ಪಾಕಿಸ್ತಾನ ಈಗ 'ಟೆರರಿಸ್ತಾನ', ಉಗ್ರರನ್ನು ರಫ್ತು ಮಾಡುವ ಉದ್ಯಮದಲ್ಲಿ ಅದು ಸದಾ ಮುಂದು: ವಿಶ್ವಸಂಸ್ಥೆಯಲ್ಲಿ ಭಾರತ
ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಕಾಶ್ಮೀರಕ್ಕಿಂತ ಮೊದಲು ಪಾಕಿಸ್ತಾನ ತನ್ನ ನೆಲದ ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕುವ ವಿಚಾರದ ಕುರಿತು ಮೊದಲು...

Published On :
ಜಿನೀವಾ: ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಕಾಶ್ಮೀರಕ್ಕಿಂತ ಮೊದಲು ಪಾಕಿಸ್ತಾನ ತನ್ನ ನೆಲದ ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕುವ ವಿಚಾರದ ಕುರಿತು ಮೊದಲು ಗಮನಹರಿಸಲಿ ಎಂದು ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ.
ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಕೌನ್ಸಿಲ್ ಆನ್ ಫಾರೀನ್ ರಿಲೇಶನ್ಸ್ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪಾಕಿಸ್ತಾನ ಪ್ರಧಾನಿ ಶಾಹೀದ್ ಖಾನ್ ಅಬ್ಬಾಸಿ ಅವರು ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದ್ದರು.
ಇದಕ್ಕೆ ಇಂದು ತಿರುಗೇಟು ನೀಡಿರುವ ಭಾರತದ ವಿಶ್ವಸಂಸ್ಥೆಯ ಮೊದಲ ಕಾರ್ಯದರ್ಶಿ ಯೆನಾಮ್ ಗಂಭೀರ್ ಅವರು, "ಪಾಕಿಸ್ತಾನ ಭೌಗೋಳಿಕವಾಗಿ ಉಗ್ರವಾದದ ಸಮನಾರ್ಥಕವಾಗಿ ಗುರುತಿಸಿಕೊಂಡಿದೆ. ಅದೀಗ ''ಟೆರರಿಸ್ಥಾನ್'' ಆಗಿದ್ದು, ಉಗ್ರರ ಕಾರ್ಖಾನೆಗಳಲ್ಲಿ ಉಗ್ರರನ್ನು ಉತ್ಪಾದನೆ ಮಾಡಿ ಜಗತ್ತಿಗೆ ರಫ್ತು ಮಾಡುತ್ತಿದೆ" ಎಂದು ಕಿಡಿ ಕಾರಿದ್ದಾರೆ. "ಒಸಮಾ ಬಿನ್ ಲಾಡೆನ್, ಮುಲ್ಲಾ ಓವರ್ ಗೆ ರಕ್ಷಣೆ ನೀಡಿದ ದೇಶ, 26/11 ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಪಾಕಿಸ್ತಾನದಲ್ಲಿ ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ. ಜಾಗತಿಕ ಉಗ್ರರನ್ನು ಉತ್ಪಾದಿಸುವುದು ಪಾಕಿಸ್ತಾನದ ಮುಖ್ಯ ಗುರಿಯಾಗಿದ್ದು, ಉಗ್ರರಿಗೆ ಸುರಕ್ಷಿತ ತಾಣಗಳನ್ನು ನೀಡುತ್ತಿದೆ. ಉಗ್ರ ಸಂಘಟನೆಗಳ ಮುಖಂಡರು ಪಾಕ್ ಮಿಲಿಟರಿ ಮತ್ತು ರಾಜಕಾರಣಿಗಳೊಂದಿಗೆ ಉತ್ತಮ ನಂಟು ಹೊಂದಿದ್ದಾರೆ" ಎಂದು ಪಾಕ್ ಮಾನ ಹರಾಜು ಹಾಕಿದ್ದಾರೆ.
ಅಂತೆಯೇ "ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದರ ಸ್ಥಾನಮಾನ ಹಾಗೆಯೇ ಮುಂದುವರೆಯಲಿದೆ. ಬೀದಿಗಳಲ್ಲಿ ಉಗ್ರರನ್ನು ರಾಜಾರೋಷವಾಗಿ ಅಲೆಯಲು ಬಿಟ್ಟು, ವಿಶ್ವಾದ್ಯಂತ ಉಗ್ರರ ಹಾವಳಿ ಹೆಚ್ಚಾಗುವಂತೆ ಮಾಡಿರುವ ದೇಶದಿಂದ ಭಾರತಕ್ಕೆ ಮಾನವ ಹಕ್ಕುಗಳ ರಕ್ಷಣೆಯ ಪಾಠ ಬೇಕಿಲ್ಲ. ತನ್ನ ನೆಲದ ಮಾನವ ಹಕ್ಕು ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹರಸಾಹಸ ಪಜಡುತ್ತಿರುವ ರಾಷ್ಟ್ರ ವಿಶ್ವದ ಪ್ರಜಾ ಪ್ರಭುತ್ವ ಹಾಗೂ ಮಾನವ ಹಕ್ಕು ರಕ್ಷಣೆ ಕುರಿತಂತೆ ಮಾತನಾಡುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಜಾಗತಿಕ ಭಯೋತ್ಪಾದನೆಯಲ್ಲಿ ಪಾಕಿಸ್ತಾನ ಮೂಲದ ಉಗ್ರರ ಪಾತ್ರ ಗಣನೀಯವಾಗಿದ್ದು, ಪಾಕಿಸ್ತಾನ ಮೊದಲು ತನ್ನ ನೆಲದ ಉಗ್ರರನ್ನು ನಿಯಂತ್ರಿಸುವ ತಾಕತ್ತು ಪಡೆಯಬೇಕಿದೆ. ಆ ಮೂಲಕ ಪಾಕಿಸ್ತಾನ ಟೆರರಿಸ್ತಾನ ಅಲ್ಲ ಎಂಬುದನ್ನು ವಿಶ್ವಕ್ಕೆ ತೋರಿಸಬೇಕಿದೆ" ಎಂದು ಭಾರತ ಹೇಳಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.