ವಿದೇಶ

ಯೂಟ್ಯೂಬ್ ಪ್ರಧಾನ ಕಚೇರಿ ಮೇಲೆ ಗುಂಡಿನ ದಾಳಿ: ಹಲವರಿಗೆ ಗಾಯ

ಕ್ಯಾಲಿಫೋರ್ನಿಯಾದ ಸ್ಯಾನ್'ಬರ್ನೋದಲ್ಲಿರುವ ಯೂಟ್ಯೂಬ್ ಪ್ರಧಾನ ಕಚೇರಿ ಮೇಲೆ ಮುಸುಕುಧಾರಿ ಮಹಿಳೆಯೊಬ್ಬರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಹಲವರಿಗೆ ಗಾಯವಾಗಿರುವ ಘಟನೆ ಬುಧವಾರ ನಡೆದಿದೆ...

ಯೂಟ್ಯೂಬ್ ಪ್ರಧಾನ ಕಚೇರಿ ಮೇಲೆ ಗುಂಡಿನ ದಾಳಿ: ಹಲವರಿಗೆ ಗಾಯ
ಸಂಗ್ರಹ ಚಿತ್ರ
Published On :
ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಸ್ಯಾನ್'ಬರ್ನೋದಲ್ಲಿರುವ ಯೂಟ್ಯೂಬ್ ಪ್ರಧಾನ ಕಚೇರಿ ಮೇಲೆ ಮುಸುಕುಧಾರಿ ಮಹಿಳೆಯೊಬ್ಬರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಹಲವರಿಗೆ ಗಾಯವಾಗಿರುವ ಘಟನೆ ಬುಧವಾರ ನಡೆದಿದೆ. 
ರಾತ್ರಿ 12.45ರ ಸುಮಾರಿಗೆ ಕಚೇರಿ ಬಳಿ ಬಂದಿರುವ ಮುಸುಕುಧಾರಿ ಮಹಿಳೆ ಒಳ ಪ್ರವೇಶಿಸುತ್ತಿದ್ದಂತೆಯೇ ಏಕಾಏಕಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾಳೆ. ಇದರಿಂತ ಭೀತಿಗೊಳಗಾದ ಸಿಬ್ಬಂದಿಗಳೂ ಕೂಡಲೇ ಪೊಲೀಸರಿಹೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದಾರೆ. ಮನಬಂದಂತೆ ಗುಂಡಿನ ದಾಳಿ ನಡೆಸಿದ್ದ ಮಹಿಳೆ ಭದ್ರತಾ ಸಿಬ್ಬಂದಿಗಳು ಸ್ಥಳಕ್ಕಾಗಮಿಸುತ್ತಿದ್ದಂತೆಯೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾಳೆಂದು ವರದಿಗಳು ತಿಳಿಸಿವೆ. 
ಇನ್ನು ಮಹಿಳೆಯ ನಡೆಸಿದ ಗುಂಡಿನ ದಾಳಿಯಲ್ಲಿ ಕಚೇರಿಯೊಳಗಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ಹಿಂದ ಭಯೋತ್ಪಾದಕರ ಕೈವಾಡ ಸಾಧ್ಯತೆಗಳು ಕಂಡು ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.