ಭಾರತ ಬಳಸುತ್ತಿರುವ ರಷ್ಯಾದ ಯುದ್ಧ ಟ್ಯಾಂಕರ್ ಮೇಲೆ ಪಾಕಿಸ್ತಾನ ಕಣ್ಣು
ರಷ್ಯಾದ ಯುದ್ದ ವಿಮಾನ, ಟ್ಯಾಂಕರ್ ಹಾಗೂ ರಕ್ಷಣಾ ವ್ಯವಸ್ಥೆ ಸೇರಿದಂತೆ ಸುಸಜ್ಜಿತ ಶಸ್ತ್ರಾಸ್ತ್ರಗಳ ಮೇಲೆ ಪಾಕಿಸ್ತಾನ ಕಣ್ಣಿಟ್ಟಿದ್ದು, ಅವುಗಳನ್ನು ಕೊಂಡೊಕೊಳ್ಳಲು ಉತ್ಸುಕವಾಗಿದೆ.

ಇಸ್ಲಾಮಾಬಾದ್ : ರಷ್ಯಾದ ಯುದ್ದ ವಿಮಾನ, ಟ್ಯಾಂಕರ್ ಹಾಗೂ ಅತ್ಯಾಧುನಿಕ ರಕ್ಷಣಾ ಸಾಧನ ಕಲಕರಣೆಗಳ ಮೇಲೆ ಪಾಕಿಸ್ತಾನ ಕಣ್ಣಿಟ್ಟಿದ್ದು, ಅವುಗಳನ್ನು ಕೊಂಡೊಕೊಳ್ಳಲು ಉತ್ಸುಕವಾಗಿದೆ.
ಮಾಸ್ಕೊದಿಂದ ಯುದ್ದೋಪಕರಣಗಳನ್ನು ಕೊಂಡೊಕೊಳ್ಳಲು ಪಾಕಿಸ್ತಾನ ಆಸಕ್ತಿ ಹೊಂದಿದೆ ಎಂದು ರಕ್ಷಣಾ ಸಚಿವೆ ಕುರಾಮ್ ಡಾಸ್ಟ್ ಗಿರ್ ಖಾನ್ ರಷ್ಯಾದ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸ್ಪಷ್ಪಪಡಿಸಿದ್ದಾರೆ.
ರಷ್ಯಾದಲ್ಲಿನ ವಿಭಿನ್ನ ಪ್ರಕಾರದ ವಾಯು ರಕ್ಷಣಾ ವ್ಯವಸ್ಥೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ಮಾತುಕತೆ ಬಳಿಕ ಘೋಷಣೆ ಮಾಡಲಾಗುವುದು ಎಂದು ಖಾನ್ ಹೇಳಿದ್ದಾರೆ. ಅಲ್ಲದೇ, ಟಿ-90 ಟ್ಯಾಂಕರ್ ಕೊಂಡುಕೊಳ್ಳಲು ಸಹ ಪಾಕಿಸ್ತಾನ ಉತ್ತುಕವಾಗಿರುವುದಾಗಿ ಅವರು ತಿಳಿಸಿದ್ದಾರೆ.
ಭಾರತ ಕೂಡಾ ಈ ಟಿ-90 ಟ್ಯಾಂಕ್ ಬಳಸುತ್ತಿದೆ. ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ಕೊಳ್ಳಲು ಭಾರತ ಈಗಾಗಲೇ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಎಸ್ -400 ಟ್ರಯಂಪ್, ಕ್ಷಿಪಣಿ ನಿರೋಧಕ ರಕ್ಷಣಾ ಸಾಧನ ಕೊಳ್ಳಳು ಪ್ರಧಾನಿ ನರೇಂದ್ರಮೋದಿ 2016 ಅಕ್ಟೋಬರ್ ನಲ್ಲಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಇದು ವಿಶ್ವದಲ್ಲಿಯೇ ಅತಿ ಉದ್ದದ ರಕ್ಷಣಾ ಕ್ಷಿಪಣಿಯಾಗಿದ್ದು, 400 ಕಿಲೋ ಮೀಟರ್ ವರೆಗೂ ದೂರ ಸಾಗಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


