಿ ಹಾಕಿಲ್ಲ.

ಪ್ರಧಾನಿ ನರೇಂದ್ರಮೋದಿ ಶುಕ್ರವಾರ ಮತ್ತು ಶನಿವಾರ ಚೀನಾಕ್ಕೆ ಭೇಟಿ ನೀಡುತ್ತಿದ್ದು, ಕ್ಸಿ- ಜಿನ್ ಪಿಂಗ್ ಅವರೊಂದಿಗಿನ ಸಭೆಯಲ್ಲಿ ಬೆಲ್ಟ್ ಮತ್ತು ರಸ್ಕೆ ಕಾಮಗಾರಿಗೆ ಸಹಿ ಪಡೆಯಲುಬಹುದು ಅಥವಾ ಪಡೆಯದೇ ಇರಬಹುದು ಎನ್ನಲಾಗಿದೆ.

ಆದರೆ. ಬೀಜಿಂಗ್ ನಲ್ಲಿ ಇಂದು ನಡೆದ ಶಾಂಘೈ ವಿದೇಶಾಂಗ ಸಚಿವರ ಮಟ್ಟದ  ಶೃಂಗಸಭೆಯಲ್ಲಿ ಚೀನಾದ ಬೆಲ್ಟ್ ಮತ್ತು ರಸ್ತೆ ಕಾಮಗಾರಿಗೆ ಭಾರತದ ವಿದೇಶಾಂಗ ಸಚಿವರು  ಬೆಂಬಲ ನೀಡಿಲ್ಲ. ಭಾರತದ ಜೊತೆಗೂ ಪಾಕಿಸ್ತಾನವು ಕಳೆದ ವರ್ಷವಷ್ಟೇ ಈ ಗುಂಪನ್ನು ಸೇರಿದೆ.

ಚೀನಾದ ಬೆಲ್ಟ್ ಮತ್ತ ರಸ್ತೆ ಪ್ರಸ್ತಾವಕ್ಕೆ ರಷ್ಯಾ, ಪಾಕಿಸ್ತಾನ, ಕಜಕೀಸ್ತಾನ್, ತಾಜಕಿಸ್ತಾನ್, ಉಜ್ಬೇಕಿಸ್ತಾನ್, ಮೊದಲಾದ ರಾಷ್ಟ್ರಗಳ ವಿದೇಶಾಂಗ ಸಚಿವರು ಬೆಂಬಲ ನೀಡಿರುವುದಾಗಿ ತಿಳಿದುಬಂದಿದೆ.

 ಮೋದಿ ಚೀನಾಕ್ಕೆ ಭೇಟಿ ನೀಡಲಿದ್ದು, ಉಭಯ ದೇಶಗಳ ನಡುವನ ದ್ವೀಪಕ್ಷೀಯ ಬಾಂಧವ್ಯ ವೃದ್ದಿ ಸಂಬಂಧ ಹಲವು ಒಪ್ಪಂದವೇರ್ಪಡುವ ಸಾಧ್ಯತೆ ಇದೆ.  ಕಳೆದ ವರ್ಷ ಏಷ್ಯಾದ ದಿಗ್ಗಜ ರಾಷ್ಟ್ರಗಳು ಗಡಿಯಲ್ಲಿ  73 ದಿನಗಳ ಕಾಲ ಸೇನೆಯನ್ನು ನಿಯೋಜಿಸುವ ಮೂಲಕ ಪರಸ್ಪರ ಕಲ್ಲು ತೂರಾಟ ನಡೆಸಿದ್ದರು.

 ಮೋದಿ ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜೂನ್ ತಿಂಗಳಲ್ಲಿ ಚೀನಾ ಭೇಟಿ ನೀಡಲಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಚೀನಾ ಕೂಡಾ ಪಾಕಿಸ್ತಾನದೊಂದಿಗೆ ಸಂಪರ್ಕವನ್ನು ತಡೆಯುವ ಪ್ರಯತ್ನ ನಡೆಸುತ್ತಿದೆ.






Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.