ಜಗತ್ತು ಏನು ಬೇಕಾದರೂ ತಿಳಿಯಲಿ, ದೇಶದ ರಕ್ಷಣೆ ಮುಖ್ಯ: ರೊಹಿಂಗ್ಯಾ ಮುಸ್ಲಿಮರ ಕುರಿತು ಮೌನ ಮುರಿದ ಸೂಕಿ
ಮಯನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ತನ್ನ ಮೊದಲ ಭಾಷಣದಲ್ಲಿ ರಾಖೈನ್ ರಾಜ್ಯದಲ್ಲಿ ಉಂಟಾಗಿರುವ ರೋಹಿಂಗ್ಯಾ ಬಿಕ್ಕಟ್ಟನ್ನು ಉದ್ದೇಶಿಸಿ ಮಾತನಾಡಿದ್ದಾರೆ.

Published On :
ನೇಪಿಡಾ: ರೊಹಿಂಗ್ಯಾ ಜಗತ್ತಿನ ದೃಷ್ಟಿಕೋನ ಏನೇ ಇರಲಿ..ಆದರೆ ನಮಗೆ ದೇಶದ ರಕ್ಷಣೆ ಮುಖ್ಯ ಎಂದು ಮಯನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ಮಂಗಳವಾರ ಹೇಳಿದ್ದಾರೆ.
ರೊಹಿಂಗ್ಯಾ ಮುಸ್ಲಿಮರ ಸಾಮೂಹಿಕ ಪಲಾಯನ ಕುರಿತಂತೆ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಸೂಕಿ ಟಿವಿಮಾಧ್ಯಮದಲ್ಲಿ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದರು.
"4 ಲಕ್ಷ ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ. ಜನಾಂಗೀಯ ಸಮಸ್ಯೆಯಿಂದ ನಮ್ಮ ರಾಷ್ಟ್ರಕ್ಕೆ ಜಾಗತಿಕವಾಗಿ ಕೆಟ್ಟ ಹೆಸರು ಬರುತ್ತಿದೆ" ಎಂದಿದ್ದಾರೆ.
ಮಯನ್ಮಾರ್ ನಿಂದ ಪಲಾಯನ ಮಾಡಿದ 410,000 ರೋಹಿಂಗ್ಯಾ ಮುಸ್ಲಿಮರಲ್ಲಿ ಎಷ್ಟು ಮಂದಿ ದೇಶಕ್ಕೆ ಮರಳಲಿದ್ದಾರೆಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಮಯನ್ಮಾರ್ ಅಲ್ಲಿ ವಾಸಿಸಲು ಬಯಸುವ ಮುಸ್ಲಿಂ ಜನಾಂಗದ ಹಕ್ಕುಗಳ ವಿಷಯದಲ್ಲಿ ವಿನಾಶಕಾರಿ ಚರ್ಚೆಗೆ ಈಗ ನಮ್ಮ ದೇಶ ಗ್ರಾಸವಾಗಿದೆ.
ಮಯನ್ಮಾರ್ ಸೈನ್ಯವು ಈ ಹಿಂದೆ ಭಯೋತ್ಪೊಆದಕರೊದನೆ ನಂಟು ಹೊಂದಿದ್ದ ರೋಹಿಂಗ್ಯಾಗಳನ್ನು ದೇಅದಿಂದ ಹೊರ್ದೂಡುವುದಾಗಿ ಹೇಳಿತ್ತು. ಆದರೆ ನಾವೆಲ್ಲಿಯೂ ರೋಹಿಂಗ್ಯಾಗಳನ್ನು ರಾಷ್ಟ್ರದಿಂದ ಹೊರಹಾಕುತ್ತೇವೆ ಎಂಡು ಅಧಿಕೃತ ಹೇಳಿಕೆ ನೀಡಿರಲಿಲ್ಲ.
ಆದರೆ ವಿಶ್ವ ಸಂಸ್ಥೆಯು ಮಾಯನ್ಮಾರ್ ರೋಹಿಂಗ್ಯಾ ಹಳ್ಳಿಗಳ ಮೇಲೆ ವಿನಾಕಾರಣ ಸೈನಿಕರನ್ನು ನುಗ್ಗಿಸಿ ಅವರನ್ನು ಹಳ್ಳಿಯಿಂದ ಓಡಿಸಿದ್ದಲ್ಲದೆ ಅವರ ಗುಡಿಸಲನ್ನು, ವಸತಿಯನ್ನೂ ನಾಶಪಡಿಸಿದೆ ಎಂಡು ಆರೋಪಿಸಿದೆ.
ಕಳೆದ ಆಗಸ್ಟ್ ನಲ್ಲಿ ಯಾರು ಭಯೋತ್ಪಾದಕರೊದನೆ ಸಂಪರ್ಕ ಹೊಂದಿದ್ದರೋ ಅಂತಹಾ ರೋಹಿಂಗ್ಯಾ ಮುಸ್ಲೀಮರ ವಸತಿ ಮೇಲೆ ಸೈನ್ಯ ದಾಳಿ ನಡೆಸಿತ್ತು.
ಈ ಧಾಳಿಯಿಂದ ನೊಂದ ಸಾವಿರಾರು ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು ಮತ್ತು ವಿಶ್ವದ ಅತಿ ದೊಡ್ಡ ನಿರಾಶ್ರಿತರ ಶಿಬಿರದಲ್ಲಿ ಒಂದಾದ ರೋಹಿಂಗ್ಯಾ ನಿರಾಶ್ರಿತರ ಶಿಬಿರವು ಅಲ್ಲಿ ನಿರ್ಮಾಣವಾಗಿದೆ
ಇನ್ನು 30,000 ಜನಾಂಗೀಯ ರಾಖೈನ್ ನ ಬೌದ್ಧರು ಮತ್ತು ಹಿಂದೂಗಳು ಕೂಡ ಪಲಾಯನ ಮಾಡಿದ್ದಾರೆ- ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಎಆರ್ ಎಸ್ಎ) ಆಗಸ್ಟ್ 25ರ ದಾಳಿಯಲ್ಲಿ ಮಾಯನ್ಮಾರ್ ಸೈನ್ಯದ ಸ್ಪಷ್ಟ ಗುರಿ ಆಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
MyanmarAung San Suu Kyiಆಂಗ್ ಸಾನ್ ಸೂಕಿಮಾಯನ್ಮಾರ್Rohingya crisisSuu Kyi Rohingya speechSuu Kyi speechರೋಹಿಂಗ್ಯಾ ಬಿಕ್ಕಟ್ಟುಸೂಕಿ ರೋಹಿಂಗ್ಯಾ ಭಾಷಣಸೂಕಿ ಭಾಷಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


